ಯಾದಗಿರಿ: ರಾಜ್ಯ ಸರ್ಕಾರದ ಮಹತ್ವದ ಬಜೆಟ್ ಜನಪರ ಮತ್ತು ಜೀವಪರವಿದ್ದು, ಸರ್ಕಾರದ ನಡೆ ಜನರ ಕಡೆ ಎಂಬ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಸ್.ಬಿ.ಕಾಮರಡ್ಡಿ ತಿಳಿಸಿದಾರೆ.
ಪತ್ರೀಕಾ ಪ್ರಕಟಣೆ ಹೊರಡಿಸಿರುವ ಅವರು ವಿಶೇಷವಾಗಿ ಸಮಸ್ತ ಯಾದಗಿರಿ ಜಿಲ್ಲೆ ಜನರ ಆರೋಗ್ಯ ದೃಷ್ಟಿಯಿಂದ ಯಿಮ್ಸ್ ಆವರಣದಲ್ಲಿ 200 ಹಾಸಿಗೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡಿದ್ದು ಐತಿಹಾಸಿಕವಾಗಿದೆ. ಪ್ರಮುಖ ಬೇಡಿಕೆಯಾಗಿದ್ದ ಯಾದಗಿರಿ ನಗರಕ್ಕೆ ಯುಡಿಜಿ ಕಾಮಗಾರಿ ಮಂಜೂರು ಮಾಡಿದ್ದು ಸಹ ಈ ಸರ್ಕಾರ ಗಿರಿಜಿಲ್ಲೆಗೆ ಕೊಟ್ಟ ದೊಡ್ಡ ಕಾಣಿಕೆಯಾಗಿದೆ.
ರಾಜ್ಯ ಬಜೆಟ್ ನಿಂದ ಯಾದಗಿರಿಗೆ ದೊರಕಿದ್ದು ಜಿಲ್ಲೆಯ ಕಕ್ಕೇರಾದಲ್ಲಿ 18 ಕೋಟಿ ರೂ ವೆಚ್ಚದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಅನುದಾನ.
100 ಕೋಟಿ ರೂಗಳ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಸ್ತು. ಬಹು ನಿರೀಕ್ಷಿತ ಯಾದಗಿರಿ ನಗರಕ್ಕೆ ಒಳ ಚರಂಡಿ ಘೋಷಣೆ (ಅಂದಾಜು 200ಕೋಟಿ). ಯಾದಗಿರಿ ಜಿಲ್ಲೆಯಲ್ಲಿ ತಾರಾಲಯ ಸ್ಥಾಪನೆಗೆ ಅನುದಾನ ಹಂಚಿಕೆ .ಜಿಲ್ಲೆಯ ಕರ್ನಾಳ್ ಏತ ನೀರಾವರಿ ಯೋಜನೆಗೆ ಒತ್ತು.ಜಿಲ್ಲೆಯ ಸಣ್ಣ ನೀರಾವರಿ ಕಾಮಗಾರಿಗಳಿಗೆ ಅನುದಾನ.ಕಕ್ಕೇರಾದಲ್ಲಿ ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ಬಜೆಟ್ ನಲ್ಲಿ ಘೋಷಣೆ ಆಗಿದೆ ಎಂದು ತಿಳಿಸಿದರು.