A poet who worked hard to build an equal society 
ರಾಜ್ಯ

ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ವಚನಕಾರ

ಶಿರಾ: ಬಸವಣ್ಣನವರು 12ನೇ ಶತಮಾನದಲ್ಲಿ ವೈದಿಕ ಆಚರಣೆ ಮೆಟ್ಟಿನಿಂತು ಸಂಸತಕ್ಕೆ ಬದಲಾಗಿ ಕನ್ನಡದಲ್ಲಿ ವಚನ ಬರೆಯುತ್ತಾರೆ. ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ ದೂರ ಮಾಡಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು ಉಪನ್ಯಾಸ ನೀಡಿದ ಉಪನ್ಯಾಸಕ ಮಲ್ಲಿಕಾರ್ಜುನ್​ ಹೇಳಿದರು.
ತಾಲೂಕು ಆಡಳಿತದಿಂದ ನಗರದ ಮಿನಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣನವರ ಜಯಂತಿಯಲ್ಲಿ ಮಾತನಾಡಿ, 8ನೇ ವಯಸ್ಸಿನಲ್ಲಿಯೇ ಗಂಡು ಮತ್ತು ಹೆಣ್ಣಿನ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿ ಮನೆ ಬಿಟ್ಟು ಕೂಡಲಸಂಗಮ ಸೇರುತ್ತಾರೆ. ಅವರ ತತ್ವಾದರ್ಶ ಇಂದಿಗೂ ಮಾದರಿಯಾಗಿವೆ ಎಂದರು.
ತಹಸೀಲ್ದಾರ್​ ಆನಂದ್​ ಕುಮಾರ್​ ಮಾತನಾಡಿ, ಬಸವಣ್ಣನವರು ವಿಶ್ವ ಮಾನವ ಸಂದೇಶ ಸಾರಿದವರು. ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ಮಾದರಿಯಾಗಿವೆ. ಬಸವಣ್ಣನವರು ಕೇವಲ ವಚನಕಾರರಲ್ಲ ಅವರು ತತ್ವಾನಿಗಳು ಎಂದರು.