ಸೇಡಂನಲ್ಲಿ ಆಯೋಜಿಸಿದ್ದ ಎಸ್​ಐಆರ್​ ಕುರಿತು ಬಿಎಲ್​ಎ&2ಗಳ ಕಾರ್ಯಾಗಾರದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಮಾತನಾಡಿದರು. ಪೃಥ್ವಿರಾಜ್​ ಮಂಡ್ಯ, ಮಹಾಂತಪ್ಪ ಸಂಗಾವಿ, ಸತೀಶರೆಡ್ಡಿ ಪಾಟೀಲ್​ ರಂಜೋಳ, ಜೈಭೀಮ ಊಡಗಿ ಇದ್ದರು. 
ರಾಜ್ಯ

ಎಸ್​ಐಆರ್​ನಿಂದ ಮತ ಹಕ್ಕು ಕಸಿಯುವ ಹುನ್ನಾರ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಎಚ್ಚರಿಕೆ
  • ಸೇಡಂನಲ್ಲಿ ಕಾಂಗ್ರೆಸ್​ನಿಂದ ಬಿಎಲ್​ಎ-2ಗಳ ಕಾರ್ಯಾಗಾರ
ಸೇಡಂ: ಕೇಂದ್ರ ಸರ್ಕಾರ ಚುನಾವಣೆ ಆಯೋಗದಿಂದ ಎಸ್​ಐಆರ್​ ಎನ್ನುವ ನೆಪದಲ್ಲಿ ಮತ ಹಕ್ಕು ಕಸಿದುಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ನಿಜವಾದ ಮತದಾರರು ಪಟ್ಟಿಯಿಂದ ಬಿಟ್ಟು ಹೋಗದಂತೆ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಕೆಎನ್​ಜೆಡ್​ ಪಂಕ್ಷನ್​ ಹಾಲ್​ನಲ್ಲಿ ಕಾಂಗ್ರೆಸ್​ ಪಕ್ಷದಿಂದ ಬುಧವಾರ ಆಯೋಜಿಸಿದ್ದ ಎಸ್​ಐಆರ್​ ನಿಮಿತ್ತ ಬಿಎಲ್​ಎ-2ಗಳ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿ, ಬೂತ್​ ಲೆವಲ್​ ಏಜೆಂಟರ್​ ಬೂತ್​ ಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಅರ್ಹರ ಮತ ಬಿಟ್ಟು ಹೋಗುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ನಾನಾ ನಿಯಮ ಚುನಾವಣೆ ಆಯೋಗ ತಂದಿದೆ. ರಾಹುಲ್​ ಗಾಂಧಿ ಅವರು ಬಿಜೆಪಿ ವೋಟ್​ ಚೋರಿ ಬಗ್ಗೆ ಧ್ವನಿ ಎತ್ತಿದ್ದರು, ಇದು ಸಹ ಅದರ ಭಾಗವೇ ಆಗಿದೆ. ಈಗಾಗಲೇ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಕೇರಳ, ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಇಲ್ಲದ ನೆಪ ಹೇಳಿ ಕೈಬಿಡಲಾಗಿದೆ. ಹೀಗಾಗಿ ಬೂತ್​ ಮಟ್ಟದ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ಯಾವುದೇ ಕಾರಣಕ್ಕೂ ಅಸಡ್ಡೆ ತೋರದೆ ಜಾಗೃತಿಯಿಂದ ಅರ್ಜಿಯನ್ನು ತುಂಬಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್​ ಎಸ್​ಐಆರ್​ ಜಾಗೃತಿ ಸಮಿತಿ ಸದಸ್ಯ ಪೃಥ್ವಿರಾಜ ಮಾತನಾಡಿದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಅಲ್ಟ್ರಾಟೆಕ್​ ಸಿಮೆಂಟ್​ ಕಾರ್ಮಿಕರ ಸಂದ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್​ ರಂಜೋಳ, ಮುಧೋಳ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರವೀಂದ್ರ ನಂದಿಗಾಮ, ಎಸ್ಸಿ ಟಕದ ತಾಲೂಕು ಅಧ್ಯಕ್ಷ ಜೈಭೀಮ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್​ ಬೊಮ್ನಳ್ಳಿ, ಪ್ರಮುಖರಾದ ಲಿಂಗಶೆಟ್ಟಿ ತಟ್ಟೆಡಪಲ್ಲಿ, ಸತೀಶ ಪೂಜಾರಿ, ಜಗನ್ನಾಥ ಚಿಂತಪಳ್ಳಿ, ಲಲಿತಾ ಯಾಕಾಪುರ, ಮಹ್ಮದ್​ಗೌಸ್​, ಬಾಬಾ ಲಿಂಗಂಪಲ್ಲಿ ಇತರರಿದ್ದರು.