ಕಲಬುರಗಿ ಮಾನಕರ್​ ಲೇಔಟ್​ನಲ್ಲಿರುವ ಬಿಸಿಲು ಆರ್ಟ್​ ಗ್ಯಾಲರಿಯಲ್ಲಿ ಹವ್ಯಾಸಿ ಚಿತ್ರಕಲಾವಿದ ಶರಣಬಸಪ್ಪ ಬಗಲಿ ಅವರ ವಾಟರ್​ ಕಲರ್​, ಸ್ಕೆಚ್​ ಮತ್ತು ಪೇಂಟಿಂಗ್ಸ್​ಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಡಾ.ಶಾಂತಲಾ ನಿಷ್ಠಿ ಭಾನುವಾರ ಉದ್ಘಾಟಿಸಿದರು. ಜಿತೇಂದ್ರ ಕೋಥಳಿಕರ್​, ಜೆ.ಎಸ್​.ಖಂಡೇರಾವ್​, ವಿ.ಬಿ.ಬಿರಾದಾರ್​, ನಾರಾಯಣ ಜೋಶಿ ಇತರರಿದ್ದರು. 
ರಾಜ್ಯ

ಪ್ರತಿಭೆ ಅನಾವರಣಕ್ಕೆ ಪ್ರದರ್ಶನ ವೇದಿಕೆ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
 ಕಲಬುರಗಿ: ಚಿತ್ರಕಲೆಗೆ ತುಂಬಾ ಬೆಲೆ ಇದೆ. ಹವ್ಯಾಸಿ ಕಲಾವಿದರು ಕಲಾಕೃತಿ ರಚಿಸಿ ಪ್ರದರ್ಶನ ಮತ್ತು ಮಾರಾಟ ಮಾಡಬೇಕು. ಕಲಾಪ್ರದರ್ಶನ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು ಎಂದು ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಫೈನ್​ ಆರ್ಟ್​ ವಿಭಾಗದ ಮುಖ್ಯಸ್ಥೆ ಡಾ.ಶಾಂತಲಾ ನಿಷ್ಠಿ ಹೇಳಿದರು.
ಕಲಬುರಗಿ ಮಾನಕರ್​ ಲೇಔಟ್​ನಲ್ಲಿರುವ ಬಿಸಿಲು ಆರ್ಟ್​ ಗ್ಯಾಲರಿಯಲ್ಲಿ ಕಲಬುರಗಿಯ ಹವ್ಯಾಸಿ ಚಿತ್ರಕಲಾವಿದ ಶರಣಬಸಪ್ಪ ಬಗಲಿ ಅವರ ವಾಟರ್​ ಕಲರ್​, ಸ್ಕೆಚ್​ ಮತ್ತು ಪೇಂಟಿಂಗ್ಸ್​ಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಒಬ್ಬ ಕಲಾವಿದ ತನ್ನ ಚಿತ್ರಕಲೆಗಳನ್ನು ಪ್ರದರ್ಶನ ಮೂಲಕ ಜನಮಾನಸಕ್ಕೆ ತಲುಪಿಸಬೇಕು. ಜತೆಗೆ ಮಾರಾಟದೊಂದಿಗೆ ಒಂದಿಷ್ಟು ಆರ್ಥಿಕ ಸದೃಢತೆ ಹೊಂದಬೇಕು. ಕಲ್ಯಾಣ ಕರ್ನಾಟಕದಲ್ಲಿ ಚಿತ್ರಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಎನ್​.ವಿ.ಪದವಿ ಮಹಾವಿದ್ಯಾಲಯ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಜಿತೇಂದ್ರ ಕೋಥಳಿಕರ್​ ಮಾತನಾಡಿ, ಶರಣಬಸಪ್ಪಾ ಅವರು ಹವ್ಯಾಸಿ ಕಲಾವಿದರು. ಸಂಯೋಜನೆ, ಬಣ್ಣಗಳ ಮಿಶ್ರಣ ಮತ್ತು ರೇಖೆಗಳು  ಪ್ರಬುದ್ಧವಾಗಿದ್ದು, ಈ ಮೂಲಕ ಕಲಾವಿದರ ಸಾಧನೆ ಗೋಚರಿಸುತ್ತಿದೆ ಎಂದರು. 
ಹಿರಿಯ ಪತ್ರಿಕಾ ಛಾಯಾಗ್ರಾಹಕ ನಾರಾಯಣ ಜೋಶಿ ಮಾತನಾಡಿ, ಹವ್ಯಾಸಿ ಕಲಾವಿದರಿಗೆ ಪ್ರೇರಣೆ ಮತ್ತು ಪ್ರದರ್ಶನ ಮಾಡಲು ಗ್ಯಾಲರಿ ಅಗತ್ಯವಿದೆ. ಹೀಗಾಗಿ ಎಲ್ಲರೂ ಪ್ರೋತ್ಸಾಹಿಸಬೇಕು. ಬಿಸಿಲು ಆರ್ಟ್​ ಗ್ಯಾಲರಿಯಲ್ಲಿ ಅನೇಕ ಕಲಾವಿದರ ಚಿತ್ರಕಲಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಿರುವುದು ಶ್ಲಾನೀಯ ಎಂದು ಹೇಳಿದರು. 
ಅಧ್ಯಕ್ಷತೆ ವಹಿಸಿದ್ದ ವಿ.ಬಿ.ಬಿರಾದಾರ್​ ಮಾತನಾಡಿ, ಸೌಂದರ್ಯ ಪ್ರೆ ವಿದ್ಯಾವಂತರಿಗಿಂತಲೂ ಅವಿದ್ಯಾವಂತರಲ್ಲಿ ಹೆಚ್ಚಾಗಿದ್ದು, ಅವರು ಹೆಚ್ಚು ಹೆಚ್ಚು ಆನಂದ ಪಡುತ್ತಾರೆ ಎಂದರು.
ಪ್ರದರ್ಶನ ಜೂನ್​ 5ರವರೆಗೆ ನಿತ್ಯ ಸಂಜೆ 4ರಿಂದ 8ರವರೆಗೆ ಹವ್ಯಾಸಿ ಕಲಾವಿದನೊಬ್ಬನ ಕಲಾತ್ಮಕ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಲು ಕಲಾರಸಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರದರ್ಶನ ವೀಸಬಹುದು. ನಾಡೋಜ ಜೆ.ಎಸ್​.ಖಂಡೇರಾವ್​, ಕಲಬುರಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ ಬಿ.ಪಾಟೀಲ್​, ಪತ್ರಕರ್ತ ಗುರುರಾಜ ದೇಸಾಯಿ, ಎಸ್​.ಎನ್​.ಪಾಟೀಲ್​, ದೊಣ್ಣೆಗೌಡರು, ಚಿತ್ರಲೇಖಾ ಪಾಟೀಲ್​, ಡಾ.ಆಕಾಶ, ಡಾ.ಪರಶುರಾಮ, ಮೀನಾ ಗುತ್ತೇದಾರ್​, ವಿ.ಬಿ.ಬಿರಾದಾರ ಕಲಾ ಪ್ರತಿಷ್ಠಾನ ಕಾರ್ಯದರ್ಶಿ ರವಿಚಂದ್ರ ಬಿರಾದಾರ ಇದ್ದರು. ಮಲ್ಲಿಕಾರ್ಜುನ ಕೊರಳ್ಳಿ ನಿರೂಪಿಸಿದರು. ಶೈಲಜಾ ಬಿರಾದಾರ್​ ಸ್ವಾಗತಿಸಿದರು. ರಾಜಕುಮಾರ ಕಾಳೆ ವಂದಿಸಿದರು.