ಆದಿಜಾಂಬವ ಕುಲಸ್ಥರಿಂದ ಆವಣಿಗೆ ಯಾತ್ರೆ Adijambava 
ರಾಜ್ಯ

ಆದಿಜಾಂಬವ ಕುಲಸ್ಥರಿಂದ ಆವಣಿಗೆ ಯಾತ್ರೆ Adijambava

ಶ್ರೀನಿವಾಸಪುರ: ಸಮುದಾಯದ ಮೂಲ ಪುರುಷ ಜಗತ್ತಿನ ಉಗಮಕ್ಕೂ ಮೊದಲು ಜನಿಸಿದ ಗುರು ಆದಿಜಾಂಬವ ನಮ್ಮ ಕುಲದೇವರಾಗಿದ್ದು, ಆವಣಿ ಜಾತ್ರೆ ವೇಳೆಯಲ್ಲೇ ಜಯಂತಿ ಬಂದಿರುವುದರಿಂದ ಪ್ರತಿ ವರ್ಷ ಆದಿಜಾಂಬವ ಸೇವಾ ಸಮಿತಿಯಿಂದ ಆವಣಿಗೆ ತೆರಳಿ ಕುಲದೇವರಿಗೆ ಪೂಜೆ ಸಲ್ಲಿಸಿ ಬರುವುದು ಸಂಪ್ರದಾಯವಾಗಿದೆ ಎಂದು ಆದಿಜಾಂಬವ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.Adijambava
ಪಟ್ಟಣದಲ್ಲಿ ಆದಿಜಾಂಬವ ಚಾರಿಟಬಲ್​ ಟ್ರಸ್ಟ್​ ಮತ್ತು ಸೇವಾ ಸಮಿತಿ ಸಹಯೋಗದಲ್ಲಿ ಮಾದಿಗ ಸಮುದಾಯದಿಂದ ಹಮ್ಮಿಕೊಂಡಿದ್ದ ಆದಿಜಾಂಬವ ಜಯಂತಿಯಲ್ಲಿ ಮಾತನಾಡಿದರು.
ಸರ್ಕಾರದ ಆದೇಶದಂತೆ ಸತತವಾಗಿ 7 ವರ್ಷಗಳಿಂದ ಆದಿಜಾಂಬವ ಜಯಂತಿ ಆಚರಿಸುತ್ತಾ ಬಂದಿದ್ದೇವೆ. ಆವಣಿಯಲ್ಲಿ ಸೀತಾಮಾತೆ ಅರಣ್ಯವಾಸ, ಲವಕುಶರ ಜನನವಾಗಿದ್ದು, ಅವರು ನಡೆದು ಓಡಾಡಿದ ಹೆಜ್ಜೆ&ಗುರುತುಗಳನ್ನು ಆವಣಿ ಬೆಟ್ಟದಲ್ಲಿ ಇಂದಿಗೂ ಕಾಣಬಹುದು ಎಂದರು.
ಪ್ರವಾಸಿ ಮಂದಿರದಿಂದ ಎಂ.ಜಿ.ರಸ್ತೆಯ ಮೂಲಕ ಮುಳಬಾಗಿಲು ವೃತ್ತದವರೆಗೂ ಬೆಳ್ಳಿ ರಥಗಳು, ಡೊಳ್ಳು ಕುಣಿತದ ಜತೆಗೆ ಮಹಿಳೆಯರು ಪೂರ್ಣಕುಂಭ ಕಳಶಗಳನ್ನು ಹೊತ್ತು ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದರು. ತಾಲೂಕು ಕಚೇರಿ ಮುಂಭಾಗದ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಆವಣಿಗೆ ಪ್ರಯಾಣ ಬೆಳೆಸಿದರು.