ವಡಗೇರಾದಲ್ಲಿ ಶನಿವಾರ ನಡೆದ ಕನಕ ದರ್ಶನ ಕಾರ್ಯಕ್ರಮದಲ್ಲಿ ಸಿದ್ದಣ್ಣಗೌಡ ಕಾಡಂನೋರ್​, ಡಾ.ರಾಜೇಶ್ವರಿ ಗುತ್ತೇದಾರ್​, ಶಶಿಧರ ಹಿರೇಮಠ, ಮೆಹಬೂಬ್​ ಅಲಿ, ಬಸವರಾಜ ಸೊನ್ನದ, ಶಂಕರರೆಡ್ಡಿ ಮಾಲಿಪಾಟೀಲ್​, ಶ್ರೀನಿವಾಸರಾವ ಕುಲಕರ್ಣಿ ಇತರರಿದ್ದರು.  
ರಾಜ್ಯ

ಜನಮಾನಸದಲ್ಲಿ ತತ್ವಚಿಂತನೆ ಬಿತ್ತದ ದಾರ್ಶನಿಕ

ಪ್ರಮುಖ ಮುಖ್ಯಾಂಶಗಳು

  • ಸಿದ್ದಣ್ಣಗೌಡ ಕಾಡಂನೋರ್​ ಬಣ್ಣನೆ
  • ವಡಗೇರಾದಲ್ಲಿ ಕನಕ ದರ್ಶನ ಕಾರ್ಯಕ್ರಮ
ವಡಗೇರಾ: ಕೀರ್ತನೆಯೊಂದಿಗೆ ಜನಮಾನಸದಲ್ಲಿ ತತ್ವ ಚಿಂತನೆಗಳನ್ನು ಬಿತ್ತಿದ ಕನಕದಾಸರ ಮಾನವೀಯ ಮೌಲ್ಯಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಬೀದರ್​-ಕಲಬುರಗಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್​ ಹೇಳಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿಕೇತನ ಟ್ರಸ್ಟ್​ ಸಹಯೋಗದಡಿ ಹೊನ್ನಯ್ಯ ತಾತ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಿದ್ದ ಕನಕ ದರ್ಶನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಕನ್ನಡ ಸಾಹಿತ್ಯ ಹಾಗೂ ದಾಸ ಪರಂಪರೆಗೆ ಕನಕದಾಸರ ಕೊಡುಗೆ ಅನನ್ಯವಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕ ಸಾಹೇಬರೆಡ್ಡಿ ಇಟಗಿ ಉಪನ್ಯಾಸ ನೀಡಿ, ಜಾತಿ -ಧರ್ಮದ ಭೇದಭಾವ ತೊರೆದು ಮಾನವೀಯತೆಯೇ ಶ್ರೇಷ್ಠ ಎಂಬುದನ್ನು ಕನಕದಾಸರು ಸಾಹಿತ್ಯದ ಮೂಲಕ ಸಾರಿದ್ದಾರೆ ಎಂದರು.
ಪಿಎಸ್​ಐ ಮೆಹಬೂಬ್​ ಅಲಿ ಮಾತನಾಡಿ, ಕನಕದಾಸರ ತತ್ವ, ಆದರ್ಶ ಹಾಗೂ ವೈಚಾರಿಕತೆಗಳನ್ನು ಯುವಜನತೆ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿಮಾರ್ಣ ಸಾಧ್ಯ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ್​, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ ಹಿರೇಮಠ, ಬಸವರಾಜ ಸೊನ್ನದ, ಶಂಕರರೆಡ್ಡಿ ಮಾಲಿಪಾಟೀಲ್​, ಶ್ರೀನಿವಾಸರಾವ್​ ಕುಲಕರ್ಣಿ, ಯಂಕಣ್ಣ ಬಸವಂತಪುರ, ಡಾ.ಮರಿಯಪ್ಪ ನಾಟೇಕರ್​, ದೇವಪ್ಪ ಕಡೇಚೂರ ಇತರರಿದ್ದರು. ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಕೊಂಕಲ್​ ನಿರೂಪಣೆ ಮಾಡಿ ವಂದಿಸಿದರು.