ಬಾಗಗಲಕೋಟೆಯ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜರುಗಿದ ಹನಮಂತಗೌಡ ಗೊರವರ ಅವರ ೭೫ ಹುಟ್ಟು ಹಬ್ಬದ ಅಮೃತ ಮಹೋತ್ಸವ ಮತ್ತು ಸಮಾಜ ಚಿಂತಕ ಅಭಿನಂದನಾ ಗ್ರಂಥವನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ,ನಂಜಯ್ಯನಮಠ ಬಿಡುಗಡೆಗೊಳಿಸಿದರು. ಎಚ್.ಬಿ.ಗೊರವರ, ಮಹೇಶ ಹೊಸಗೌಡರ, ಚಂದ್ರಶೇಖರ ಕಾಳನ್ನವರ ಮತ್ತಿತರರು ಇದ್ದರು.
ಬಾಗಲಕೋಟೆ: ಸಮಾಜ ಸುಧಾರಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಪಾತ್ರ ಮುಖ್ಯವಾಗಿದೆ. ವ್ಯಕ್ತಿ ಸಮಾಜ ಋಣ ತೀರಿಸಲು ಸೇವೆಯಿಂದ ಸಾಧ್ಯವಿದೆ. ಸಮಾಜ ಸೇವೆಯಿಂದ ಸಂತೃಪ್ತಿ ಬದುಕು ರೂಪಗೊಳ್ಳುತ್ತದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕೃಷಿ ಇಲಾಖೆ ನಿವೃತ್ತ ಅಽಕಾರಿ ಹನಮಂತಗೌಡ ಗೊರವರ ಅವರ ೭೫ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ಮತ್ತು ಸಮಾಜ ಚಿಂತಕ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ವ್ಯಕ್ತಿಯು ಸೇವೆ ಮಾಡುತ್ತ ಸಾಗಿದರೆ ತಾವು ಮಾಡಿದ ಕೆಲಸ ಸಮಾಜಕ್ಕೆ ಸಮರ್ಪಿತವಾಗುತ್ತದೆ. ಸಾಹಿತ್ಯ ವಲಯದಲ್ಲಿ ಅಭಿನಂದನಾ ಗ್ರಂಥಗಳಿAದ ವ್ಯಕ್ತಿಯ ಸೇವೆ ಮತ್ತು ಸಾಧನೆಗಳನ್ನು ದಾಖಲಿಸಿ ಮುಂದಿನ ಜನಾಂಗದವರಿಗೆ ನೀಡುವ ಕಾರ್ಯ ಮಾಡುವುದು ಮಾದರಿಯಾಗಿದೆ ಎಂದರು.
ಪ್ರಧಾನ ಸಂಪಾದಕ ಪ್ರೊ.ವೈ. ಎಂ. ಯಾಕೊಳ್ಳಿ ಮಾತನಾಡಿ, ವ್ಯಕ್ತಿ ಸಮಾಜ ಜೀವಿಯಾಗಿ, ಸಮಾಜಕ್ಕೆ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಗಳ ಮಾಡುವ ಮೂಲಕ ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳುವ ಜೀವನ ಮಾಡಿರುವ ಎಚ್.ಬಿ. ಗೊರವರ ಅವರ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.
ಪ್ರೊ.ಚಂದ್ರಶೇಖರ ಕಾಳನ್ನವರ ಸಮಾಜ ಚಿಂತಕ ಗ್ರಂಥ ಅವಲೋಕನ ಮಾಡಿ ಮಾತನಾಡಿದರು. ಕೆಪಿಸಿಸಿ ಒಬಿಸಿ ರಾಜ್ಯ ಕಾರ್ಯದರ್ಶಿ ಮಹೇಶ ಹೊಸಗೌಡರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಸತ್ಯಪ್ಪ ಮೇಲನಾಡ, ಸಾಹಿತಿ ಕಿರಣ ಬಾಳಗೊಳ, ಕೃಷ್ಣ ಓಗೆನ್ನವರ, ಬಸವರಾಜ ಅಂಟರದಾನಿ, ಗೀತಾ ದಾನಶೆಟ್ಟಿ, ರಾಜು ಮನ್ನಿಕೇರಿ, ನಿವೃತ್ತ ಶಿಕ್ಷಣಾಽಕಾರಿ ನೀಲಪ್ಪ ಗೊರವರ ಮುಂತಾದವರಿದ್ದರು.