ಅಫಜಲಪುರ ತಾಲೂಕಿನ ಅರ್ಜುಣಗಿಯಲ್ಲಿ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಸಾಥ್ ನೀಡಿದರು
- ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿಕೆ
- ಅರ್ಜುಣಗಿಯಲ್ಲಿ ಧರಣಿ 3ನೇ ದಿನಕ್ಕೆ
ಅಫಜಲಪುರ: ಬೋರಿ ನದಿಯಿಂದ ತಾಲೂಕಿನ 10 ಹಾಗೂ ಆಳಂದ ತಾಲೂಕಿನ 3 ಕೆರೆ, ಅಮರ್ಜಾ ಅಣೆಕಟ್ಟಿಗೆ ನೀರು ತುಂಬುವ ಜೀವಜಲ ಯೋಜನೆಯ ಪೈಪ್ಲೈನ್ ಹಾಳು ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ದುಷತ್ಯ ಖಂಡಿಸಿ ಹಾಗೂ ಪೈಪ್ಲೈನ್ ದುರಸ್ತಿಗೆ ಆಗ್ರಹಿಸಿ ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ನೀರಿಗಾಗಿ ಧರಣಿ ಶುಕ್ರವಾರ 2 ದಿನ ಪೂರ್ಣಗೊಳಿಸಿದ್ದು, 3ನೇ ದಿನಕ್ಕೆ ಪದಾರ್ಪಣೆ ಮಾಡಿದೆ.
ಕಡಗಂಚಿ ಶ್ರೀ ವೀರಭದ್ರ ಶಿವಾಚಾರ್ಯರು ಧರಣಿಗೆ ಸಾಥ್ ನೀಡಿ ಮಾತನಾಡಿ, ನೀರು ಪ್ರತಿಯೊಂದು ಜೀವಿಯ ಬದುಕಿನ ಮೂಲಾಧರವಾಗಿದೆ. ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಎಲ್ಲರ ಬದುಕಿನ ಭರವಸೆಯಾಗಿದೆ. ಇದೊಂದು ಜನಾಂದೋಲನದ ಹೋರಾಟವಾಗಿದೆ ಎಂದು ಹೇಳಿದರು.
ಶ್ರೀ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ಮುರಾಹರಿ ಮಹಾರಾಜ, ಶ್ರೀ ಪಂಪಾಪತಿ ಶಿವಾಚಾರ್ಯ, ಶ್ರೀ ಬಳಿರಾಮ ಮಹಾರಾಜರು, ಕೆಕೆಆರ್ಟಿಸಿ ಅಧ್ಯ ಅರುಣಕುಮಾರ ಪಾಟೀಲ್, ಕೆಎಂಎಫ್ ನಿರ್ದೇಶಕ ಬಸವರಾಜ ಉಪ್ಪಿನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸವಳೇಶ್ವರ, ಜಿಪಂ ಮಾಜಿ ಸದಸ್ಯರಾದ ಮತೀನ್ ಪಟೇಲ್, ಸಿದ್ಧರಾಮ ಪ್ಯಾಟಿ, ಗುರುಶರಣ ಕೋರಳ್ಳಿ, ಮಜರ್ ಹುಸೇನ್, ಪಾಶಾ, ಪ್ರಮುಖರಾದ ಗುರುಲಿಂಗ ಜಂಗಮ, ಗುರುಶಾಂತಪ್ಪ ಪಾಟೀಲ್ ನಿಂಬಾಳ, ಸಿದ್ದರಾಮ ಪ್ಯಾಟಿ, ಪಿದೋರ್ಸ್ ಅನ್ಸಾರಿ, ಶರಣಬಸಪ್ಪ ವಾಗೆ, ರಾಜು ಯಂಕಂಚಿ, ಬಸವರಾಜ ಉಪ್ಪಿನ್, ಪ್ರಕಾಶ ಶಿಂಧೆ, ಶರಣಬಸಪ್ಪ ಕಲಶೆಟ್ಟಿ, ಬಸವರಾಜ ಕೌಲಗಿ ಇತರರಿದ್ದರು.