ಒಂದೇ ಕಡೆ ಪರ, ವಿರೋಧ ಧರಣಿ
ಜಿಲ್ಲಾಡಳಿತ ಆವರಣದಲ್ಲಿ ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಭೂಸ್ವಾಧಿನ ಪರ, ವಿರೋಧದ ಪ್ರತ್ಯೇಕ ಅರ್ನಿದಿಷ್ಟಾವಧಿ ಧರಣಿಗಳು ನಡೆಯುತ್ತಿವೆ. ಒಂದು ಸಂಟನೆಯು (ಕೋಡಿಹಳ್ಳಿ ಚಂದ್ರಶೇಖರ್ ಬಣ) ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಕೃಷಿ ಜಮೀನು ಸ್ವಾಧಿನ ವಿರೋಧಿಸಿದರೆ, ಮತ್ತೊಂದೆಡೆ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಕೈಗಾರಿಕಾಭಿವೃದ್ಧಿ ಪ್ರದೇಶದ ಭೂ ಸ್ವಾಧಿನ ಪರ ಹೋರಾಟ ಸಮಿತಿಯು ಸೂಕ್ತ ಪರಿಹಾರ ಕೊಡುವುದರ ಜತೆಗೆ ಕೃಷಿ ಜಮೀನು ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದು ಇದು ಆಡಳಿತ ಯಂತ್ರಾಂಗವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಫಲವತ್ತಾದ ಕೃಷಿ ಜಮೀನು ಸ್ವಾಧಿನ ಪಡಿಸಿಕೊಂಡು ರೈತರನ್ನು ಒಕ್ಕೆಲೆಬ್ಬಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದುವರೆಗೂ ಜಿಲ್ಲಾಡಳಿತವು ತಾಳ್ಮೆಯ ಹೋರಾಟ ನೋಡಿದೆ. ಈಗಲಾದರೂ ಸ್ಪಂದಿಸದಿದ್ದಲ್ಲಿ ಜಿಲ್ಲಾಡಳಿತಕ್ಕೆ ಬೀಗ ಜಡಿದು ಮುತ್ತಿಗೆ, ಟ್ರಾ$್ಯಕ್ಟರ್, ಹೆದ್ದಾರಿಗಳ ಸಂಪೂರ್ಣ ಬದ್ಧ ಸೇರಿ ನಾನಾ ಹೋರಾಟಗಳನ್ನು ಎದುರಿಸಬೇಕಾಗುತ್ತದೆ. ಬೃಹತ್ ಪ್ರಮಾಣದಲ್ಲಿ ರಾಜ್ಯ ಮಟ್ಟದ ರೈತ ಸಮೂಹವೇ ಬಂದು ಧರಣಿಗೆ ಬಲ ನೀಡಲಿದೆ.
> ಭಕ್ತರಹಳ್ಳಿ ಭೈರೇಗೌಡರಾಜ್ಯ ರೈತ ಸಂ ಹಸಿರು ಸೇನೆ ಕಾರ್ಯಾಧ್ಯಕ್ಷ
ಅಂತಿಮ ಅಧಿಸೂಚನೆ
ಶಿಘಡ್ಲಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳಲ್ಲಿನ 2823 ಎಕರೆ ಕೃಷಿ ಜಮೀನನ್ನು ಕೈಗಾರಿಕಾಭಿವೃದ್ಧಿಗೆ ಸ್ವಾಧಿನ ಪಡಿಸಿಕೊಳ್ಳಲಾಗುತ್ತಿದೆ. ವ್ಯಾಪಕ ವಿರೋಧದ ನಡುವೆಯೂ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೂ ಮೊದಲು ಜಿಲ್ಲಾಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಭೂ ಸ್ವಾಧಿನಕ್ಕೆ ಸಂಬಂಧಿಸಿದಂತೆ ರೈತರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಶೇ.65 ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿವಿಧ ಪ್ರಕ್ರಿಯೆಗಳ ನಿರ್ವಹಣೆಯ ನಡುವೆ ಪರ ಹಾಗೂ ವಿರೋಧ ಅಭಿಪ್ರಾಯಗಳಿಂದ ನಿಗದಿತ ಉದ್ದೇಶಿತ ಯೋಜನೆಯ ಗುರಿಯ ಸಾಧನೆಯಲ್ಲಿ ಹಿನ್ನಡೆ ಕಾಣುವ ಆತಂಕ ವ್ಯಕ್ತವಾಗಿದೆ.