ಆಧುನಿಕ ಯುಗಕ್ಕೆ ಸಂಖ್ಯಾಕೋಡ್ ಪುಸ್ತಕ ಅಗತ್ಯ numeric-code
- ಹಿರಿಯ ಕವಿ ಎಚ್.ಎಸ್.ಶಿವಪ್ರಕಾಶ್ ಹೇಳಿಕೆ
- ಕಲಾವಿದ ಶ್ರೀನಿವಾಸ್ ಅವರ ಸಂಶೋಧನಾ ಕೃತಿ ಲೋಕಾರ್ಪಣೆ
ಮಾಸ್ತಿ: ಆಧುನಿಕ ಯುಗಕ್ಕೆ ಸಂಖ್ಯಾಕೋಡ್ ಪುಸ್ತಕ ಅತಿ ಮುಖ್ಯವಾಗಿದ್ದು, ಕಲಾವಿದ, ಲೇಖಕ ಎಚ್.ಎನ್.ಶ್ರೀನಿವಾಸ್ ಅವರು ಸಂಖ್ಯೆಗಳನ್ನು ಬಳಸಿ ಪುಸ್ತಕವನ್ನು ಬರೆಯುವುದನ್ನು ತೋರಿಸಿಕೊಟ್ಟಿದ್ದು, ಇದು ಹೀಗೆಯೇ ಮುಂದುವರೆಯಲಿ ಎಂದು ಕನ್ನಡದ ಹಿರಿಯ ಕವಿ, ಅನುವಾದಕ ಎಚ್.ಎಸ್.ಶಿವಪ್ರಕಾಶ್ ಹೇಳಿದರು.
ಮಾಸ್ತಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಶ್ರೀನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕಸಾಪ ವತಿಯಿಂದ ಕಲಾವಿದ ಶ್ರೀನಿವಾಸ್.ಎಚ್.ಎನ್ ಅವರು ರಚಿಸಿರುವ ಸಂಖ್ಯಾ ಕೋಡ್ ಸಂಶೋಧನ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.numeric-code
ಭಾಷೆಗೆ ಮೊದಲು ಲಿಪಿ ಇರಲಿಲ್ಲ. ಹಲವಾರು ವರ್ಷಗಳ ನಂತರ ಭಾಷೆ ಬೆಳೆದಂತೆ ಲಿಪಿಯ ರೂಪ ಪಡೆದುಕೊಂಡಿತು. ಮೊದಲು ಶಿಲಾ ಶಾಸನಗಳ ರೂಪದಲ್ಲಿ ತಾಮ್ರದ ಎಲೆ ಪಟಗಳಲ್ಲಿ ಕಂಡು ಬರುತ್ತಾದರೂ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಖ್ಯಾ ಕೋಡ್ ಪುಸ್ತಕ ಪ್ರಸ್ತುತ ಆಧುನಿಕ ಯುಗಕ್ಕೆ ಅತಿ ಮುಖ್ಯವಾಗಿ ಬೇಕಾದ ಪುಸ್ತಕವಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಬಹುತೇಕ ಇಂತಹ ಪುಸ್ತಕ ಬಂದಿರುವುದು ಇದೇ ಮೊದಲು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ಇಂದಿನ ಯುಗದಲ್ಲಿ ಸಂಖ್ಯಾಕೋಡ್ ಭಾಷೆ ಅತಿ ಅಗತ್ಯವಾಗಿದೆ. ಇದನ್ನು ಪ್ರತಿಯೊಬ್ಬರೂ ಸುಲಭ ರೀತಿಯಲ್ಲಿ ಬಳಸಬಹುದಾಗಿದೆೆ ಎಂದರು.
ಸಾಹಿತಿ ಡಾ.ನಾ.ಮುನಿರಾಜು ಮಾತನಾಡಿ, ಸುಮಾರು ಹದಿನೆಂಟು ವರ್ಷಗಳವರೆಗೆ ಸಂಶೋಧನೆ ನಡೆಸಿ ಸಂಖ್ಯಾಕೋಡ್ ಪುಸ್ತಕ ರಚಿಸಿದ್ದಾರೆ. ಈ ಸಂಖ್ಯಾಕೋಡ್ ಪುಸ್ತಕ ಪ್ರತಿಯೊಬ್ಬ ವಿದ್ಯಾರ್ಥಿ, ಎಲ್ಲ್ಲ ಇಲಾಖೆಗೂ ಉಪಯೋಗವಾಗಬಲ್ಲದು ಎಂದರು.
ಶ್ರೀ ನಾರಾಯಣ ಗುರು ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಸಿ.ರಮೇಶ್, ರಂಗವಿಜಯ ಟ್ರಸ್ಟ್ ಅಧ್ಯಕ್ಷ ಮಾಲೂರು ವಿಜಿ, ಕದಂಬ ಕನ್ನಡ ಕಲಾ ಸಂಘದ ಅಧ್ಯಕ್ಷ ಎಂ.ವಿ.ರವಿಕುಮಾರ್, ಗ್ರಾಪಂ ಉಪಾಧ್ಯಕ್ಷ ಜಿ.ಸಿ.ನಾರಾಯಣಸ್ವಾಮಿ, ಸದಸ್ಯ ಜೆಸಿಬಿ ನಾಗರಾಜ್, ಸುಭಾಷ್ ಚಂದ್ರ, ಎ.ಅಶ್ವತ್ಥರೆಡ್ಡಿ, ಎ.ಕೆ.ವೆಂಕಟೇಶ್, ಟೆಂಪೋ ಮುನಿಯಪ್ಪ, ಪ್ರವಿಣ್ ಕುಮಾರ್ ಇದ್ದರು.