Jagadish Shettar | ಬೆಳಗಾವಿ ಸಂಸದ ಜಗದೀಶ ಶೆಟ್ಟರ್​  
ರಾಜ್ಯ

ವಿಕಸಿತ ಭಾರತಕ್ಕೆ ಪ್ರಬುದ್ಧ ಬಜೆಟ್ : ಸಂಸದ ಜಗದೀಶ ಶೆಟ್ಟರ್ | Jagadish Shettar

ಬೆಳಗಾವಿ/ದೆಹಲಿ: ಪ್ರಧಾನಿ ನರೇಂದ್ರ ಮೋದಿ‌ ನಾಯಕತ್ವದಲ್ಲಿ ವಿತ್ತ ಸಚಿವೆ‌ ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದ್ದು, ವಿಕಸಿತ ಭಾರತಕ ಕನಸು ನನಸು ಮಾಡಲಿಕ್ಕೆ ಪ್ರಬುದ್ದವಾದ ಬಜೆಟ್ ಇದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್​ ಹೇಳಿದ್ದಾರೆ.
ಈ ಬಜೆಟ್​​ ಯಾವುದೇ ರಾಜ್ಯಕ್ಕೆ ನಿರ್ದಿಷ್ಟವಾದ ಘೋಷಣೆ ಮಾಡಿಲ್ಲ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲು ಇದು ಸಹಕಾರಿಯಾಗಲಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ಸಿಗಲಿದೆ. ಕೃಷಿಗೂ ಆದ್ಯತೆ ನೀಡಲಾಗಿದ್ದು, ಕೈಗಾರಿಕಾ ಸಂಬಂದ ವಿದೇಶ ಬಂಡವಾಳ ಹೂಡಿಕೆ ಮಾಡಲು ಇದು ಸಹಕಾರಿ ಎಂದರು.
ನಗರ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಲು ಈ ಬಜೆಟ್​​ ಅನುಕೂಲವಾಗಲಿದ್ದು, ಜನಸಾಮಾನ್ಯರ ಕನಸು ನನಸಾಗಲು ಸರ್ಕಾರ ಕ್ರಮ ಕೈಗೊಂಡಿದೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಆಗುತ್ತಿದೆ,‌ ಹೊಸ ರೈಲ್ವೆ ಯೋಜನೆಗೆ ಅತಿಹೆಚ್ಚು ಹಣ ಮಂಜುರಾಗಿದೆ ಎಂದು ಹೇಳಿದರು.

ಟೀಕೆ ಸರಿ ಅಲ್ಲ

ಕಾಂಗ್ರೆಸ್ ಪಕ್ಷ ವಿನಾಕಾರಣ ಟೀಕೆ ಮಾಡೊದು ಸರಿಯಲ್ಲ, ಅಭಿವೃದ್ದಿ ಮಾಡಲು ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ, ಹೊಸ ಯೋಜನೆಗಳಿಗೆ ಜಮೀನು ನೀಡುತ್ತಿಲ್ಲ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅನುದಾನ ನೀಡಲು ತಯಾರಿದ್ದರು ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದರು.