ಆನೇಕಲ್ ತಾಲೂಕಿನ ಬಿದರಗುಪ್ಪೆಯ ಮಳ್ಳೇನಹಳ್ಳಿಯಲ್ಲಿ ಕೊಲೆ ಪ್ರಕರಣ ಬಗ್ಗೆ ಡಿವೈಎಸ್ಪಿ ಮೋಹನ್, ಸಿಪಿಐ ರಾಘವ್ ಗೌಡ, ತಿಪ್ಪೇಸ್ವಾಮಿ ಸ್ವಾಮಿ ಸ್ಥಳ ಪರಿಶೀಲಿಸಿದರು.
ಆನೇಕಲ್ : ತಾಲೂಕಿನ ಬಿದರಗುಪ್ಪೆಯ ಮಳ್ಳೇನಹಳ್ಳಿಯಲ್ಲಿ ಸಾಲಬಾಧೆಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಐಷಾರಾಮಿ ಜೀವನವೇ ಮೂಲ ಕಾರಣ ಎನ್ನಲಾಗಿದೆ.
ಶನಿವಾರ ರಾತ್ರಿ ಮಳ್ಳೇನಹಳ್ಳಿಯಲ್ಲಿ ಸಾಲಬಾಧೆಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕಣದಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ತಾಯಿ ಆಶಾ (50), ಮಗಳು ವರ್ಷಿತಾ (35) ಮೃತಗಳು ಪತ್ತೆಯಾಗಿದ್ದವು. ಗಂಭೀರವಾಗಿರುವ ಮೋಹನ್ ಗೌಡ (27), ಮಯಾಂಕ್ ಗೌಡ (11)ಗೆ ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ಏನಿದು ಟನೆ?: ಮೋಹನ್ ಗೌಡ ಚಾಕುವಿನಿಂದ ತಾಯಿ ಆಶಾ, ಅಕ್ಕ ವರ್ಷಿತಾ ಮತ್ತು ಅಕ್ಕನ ಮಗ ಮಾಯಾಂಕ್ ಗೌಡ ಅವರ ಕತ್ತು ಕೊಯ್ದು ಬಳಿ ಆತನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಕ್ಕಪಕ್ಕದವರು ಶಬ್ದ ಕೇಳಿ ಮನೆಯ ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಡಿವೈಎಸ್ಪಿ ಮೋಹನ್, ಸಿಪಿಐ ರಾಘವ್ ಗೌಡ, ತಿಪ್ಪೇಸ್ವಾಮಿ ಸ್ವಾಮಿ ಸ್ಥಳ ಪರಿಶೀಲಿಸಿದ್ದು, ತಾಯಿ ಆಶಾ ಗೌಡ ಹಾಗೂ ಅಕ್ಕ ವರ್ಷಿತಾ ಮೃತ ದೇಹವನ್ನು ಅತ್ತಿಬೆಲೆ ವಲಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರಿಗೆ ಭಾನುವಾರ ಸಂಜೆ ಹಸ್ತಾಂತರಿಸಲಾಯಿತು. ಮಳ್ಳೇನಹಳ್ಳಿಯಲ್ಲಿ ಸಂಜೆ ಬಂಧುಗಳು ಅತ್ಯಕ್ರಿಯೆ ನೆರವೇರಿಸಿದರು.
ಮೂವರ ವಶ : ಎಚ್ಎಸ್ಆರ್ ಬಡಾವಣೆಯಲ್ಲಿ ವ್ಯವಹಾರ ಮಾಡುತ್ತಿದ್ದ ಮೋಹನ್, ಐಷಾರಾಮಿ ಮದುವೆಗಳಿಗೆ ಬೆಳ್ಳಿ ತಟ್ಟೆ, ಲೋಟ, ಬಾಡಿಗೆ ನೀಡುವುದು, ಕೋಳಿ ಮೊಟ್ಟೆ ವ್ಯವಹಾರ, ಚೀಟಿ, ಜಮೀನು, ಬಡ್ಡಿ ವ್ಯವಹಾರ ಅಲ್ಲದೆ ಬೇರೆ ಬೇರೆ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ. ಆದರೆ, ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿದ್ದ. ಹಣ ಕೊಟ್ಟವರು ವಾಪಸ್ ಕೊಡುವಂತೆ ಪೀಡಿಸುತ್ತಿದ್ದರು. ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಕುಟುಂಬಸ್ಥರ ಹೇಳಿಕೆ ಮೇರೆಗೆ ಗೋಪಸಂದ್ರ ಸವಿತಾ, ಎಚ್ಎಸ್ಆರ್ ಬಡಾವಣೆಯ ಚಿನ್ನದ ಅಂಗಡಿ ಮಾಲೀಕ ಹಾಗೂ ಜಿಮ್ ಮೋಹನ್ ಮೇಲೆ ಅತ್ತಿಬೆಲೆ ಪೊಲೀಸರು ದೂರು ದಾಖಲಿಸಿಕೊಂಡು ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ವರ್ಷದಿಂದ ಬ್ರೇನ್ ಟ್ಯೂಮರ್ : ವರ್ಷಿತಾ ಗೌಡ ಎರಡು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡು ಮಗನ ಜತೆ ತಾಯಿ ಮನೆಯಲ್ಲೇ ವಾಸವಿದ್ದರು. ವರ್ಷದಿಂದ ಆಕೆಗೆ ಬ್ರೇನ್ ಟ್ಯೂಮರ್ ಇರುವುದು ಗೊತ್ತಾಗಿದ್ದು,ನಾಲ್ಕೆ$ದು ಬಾರಿ ಆಪರೇಷನ್ ಮಾಡಲಾಗಿತ್ತು. ಇತ್ತೀಚೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಮುಖಂಡನಾಗುವ ಆಸೆಯೇ ಮೂಲ : ಐಷಾರಾಮಿ ಜೀವನ ನಡೆಸುತ್ತಿದ್ದ ಮೋಹನ್ ಗೌಡ, ಮದುವೆ, ಇನ್ನಿತರ ಸಮಾರಂಭ ಎಂದು ಹೇಳಿಕೊಂಡು ಮನೆ ಬಳಿ ಬಂದವರಿಗೆ 50 ಸಾವಿರದಿಂದ ಲಕ್ಷ ರೂ. ಕೊಡುತ್ತಿದ್ದ. ಊರಿನಲ್ಲಿ ನಾಯಕ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕು. ಎಲ್ಲರೂ ಗೌರವ ಕೊಡಬೇಕು ಎನ್ನುವಂತೆ ನಡೆದುಕೊಳ್ಳುತ್ತಿದ್ದ. ಇದೇ ಕೋಟಿಗಟ್ಟಲೆ ಸಾಲಕ್ಕೆ ಕಾರಣ ಎನ್ನಲಾಗಿದೆ. ಹಾಗೆಯೇ, ಇತ್ತೀಚೆಗೆ ಊರಿನಲ್ಲಿ ನೂರಕ್ಕೂ ಜನರನ್ನು ಕರೆಸಿ ದೊಡ್ಡ ಮಟ್ಟದಲ್ಲಿ ಹೋಮ ಮಾಡಿಸಿದ್ದ. ಈ ವೇಳೆ ಊರಿನ ಜನರಿಗೆ ರೇಷ್ಮೇ ಸೀರೆ, ಬಟ್ಟೆ ನೀಡಿದ್ದ. ಮೋಹನ್ ಮನೆಯಲ್ಲಿ ಕುಳಿತುಕೊಳ್ಳುವ ಚೇರ್ನಿಂದ ಹಿಡಿದು ಜೋಕಾಲಿಯವರೆಗೆ ಬೆಳ್ಳಿಯ ಸಾಮಗ್ರಿಗಳು ತುಂಬಿದ್ದವು.
ಸಂಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಯಾದ ಸಾಲವೇ ಘಟನೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.