ಕಲಬುರಗಿ: ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಹಾಗೂ ಜ್ಞಾನ ಸಂಸ್ಕೃತಿ ಬಲಪಡಿಸಲು ಪ್ರತಿಯೊಂದು ಮನೆಯಲ್ಲೂ ಸಣ್ಣದಾದರೂ ಗ್ರಂಥಾಲಯ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಹೇಳಿದರು .
ನಗರದ ದೊಡ್ಡಪ್ಪ ಅಪ್ಪ ಬಡಾವಣೆಯ ಕನ್ನಡ ಉಪನ್ಯಾಸಕ ವಿಜಯಕುಮಾರ್ ರೋಣದವರ ಮನೆಯಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ದಿನಮಾನದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಓದುವ ಸಂಸ್ಕೃತಿ ಕುಂಠಿತವಾಗುತ್ತಿದೆ ಇದನ್ನು ತಡೆಯಲು ಮನೆಯಲ್ಲೇ ಪುಸ್ತಕಗಳೊಂದಿಗೆ ಆತ್ಮೀಯ ಸಂಬಂಧ ಬೆಳೆಸುವುದು ಅತ್ಯಂತ ಅಗತ್ಯ ಎಂದು ಹಿರಿಯ ಸಾಹಿತಿ ಹಾಗೂ ವೈದ್ಯರಾದ ಡಾ. ಎಸ್ ಎಸ್ ಗುಬ್ಬಿ ಹೇಳಿದರು.
ರೋಣದವರು ಮನೆಯಲ್ಲಿ ಸಾಮಾನ್ಯರಿಗೂ ಹಾಗೂ ಮಕ್ಕಳಿಗೆ ಓದಲು ಉಪಯೋಗವಾಗುವ ಹಾಗೂ ಅತ್ಯಂತ ಮಹತ್ವದ 3ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದ್ದಾರೆ ಹಾಗಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಅವರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಚಿ.ಸಿ ನಿಂಗಣ್ಣ, ಡಾ. ಎಂ ಬಿ ಕಟ್ಟಿ ,ಡಾ. ನಾಗಪ್ಪ ಗೋಗಿ, ರೇವಣಸಿದ್ದಪ್ಪ ದುಃಖಾನ್,ಶಾಂತಗೌಡ, ಪಾಟೀಲ, ಶ್ರೀಶೈಲ್ ಮದಾನೆ, ಡಾ. ಮಹೇಶ್ ಗಂವ್ಹಾರ್ , ಪಾಟೀಲ, ಶಿವುಕುಮಾರ ಹಿರೇಮಠ, ಮಲ್ಲಿನಾಥ ಪಾಟೀಲ, ಸಂಜೀವ ಬಿರಾದಾರ, ಶಿವು ತುಪ್ಪದ, ಸುಭಾಸಗೌಡ ಸುಬೇದಾರ್ ಮುಂತಾದವರು ಇದ್ದರು.