ಕಲಬುರಗಿ ಶಿವಶಕ್ತಿನಗರ ಸಾಹಿತ್ಯ ಕುಟೀರದ ಬಸವ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಡಾ.ಚಿ.ಸಿ.ನಿಂಗಣ್ಣನವರಿಗೆ ಪ್ರಾಧಿಕಾರ ಅಭಿನಂದನಾ ಪತ್ರ ನೀಡಿ ಗೌರವಿಸಿತು. ಬಿ.ಎಚ್​.ನಿರಗುಡಿ, ಡಾ.ವಿಜಯಕುಮಾರ ಪುರೂತೆ, ಡಾ.ನಾಗಪ್ಪ ಗೋಗಿ, ವಿಜಯಕುಮಾರ ರೋಣದ, ಶ್ರೀಶೈಲ್​ ಮದಾನೆ, ಬಿ.ಎಸ್​.ಮಾಲಿ ಪಾಟೀಲ್​, ಡಾ.ಶಂಕರ ಬಾಳಿ, ಶಾಂತಗೌಡ ಪಾಟೀಲ್​ ಇತರರಿದ್ದರು. 
ರಾಜ್ಯ

ಪ್ರತಿ ಮನೆಯಲ್ಲೂ ಗ್ರಂಥಾಲಯ ಅಗತ್ಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಬಿ.ಎಚ್​.ನಿರಗುಡಿ ಅನಿಸಿಕೆ
  • ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕಾರ್ಯಕ್ರಮ
ಕಲಬುರಗಿ: ಸಮಾಜದ ಪ್ರತಿಯೊಬ್ಬರ ಮನೆಯಲ್ಲೂ ಗ್ರಂಥಾಲಯ ನಿರ್ಮಿಸುವುದು ಅವಶ್ಯಕ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಸಾಹಿತಿ ಬಿ.ಎಚ್​.ನಿರಗುಡಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕಲಬುರಗಿ ಜಿಲ್ಲಾ ಜಾಗೃತಿ ಸಮಿತಿ ಸಹಯೋಗದಲ್ಲಿ ನಗರದ ಶಿವಶಕ್ತಿ ಬಡಾವಣೆಯ ಸಾಹಿತಿ ಡಾ.ಚಿ.ಸಿ.ನಿಂಗಣ್ಣನವರ ಸಾಹಿತ್ಯ ಕುಟೀರದ ಬಸವ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯರಾದ ಮಾನಸ ಮೈಸೂರು ನೇತೃತ್ವದಲ್ಲಿ ರಾಜ್ಯವ್ಯಾಪಿ ಅನೇಕ ಯೋಜನೆ ಹಾಕಿಕೊಂಡು ವಿಶಿಷ್ಟ ರೀತಿಯಲ್ಲಿ ಅನುಷ್ಠಾನ ತರುವುದರೊಂದಿಗೆ ಕನ್ನಡ ಪರಿಸರ ನಿರ್ಮಾಣಕ್ಕೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಹಿರಿಯ ಸಾಹಿತಿ ಡಾ.ವಿಜಯಕುಮಾರ ಪರೂತೆ ಮಾತನಾಡಿ, ಗ್ರಂಥಾಲಯದಲ್ಲಿ ಡಾ.ಚಿ.ಸಿ.ನಿಂಗಣ್ಣನವರು ಕನ್ನಡ ಸಾಹಿತ್ಯದ ವಚನ, ಜನಪದ, ವಿಮರ್ಶೆ, ನಾಟಕ, ಜೀವನ ಚರಿತ್ರೆ, ಕಾದಂಬರಿ, ಕಾವ್ಯ, ಅಭಿನಂದನ, ತತ್ವಪದಗಳು, ದಾಸ ಸಾಹಿತ್ಯ, ಜನಪ್ರಿಯ ಮಾಲಿಕೆ, ಕಾನೂನು, ಇತಿಹಾಸ, ವಿಾನ ಹೀಗೆ ಅನೇಕ ಪ್ರಕಾರದ ಪುಸ್ತಕಗಳನ್ನು ಸಂಗ್ರಹಿಸಿರುವುದು ಮಾದರಿ ಕಾರ್ಯ ಎಂದರು.
ಗ್ರಂಥಾಲಯ ರೂವಾರಿ ಸಾಹಿತಿ ಡಾ.ಚಿ.ಸಿ.ನಿಂಗಣ್ಣ ಪ್ರಾಧಿಕಾರಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, 30 ವರ್ಷಗಳಿಂದ ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ರೈತ ಕುಟುಂಬದಲ್ಲಿ ಜನಿಸಿ ಶರಣ ಸಂಸತಿ ಅನುಸರಿಸಿಕೊಂಡು ಮನೆಯಲ್ಲಿ ಬಸವ ಗ್ರಂಥಾಲಯ ನಿರ್ಮಿಸಿ ಪುಸ್ತಕಗಳನ್ನು ಸಂಗ್ರಹಿಸಿ, ಓದುಗರಿಗೆ ನೀಡಲಾಗುತ್ತಿದೆ. ಾನಾರ್ಜನೆಗೆ ಪುಸ್ತಕಗಳು ಸಹಾಯಕವಾಗಿವೆ ಎಂದರು.
ಡಾ.ನಾಗಪ್ಪ ಗೋಗಿ, ವಿಜಯಕುಮಾರ ರೋಣದ, ಶ್ರೀಶೈಲ್​ ಮದಾನೆ, ಬಿ.ಎಸ್​.ಮಾಲಿ ಪಾಟೀಲ್​, ಡಾ.ಶಂಕರ ಬಾಳಿ, ಶಾಂತಗೌಡ ಪಾಟೀಲ್​, ಲಕ್ಷಿ$್ಮಕಾಂತ ಹಿರೇಗೌಡರು, ಭೀಮಯ್ಯ ಎಂ, ಬಸವರಾಜ್​ ಪಾಟೀಲ್​, ರೇವಣಸಿದ್ದಪ್ಪ ದುಕಾನ, ರೇವಣಸಿದ್ದಯ್ಯನರನಾಳ, ಕಾವ್ಯಶ್ರೀ, ಲಕ್ಷಿ$್ಮ ಎನ್​ ಇತರರು ಪಾಲ್ಗೊಂಡಿದ್ದರು.
"

ಆಧುನಿಕ ವಿಲಾಸಿ ಜೀವನ ಶೈಲಿಯಿಂದ ಮನುಷ್ಯ ಹೊರಬಂದು ಸಾಂಸತಿಕವಾಗಿ ಮುಂದುವರಿಯಬೇಕಾದರೆ ಪ್ರತಿ ಮನೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ನಿರ್ಮಾಣ ಮಾಡಿದರೆ ಮಕ್ಕಳ ಾನಾರ್ಜನೆ, ಉತ್ತಮ ಪರಂಪರೆಗೆ ನೆರವಾಗಲಿದೆ.

> ಡಾ.ವಿಜಯಕುಮಾರ ಪರೂತೆ

ಹಿರಿಯ ಸಾಹಿತಿ