A leopard caught in a trap while being caught off guard. 
ರಾಜ್ಯ

ಕಾವಲುಬೀಳಲ್ಲಿ ಬೋನಿಗೆ ಬಿದ್ದ ಚಿರತೆ

ತುಮಕೂರು ಡೆಸ್ಕ್
ಕೊರಟಗೆರೆ: ತಾಲೂಕಿನ ಕಾವಲುಬೀಳು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಸುಮಾರು ಎರಡು ವರ್ಷ ವಯಸ್ಸಿನ ಚಿರತೆ ಮರಿಯೊಂದು ಗುರುವಾರ ರಾತ್ರಿ ಸೆರೆಯಾಗಿದೆ.
ಪಟ್ಟಣದ 4ನೇ ವಾರ್ಡ್​ ವ್ಯಾಪ್ತಿಯ ಕಾವಲುಬೀಳು ಗ್ರಾಮದ ನಿವಾಸಿ ರಮೇಶ್​ ಅವರ ನಾಯಿಯ ಮೇಲೆ ಮಂಗಳವಾರ ಚಿರತೆ ದಾಳಿ ನಡೆಸಿದ್ದರಿಂದ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಅಧಿಕಾರಿಗಳು ಬೋನನ್ನು ಇರಿಸಿದ್ದರು
.
ವಿಷಯ ತಿಳಿದ ಕೂಡಲೇ ಡಿಆರ್​ಎಫ್​ಒ ದಿಲೀಪ್​ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಚಿರತೆಯನ್ನು ಸುರಕ್ಷಿತವಾಗಿ ಬೇರೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.