ಸ್ವಾಭಿಮಾನದ ಸಂದೇಶ ಸಾರಿದ ನೇತಾರ self-respect 
ರಾಜ್ಯ

ಸ್ವಾಭಿಮಾನದ ಸಂದೇಶ ಸಾರಿದ ನೇತಾರ self-respect

ಮಾಲೂರು: ಸಮಾನತೆ, ನ್ಯಾಯ ಮತ್ತು ಸ್ವಾಭಿಮಾನದ ಸಂದೇಶವನ್ನು ಸಂದೇಶ ಸಾರಿದ ಮಹಾನೇತಾರ ಡಾ.ಬಿ.ಆರ್​.ಅಂಬೇಡ್ಕರ್​ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. self-respect
ಮಾಲೂರಿನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಆಡಳಿತ, ತಾಲೂಕ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮಾಲೂರು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಂದು ವರ್ಗದವರಿಗೂ ಮತದಾನದ ಹಕ್ಕನ್ನು ನೀಡಿ ಪ್ರತಿಯೊಬ್ಬರೂ ಸಮಾನರು ಎಂಬ ಭಾವನೆ ಮೂಡಿಸಿದ ಮಹಾನ್​ ಪುರುಷ ಎಂದು ಹೇಳಿದರು.
ದೇಶದಲ್ಲಿರುವ ಪ್ರತಿಯೊಂದು ವರ್ಗದ ಜನತೆಯು ಮೇಲು&ಕೀಳು ಎಂಬ ಭಾವನೆಯನ್ನು ಮರೆತು ಸಮಾಜದ ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಯಿತು.
ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಗ್ಯಾರಂಟಿ ಯೋಜನೆಗಳ ಸಮಿತಿಯ ತಾಲೂಕು ಅಧ್ಯಕ್ಷ ಎನ್​.ಆಂಜಿನಪ್ಪ, ನಿವೃತ್ತ ಉಪನಿರ್ದೇಶಕರಾದ ವೆಂಕಟೇಶಪ್ಪ, ರಾಮಚಂದ್ರಪ್ಪ ಇದ್ದರು.