ಯಾದಗಿರಿಯಲ್ಲಿ ಬುಧವಾರ ಆಯೋಜಿಸಿದ್ದ ಆದ್ಯ ವಚನಕಾರ ಜೇಡರ ದಾಸಿಮಯ್ಯ ಹಾಗೂ ತ್ರಿವಿಧ ದಾಸೋಯಿ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ದಾಸಬಾಳ ಮಠದ ಶ್ರೀ, ರಾಚಣ್ಣಗೌಡ ಮುದ್ನಾಳ್​, ಮಹೇಶರಡ್ಡಿ ಮುದ್ನಾಳ್​ ಇತರರಿದ್ದರು. 
ರಾಜ್ಯ

ಯಾದಗಿರಿಯಲ್ಲಿ ಸಂಭ್ರಮದ ಜಯಂತ್ಯೋತ್ಸವ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ದಾಸಬಾಳದ ವೀರೇಶ್ವರ ಸ್ವಾಮೀಜಿ ಅಭಿಮತ
  • ದಾಸಿಮಯ್ಯ-ಶಿವಕುಮಾರ ಶ್ರೀಗಳ ಜಯಂತಿ ಆಚರಣೆ
  • ವಿದ್ಯಾವಂತ ಸಮಾಜ ಕಟ್ಟಿದ ಶಿವಕುಮಾರ ಶ್ರೀ
ಯಾದಗಿರಿ: ಪ್ರಪ್ರಥಮ ವಚನಕಾರ ಜೇಡರ ದಾಸಿಮಯ್ಯ ಅವರು ವಚನಗಳ ಮೂಲಕ ಸಮಾಜವನ್ನು ತಿದ್ದಿದರೇ, ಶತಮಾನದ ಸಂತ ಶತಾಯುಷಿ ಸಿದ್ಧಗಂಗಾದ ಲಿಂ.ಡಾ.ಶಿವಕುಮಾರ ಸ್ವಾಮೀಜಿ ಅನ್ನ, ಅರ ದಾಸೋಹದ ಮೂಲಕ ವಿದ್ಯಾವಂತ ಸಮಾಜ ನಿರ್ಮಾಣ ಮಾಡಿದ್ದಾರೆ ಎಂದು ದಾಸಸಬಾಳಧೀಶ್ವರ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ನುಡಿದರು.
ಜಿಲ್ಲಾ ಕುರುಹಿನಶೆಟ್ಟಿ ಸಮಾಜದಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ಜೇಡರ ದಾಸಿಮಯ್ಯ ಹಾಗೂ ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೇಡರ ದಾಸಿಮಯ್ಯ ಅವರ ಪ್ರತಿ ವಚನವೂ ಮಾನವ ಕುಲಕೋಟಿಯ ಉದ್ಧಾರದ ಕುರಿತು ಬರೆದಿದ್ದಾಗಿದೆ. 11ನೇ ಶತಮಾನದಲ್ಲಿಯೇ ವಚನಗಳನ್ನು ಬರೆಯುವ ಮೂಲಕ ವಚನ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ ಎಂದರು. ಕುರುಹಿನಶೆಟ್ಟಿ ಸಮಾಜದಲ್ಲಿ ಜನಸಂಖ್ಯೆ ಕಡಿಮೆ ಇರಬಹುದು, ಆದರೆ ಸಮಸ್ತ ಜನರ ಮಾನ ಮುಚ್ಚಲು ಬಟ್ಟೆ ನೆಯ್ದು ಕೊಡುವ ಸಮಾಜ ಇದಾಗಿದೆ. ಅದಕ್ಕಾಗಿ ಇದರಂತಹ ಶ್ರೀಮಂತರ ಮನಸ್ಸಿನ ಸಮಾಜ ಮತ್ತೋಂದಿಲ್ಲ ಎಂದು ಶ್ರೀಗಳು ನುಡಿದರು.
ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​ ಮಾತನಾಡಿ, ಆದ್ಯ ವಚನಕಾರ ಜೇಡರ ದಾಸಿಮಯ್ಯ ನಮ್ಮ ಗಿರಿಜಿಲ್ಲೆಯ ಮುದನೂರಿನವರು ಎಂಬ ಹೆಮ್ಮೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ವಚನಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ನಾಳ್​ ಮಾತನಾಡಿ, ಜೇಡರ ದಾಸಿಮಯ್ಯ ಅವರ ಪ್ರತಿ ವಚನಗಳು ಸಹ ಮಾನವ ಬದುಕಿನ ಕುರಿತಾಗಿವೆ. ಸಂಸಾರದ ಜಂಜಾಟದಲ್ಲಿ ಹೇಗೆ ಯಶಸ್ಸಿ ಜೀವನ ನಮ್ಮದಾಗಿಸಿಕೊಳ್ಳಬೇಕೆಂಬ ಬಗ್ಗೆ ಅವರು ತಿಳಿಸಿದ್ದಾರೆ. ಕಾಯಕ ಜೀವಿಗಳಾಗಿದ್ದುಕೊಂಡೆ ವಚನಗಳನ್ನು ರಚಿಸಿ ಅವುಗಳನ್ನು ಸಮಾಜಕ್ಕೆ ನೀಡುವ ಮೂಲಕ ಮಹಾನ್​ ಸಾಧನೆ ಮಾಡಿದ್ದಾರೆ ಎಂದರು.
ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಜಿಲ್ಲಾಧ್ಯ ಶಾಂತಪ್ಪ ನಿಡಗುಂದಾ ಅಧ್ಯತೆ ವಹಿಸಿದ್ದರು.
ಸಮಾಜದ ರಾಜ್ಯ ನಿರ್ದೇಶಕ ಕುಶಾಲ ಯಡವಳ್ಳಿ ಮಾತನಾಡಿದರು. ಡಾ.ಎಂ.ಬಿ.ಕಟ್ಟಿ ಉಪನ್ಯಾಸ ನೀಡಿದರು. ಜಿಲ್ಲಾ ಗೌರವಾಧ್ಯ ಮಲ್ಲೆಶಪ್ಪ ಬೇಲಿ, ಉಪಾಧ್ಯೆ ಸುಮಾ ವಿರೇಂದ್ರ ಜೋತಾ, ಕಲಬುರಗಿ ಜಿಲ್ಲಾ ಸಮಾಜದ ಪದಾಧಿಕಾರಿಗಳಾದ ಬಸವರಾಜ ಕರದಳ್ಳಿ, ಚಂದ್ರಶೇಖರ ಮ್ಯಾಳಗಿ, ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಚನ್ನಮಲ್ಲಿಕಾರ್ಜುನ ಗುಂಡಾನೋರ್​, ಶ್ರೀಶೈಲ ಯಡವಳ್ಳಿ, ಶಿವಲಿಂಗಪ್ಪ ಸುಲಹಳ್ಳಿ, ಬಾಬುರಾವ ಹಳ್ಳಿ, ಸಿ.ಬಿ. ಬಾಗೋಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಗಿರೀಶ ಪಾಟೀಲ್​ ನಿರೂಪಿಸಿದರು. ಮಹೇಶ ನಾಯ್ಕಲ್​ ಪ್ರಾರ್ಥಿಸಿದರು.
ಮುಖಂಡರಾದ ಮುತ್ತಪ್ಪ ಗಡೇದಗೌಡರ, ಮಲ್ಲಿಕಾರ್ಜುನ ಚಂದ್ರಿಕಿ, ಶಿವಪುತ್ರಪ್ಪ ಬೇಲಿ, ಜಗದೀಶ ಜೋತಾ, ರಾಜು ಪಾಟೀಲ್​, ಬಸವರಾಜ ಬೇಲಿ,ಕರಣಪ್ಪ ಜೋತಾ,ವಿರುಪಾ ಇಂಗಳಗಿ,ಸಿದ್ದು ಕುಲಾಟೆ, ಸಿದ್ದು ಸೊಲ್ಲಾಪುರ,ನೀಲಕಂಠ ಶಿವಪುರೆ, ನೀಲಕಂಠ ದಂಡೋತಿ, ಶಿವರಾಜ ರಾಜಪುರೆ, ಕರಣಪ್ಪ ಚಂದ್ರಿಕಿ, ಸುಧಾ ಅಮ್ಮಾಪೂರ, ಅನೀಲ ಕರದಳ್ಳಿ ಇತರರಿದ್ದರು.

ಸಣ್ಣ ಸಮಾಜ ಎಂದು ನೀವ್ಯಾರು ಹೇಳುವುದು ಬೇಡ. ವೀರಶೈವ ಲಿಂಗಾಯತರಾದ ನಾವೆಲ್ಲರೂ ಒಂದೇ ಆಗಿದ್ದೇವೆ. ನಿಮ್ಮ ಯಾವುದೇ ಕೆಲಸ, ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇರುತ್ತದೆ.

> ಮಹೇಶರೆಡ್ಡಿ ಮುದ್ನಾಳ್​

ಯುವ ಮುಖಂಡರು

ಸಿದ್ಧಗಂಗಾದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು ಲಾಂತರ ಮಕ್ಕಳಿಗೆ ಅನ್ನ, ಶಿಣ ನೀಡುವ ಮೂಲಕ ನಮ್ಮ ಕಣ್ಣಿಗೆ ಕಾಣುವ ನಿಜವಾದ ನಡೆದಾಡುವ ದೇವರಾಗಿದ್ದರು. ಅವರ ಆಶ್ರಯದ ಬಳ್ಳಿಗಳು ಜಗತ್ತಿನ ಎಲ್ಲೆಡೆ ಹಬ್ಬಿವೆ.

> ರಾಚಣ್ಣಗೌಡ ಮುದ್ನಾಳ್​

ಹಿರಿಯ ಬಿಜೆಪಿ ಮುಖಂಡರು