ಕಾಶೀ ಜಗದ್ಗುರುಗಳ ಜನ್ಮದಿನೋತ್ಸವ ಸಮಾರಂಭದಲ್ಲಿ ಸಿಆರ್‌ಪಿಎಫ್ ಕಮಾಂಡರ್ ರಾಜಶೇಖರ ಶಿವಲಿಂಗಯ್ಯ ಅವರಿಗೆ ‘ರಾಷ್ಟ್ರಧರ್ಮ ಸೇವಾ ಶಿರೋಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ರಾಜ್ಯ

ಪರೋಪಕಾರದಿಂದ ಮನುಷ್ಯನ ಜೀವನ ಸಾರ್ಥಕ; ಕಾಶೀ ಜಗದ್ಗುರುಗಳ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಪರೋಪಕಾರದಿಂದ ಮನುಷ್ಯನ ಜೀವನ ಸಾರ್ಥಕ
  • ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಭಿಮತ
  • ಜಂಗಮವಾಡಿ ಮಠದಲ್ಲಿ 80ನೇ ಜನ್ಮದಿನೋತ್ಸವ ಕಾರ್ಯಕ್ರಮ

ವಾರಾಣಸಿ: ಪ್ರಕೃತಿಮನುಷ್ಯನಿಗೆ ಪರೋಪಕಾರದ ಸಂದೇಶವನ್ನುನೀಡಿದ್ದು,ಅದನ್ನು ಸರಿಯಾಗಿಅರ್ಥಮಾಡಿಕೊಂಡು ಬದುಕುರೂಢಿಸಿಕೊಳ್ಳುವುದರಿಂದ ಮನುಷ್ಯನಜೀವನ ಸಾರ್ಥಕವಾಗುತ್ತದೆ ಎಂದುಕಾಶೀ ಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.

ಕಾಶೀಜಂಗಮವಾಡಿ ಮಠದಲ್ಲಿ ವಿವಿಧಪ್ರಾಂತ್ಯಗಳ ಭಕ್ತರು ಮಂಗಳವಾರಹಮ್ಮಿಕೊಂಡಿದ್ದ ಜಗದ್ಗುರುಗಳ80ನೇಜನ್ಮದಿನೋತ್ಸವ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು. ಗಿಡಮರಗಳುಹಣ್ಣು, ನೆರಳನ್ನುನೀಡುತ್ತವೆ,ನದಿಗಳು ನೀರನ್ನುನೀಡುತ್ತವೆ,ಮೇಘಗಳು ಮಳೆಯನ್ನುಸುರಿಸುತ್ತವೆ,ಪಶುಗಳು ಕೂಡಾಮನುಷ್ಯನಿಗೆ ಉಪಕಾರಿಯಾಗಿ ಕೆಲಸಮಾಡುತ್ತವೆ.ಅಂತೆಯೇ ಮನುಷ್ಯಸ್ವಾರ್ಥವನ್ನು ಬಿಟ್ಟು ಪರೋಪಕಾರಿಯಾದರೆಲೋಕ ಕಲ್ಯಾಣದ ಜೊತೆಗೆ ಆತನಆತ್ಮಕಲ್ಯಾಣವೂ ಆಗುತ್ತದೆ.ಪ್ರತಿಯೊಬ್ಬರುಈ ಮಹತ್ವವನ್ನು ನೆನಪಿಸಿಕೊಳ್ಳಲುಇರುವ ಕಾಲವೇ ಜನ್ಮದಿನೋತ್ಸವ.ಜನ್ಮದಿನೋತ್ಸವದಂದುಎಲ್ಲರೂ ಸಮಾಜಮುಖಿಯಾದ ಕೆಲಸವನ್ನುಮಾಡಬೇಕು ಎಂದು ಜಗದ್ಗುರುಗಳುಕರೆ ನೀಡಿದರು.

ಜಗದ್ಗುರುಗಳಜನ್ಮದಿನೋತ್ಸವದ ಹಿನ್ನೆಲೆಯಲ್ಲಿಪ್ರಾತಃಕಾಲ ಜಗದ್ಗುರು ವಿಶ್ವಾರಾಧ್ಯರಿಗೆಮಹಾರುದ್ರಾಭಿಷೇಕ,ಸಾಮೂಹಿಕ ಇಷ್ಟಲಿಂಗಪೂಜೆ ನಡೆಯಿತು.ಸಂಜೆ ವೀರಶೈವಪಂಚಸೂತ್ರೀಯಂ ಮಹಾಕಾವ್ಯ ಕುರಿತುಪ್ರವಚನ ನಡೆಯಿತು.ಇದೇ ವೇಳೆಶ್ರೀದಿಗಂಬರ ಶಿವಾಚಾರ್ಯ ಸ್ವಾಮೀಜಿ,ಶ್ರೀಶಿವಲಿಂಗಶಿವಾಚಾರ್ಯ ಸ್ವಾಮೀಜಿ ಹಾಗೂಶ್ರೀಮಹಾದೇವ ಶಿವಾಚಾರ್ಯ ಸ್ವಾಮೀಜಿಅವರು ಕೈಗೊಂಡಿದ್ದ 10ದಿನಗಳ ಅನುಷ್ಟಾನಮಂಗಲವಾಯಿತು.ಮಹಾರಾಷ್ಟ್ರ,ಕರ್ನಾಟಕ,ತೆಲಂಗಾಣ,ದೆಹಲಿ,ಹರ್ಯಾಣ,ರಾಜಸ್ಥಾನ,ಓರಿಸ್ಸಾ ಸೇರಿದಂತೆದೇಶದ ವಿವಿಧ ಪ್ರಾಂತ್ಯಗಳಿಂದಆಗಮಿಸಿದ್ದ ಭಕ್ತರು ಜಗದ್ಗುರುಗಳಿಗೆಗುರುವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿಕಾಶೀ ವಿಶ್ವನಾಥ ದೇವಾಲಯದ ಭದ್ರತಾಮುಖ್ಯಸ್ಥರಾದ,ಸಿಆರ್‌ಪಿಎಫ್ಕಮಾಂಡರ್ ರಾಜಶೇಖರ ಶಿವಲಿಂಗಯ್ಯಅವರಿಗೆ ‘ರಾಷ್ಟ್ರಧರ್ಮ ಸೇವಾಶಿರೋಮಣಿ’ ಎಂಬ ಪ್ರಶಸ್ತಿ ನೀಡಿಗೌರವಿಸಲಾಯಿತು.ಸಮಾರಂಭದಲ್ಲಿಕಾಶೀ ಪಂಡಿತರಾದ ಡಾ.ಕಮಲೇಶ್ ಜಾ,ಡಾ.ವಿನೋದಪಾಠಕ್, ಮಹಾಪೀಠದವ್ಯವಸ್ಥಾಪಕ ಆರ್.ಕೆ.ಸ್ವಾಮಿ,ನಳಿನಿ ಚಿರಮೆ,ಶಿವಾನಂದ ಹಿರೇಮಠ,ಸುಭಾಷ್ ಮಮಾಣೆಮತ್ತಿತರರು ಪಾಲ್ಗೊಂಡಿದ್ದರು.