ಕರಜಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಪಾರ ಭಕ್ತರ ಜೈೂಷದೊಂದಿಗೆ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.
- ಶ್ರೀಶೈಲ ಜಗದ್ಗುರು ವ್ಯಾಖ್ಯಾನ
- ಕರಜಗಿಯಲ್ಲಿ ಶ್ರೀ ಮಲ್ಲಿಕಾರ್ಜು ದೇವಸ್ಥಾನ ಜಾತ್ರೋತ್ಸವ
ಕರಜಗಿ: ಧರ್ಮವಿಲ್ಲದ ಮನುಷ್ಯ ಪ್ರಾಣಿಗೆ ಸಮಾನ. ಆದ್ದರಿಂದ ಪ್ರತಿಯೊಬ್ಬರೂ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮದಲ್ಲಿರುವ ನೈತಿಕ ಮೌಲ್ಯ, ಸಾಮಾಜಿಕ ಚಿಂತನೆ, ಧಾರ್ಮಿಕ ವಿಚಾರ ಪಾಲಿಸುವುದು ಅತ್ಯಂತ ಮುಖ್ಯ. ಸುಳ್ಳು ಹೇಳುವುದು, ಹಿಂಸೆ ನಡೆಸುವುದು, ಕಳ್ಳತನ ಮಾಡುವುದು ಇವುಗಳೆಲ್ಲವೂ ಅಧರ್ಮದ ಲಣಗಳಾಗಿವೆ. ಪ್ರತಿಯೊಬ್ಬರೂ ತಮ್ಮ ಧರ್ಮ ಆಚರಣೆ ಮಾಡುವುದರ ಜತೆಗೆ ಇತರ ಧರ್ಮದವರ ಭಾವನೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿದರು. ಪಾನ ಮಂಗಳೂರಿನ ಶ್ರೀ ಶಿವಯೋಗಿ ಶಿವಾಚಾರ್ಯ, ಅಳ್ಳಗಿ (ಬಿ) ಶ್ರೀ ಶಾಂತಲಿಂಗ ಶಿವಾಚಾರ್ಯ, ಮಾಶಾಳದ ಶ್ರೀ ಮರುಳಾರಾಧ್ಯ ಶಿವಾಚಾರ್ಯ, ದೇವಸ್ಥಾನ ಟ್ರಸ್ಟ್ ಅಧ್ಯ ಅಪ್ಪಾರಾವ್ ಅಕ್ಕಲಕೋಟ, ಜಿಪಂ ಮಾಜಿ ಅಧ್ಯ ನಿತೀನ್ ಗುತ್ತೇದಾರ್, ರಮೇಶ್ ಬಾಕೆ, ರಾಜು ಜಿಡ್ಡಗಿ, ಸಿದ್ದು ಹಳಗೋಧಿ, ಮಾಂತೂ ಹಿರೇಮಠ, ಗಡ್ಡೆಪ್ಪ ದೇವಣಗಾಂವ್, ಹನಮಂತ ಮೇತ್ರೆ, ನೀಲಕಂಠ ಪರಿಟ್, ಕಲ್ಲು ಕಾಮಗೊಂಡ, ನಿಂಗಪ್ಪ ಕೊನಳ್ಳಿ ಇತರರಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಶ್ರೀಶೈಲ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.