A human being is born successful when he lives with love and faith.
ಶಿರಾ: ಸ್ವಾರ್ಥ ಬಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದರೆ ಮನುಷ್ಯ ಜನ್ಮ ಸಾರ್ಥಕತೆ ಕಾಣಲಿದೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಸಂಬಂಧಗಳನ್ನು ಗಟ್ಟಿಗೊಳಿಸಲು ಸಾಧ್ಯ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಆದಿಶಕ್ತಿ ಶ್ರೀದೇವಿ, ಆಂಜನೇಯ ಸ್ವಾಮಿ ದೇವತಾ ಶಿಲಾಮೂರ್ತಿಗಳ ಸ್ಥಿರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಪೂಜೆ ಮಾಡುವುದರಿಂದ ಮುಕ್ತಿ ಸಿಗುವುದಿಲ್ಲ, ನಿಷ್ಕಲ್ಮಶ ಮುಗ್ಧ ಮನಸ್ಸಿನ ಆರಾಧನೆ ದೇವರಿಗೆ ಹೆಚ್ಚು ಸಂತೋಷ ನೀಡಲಿದೆ ಎಂದರು.
ಶಿರಾ ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯ ಪ್ರಕಾಶ್ ಮಾತನಾಡಿ, ಕೆಕೆ ಪಾಳ್ಯ ಗ್ರಾಮದಲ್ಲಿ ನೂತನ ದೇವಸ್ಥಾನ ನಿಮಾರ್ಣ ಮಾಡಬೇಕೆಂಬ ಎಂಟು ವರ್ಷಗಳ ಪ್ರಯತ್ನ ಫಲ ನೀಡಿದೆ ಎಂದರು.
ಗುತ್ತಿಗೆದಾರ ಪ್ರಕಾಶ್, ಗ್ರಾಪಂ ಮಾಜಿ ಸದಸ್ಯರಾದ ಚಿಕ್ಕಸಿದ್ದಪ್ಪ, ಶಾರದಮ್ಮ ರಂಗಸ್ವಾಮಿ, ಕೆ.ಸಿ.ಶಿವಣ್ಣ, ಕೆ.ಆರ್.ಸತೀಶ್, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.