ನಾಪೋಕ್ಲುವಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಸೋಮವಾರದ ರೋಚಕ ಪಂದ್ಯ. 
ರಾಜ್ಯ

ಮಾಚಿಮಂಡ, ನಂಬುಡುಮಾಡ ತಂಡಕ್ಕೆ ಭರ್ಜರಿ ಗೆಲುವು

ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಹಲವು ಪಂದ್ಯಗಳಲ್ಲಿ ಮಾಚಿಮಂಡ, ನಂಬುಡುಮಾಡ, ಬಿದ್ದಂಡ, ಬಲ್ಲಚಂಡ, ಕುಪ್ಪಂಡ ನಾಂಗಾಲ, ಅಮ್ಮಣಿಚಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು.
ಮಾಚಿಮಂಡ ಮತ್ತು ಕೆಟೋಳಿರ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಿಮಂಡ ಕೇಟೋಳಿರ ವಿರುದ್ಧ 6-0 ಅಂತರದ ಗೆಲುವು ಸಾಧಿಸಿತು. ನಂಬುಡುಮಾಡ ಚೇಂದ್ರಿಮಾಡ (ಬಲ್ಯಮನೆ) 5-0 ಅಂತರದ ಗೆಲುವು ಸಾಧಿಸಿತು. ಬಿದ್ದಂಡ ಮತ್ತು ಕೈಪಟ್ಟೀರ ವಿರುದ್ಧ 6-1 ಅಂತರದ ಗೆಲುವು ಸಾಧಿಸಿತು. ಬಲ್ಲಚಂಡ ಪಟ್ಟಡ ವಿರುದ್ಧ 5-0 ಆಂತರದ ಗೆಲುವು ಸಾಧಿಸಿದರೆ, ಕುಪ್ಪಂಡ (ನಾಂಗಾಲ) ಚೆರಿಯಂಡ ವಿರುದ್ಧ 5-1ರಲ್ಲಿ, ಅಮ್ಮಣಿಚಂಡ ಮುಂಡಂಡ ವಿರುದ್ಧ 5-0 ರಲ್ಲಿ ಜಯ ಸಾಧಿಸಿದವು.
ಉಳಿದಂತೆ ನೆರವಂಡ ಕಾಂಗೀರ ವಿರುದ್ಧ 4-0ರಲ್ಲಿ, ಅಪ್ಪನೆರವಂಡ ಅಪ್ಪುಮಣಿಯಂಡ ವಿರುದ್ಧ 3-0ರಲ್ಲಿ, ಮೇಚಿಯಂಡ ಮತ್ತು ಕೋಡಿರ ವಿರುದ್ಧ 2-1ರಲ್ಲಿ, ಕೋದಂಡ ಮೂವೇರ ವಿರುದ್ಧ 1-0ರಲ್ಲಿ, ಮೇಚಂಡ ಬಟ್ಟೀರ ವಿರುದ್ಧ 3-0ರಲ್ಲಿ, ಉದ್ದಿನಾಡಂಡ ಅಮ್ಮಾಟಂಡ ವಿರುದ್ಧ 3-1ರಲ್ಲಿ, ಕರವಟ್ಟೀರ ಚೋಕಿರ ವಿರುದ್ಧ 1-0ರಲ್ಲಿ, ಮುರುವಂಡ ಐನಂಡ ವಿರುದ್ಧ 3-0ರಲ್ಲಿ, ಕಲಿಯಂಡ ಕಲ್ಕಂಡ ವಿರುದ್ಧ 2-0ರಲ್ಲಿ ಮುನ್ನಡೆ ಸಾಧಿಸಿದವು. ಪುಟ್ಟಿಚಂಡ ಅನ್ನಡಿಯಂಡ ವಿರುದ್ಧ 4-0 ಗೆಲುವು ಸಾಧಿಸಿತು.
ಚೆರುವಾಳಂಡ ಮತ್ತು ಮಚ್ಚಮಾಡ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್ ನಲ್ಲಿ ಮಚ್ಚಮಾಡ ತಂಡ 5-4 ಅಂತರದಲ್ಲಿ ಜಯಭೇರಿ ಬಾರಿಸಿತು. ಕಲ್ಯಾಟಂಡ ಮತ್ತು ಬಡುವಮಂಡ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿದವು. ಬಳಿಕ ಟೈ ಬ್ರೇಕರ್ ನಲಿ ್ಲಕಲ್ಯಾಟಂಡ ತಂಡ 4-2 ಅಂತರದಲ್ಲಿ ಜಯಭೇರಿ ಬಾರಿಸಿತು.ತೀತಿಮಾಡ ಮತ್ತು ತೆಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ತೀತಿಮಾಡ ತಂಡ 3-1ರಲ್ಲಿ ತೆಕ್ಕಡ ವಿರುದ್ಧ ಗೆಲುವು ಸಾಧಿಸಿತು.