ಲಿಂಗಸುಗೂರಿನ ಜಿಪಂ ಇಂಜಿನಿಯರಿಂಗ್ ಕಚೇರಿಯಲ್ಲಿ ಅಧಿಕಾರಿಗಳು ರಾತ್ರಿ ಭರ್ಜರಿ ಗುಂಡು, ತುಂಡಿನ ಪಾರ್ಟಿಯಲ್ಲಿ ತೊಡಗಿರುವುದು. 
ರಾಜ್ಯ

ಸರ್ಕಾರಿ ಕಚೇರಿಯಲ್ಲೇ ಭರ್ಜರಿ ಗುಂಡು, ತುಂಡು ಪಾರ್ಟಿ

ಪ್ರಮುಖ ಮುಖ್ಯಾಂಶಗಳು

  • ಕಚೇರಿಯನ್ನೇ ಅಡ್ಡೆ ಮಾಡಿಕೊಂಡ ಸಿಬ್ಬಂದಿ
  • ಮೋಜು ಮಸ್ತಿ - ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ
ಲಿಂಗಸುಗೂರು: ಪಟ್ಟಣದ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಸಿಬ್ಬಂದಿ ಗುಂಡು, ತುಂಡಿನ ಭರ್ಜರಿ ಪಾರ್ಟಿ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. 
ಮೇ ಮತ್ತು ಜೂನ್‌ನಲ್ಲಿ ಕಚೇರಿಯ ಅವಧಿ ಬದಲಾವಣೆ ಮಾಡಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರವರೆಗೆ ನಿಗದಿಪಡಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 9 ಗಂಟೆಯಾದರೂ ಕಚೇರಿಗೆ ಬಂದಿರಲ್ಲ. ಮಧ್ಯಾಹ್ನ 1:30 ನಂತರ ಕಚೇರಿ ಕಡೆ ಸುಳಿಯುವುದಿಲ್ಲ. 
ಆದರೆ, ಕಳೆದ ಶುಕ್ರವಾರ ರಾತ್ರಿ ಕಚೇರಿ ಸಿಬ್ಬಂದಿ, ಕೆಲ ನಿವೃತ್ತ ನೌಕರರು ಗುಂಡು, ತುಂಡಿನ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. 

ಎಫ್‌ಡಿಸಿ, ಕಂಪ್ಯೂಟರ್ ಆಪರೇಟರ್ ಕಚೇರಿಯಲ್ಲಿ ಪಾರ್ಟಿ ಮಾಡಿರುವುದು ಗಮನಕ್ಕೆ ಬಂದಿದೆ. ಜವಾಬ್ದಾರಿಯುತ ಸರ್ಕಾರಿ ನೌಕರರು ನಡೆಸಿದ ಪಾರ್ಟಿ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು.

— ಹನುಮಪ್ಪ ಆದವಾನಿ ಎಇಇ, ಜಿಪಂ ಇಂಜಿನಿಯರಿಂಗ್ ಉಪ ವಿಭಾಗ