tree ಬೆಂಗಳೂರು ಉತ್ತರ ತಾಲೂಕು ರಾಮ್​ಜೀಪಾಳ್ಯದಲ್ಲಿ ನೆಲಕ್ಕುರುಳಿದ ಬೃಹತ್​ ಅರಳಿ ಮರ.  
ರಾಜ್ಯ

ನೆಲಕ್ಕುರುಳಿದ ಬೃಹತ್​ ಅರಳಿ ಮರ tree

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ರಾಮ್​ಜೀಪಾಳ್ಯದಲ್ಲಿ tree ಭಾನುವಾರ ಬೀಸಿದ ಬಿರುಗಾಳಿಗೆ ಎರಡು ಶತಮಾನದ ಬೃಹತ್​ ಅರಳಿ ಮರ ನೆಲಕ್ಕುರುಳಿದೆ.
ಗ್ರಾಮದಲ್ಲಿ 250 ವರ್ಷಕ್ಕೂ ಹಿಂದೆ ನಿರ್ಮಿಸಿದ್ದ ಅಶ್ವತ್ಥ ಕಟ್ಟೆಯಲ್ಲಿ ನೆಟ್ಟಿದ್ದ ಅರಳಿಮರ ಬೃಹದಾಕಾರವಾಗಿ ಬೆಳೆದುಕೊಂಡಿತ್ತು. ಕೆಲ ತಿಂಗಳ ಹಿಂದೆ ಸುರಿದಿದ್ದ ಬಾರಿ ಮಳೆ ಗಾಳಿಯಿಂದಾಗಿ ಮರದ ಕೊಂಬೆಯೊಂದು ಮುರಿದ್ದು ಬಿದ್ದಿತ್ತು. ಇದೀಗ ಭಾನುವಾರ ಬೀಸಿದ ಬಾರಿ ಬಿರುಗಾಳಿಗೆ ಅರಳಿಮರ ನೆಲಕ್ಕುರುಳಿದೆ.
ನಿವಾಸಿಗಳಾದ ಮಾರನರಸಯ್ಯ ಮತ್ತು ರಾಜಣ್ಣ ಸಹೋದರರು ವಾಸವಿದ್ದ ಮನೆಯ ಮೇಲೆ ಮರಬಿದ್ದಿದ್ದರೂ ಯಾವುದೇ ಹಾನಿಯಾಗಿಲ್ಲ. ಆದರೆ ಮನೆ ಬಳಿ ಕಟ್ಟಿದ್ದ ಕುರಿ ಮರಿಯೊಂದು ಮೃತಪಟ್ಟಿದೆ. ಮರದ ಕೊಂಬೆಗಳು ವಿದ್ಯುತ್​ ಕಂಬ ಹಾಗೂ ಪಕ್ಕದಲ್ಲಿದ್ದ ಅಡಿಕೆ ತೋಟದಲ್ಲಿ ಬಿದ್ದಿದ್ದು, ಕೆಲ ಅಡಿಕೆ ಮರಗಳು ಮುರಿದಿವೆ. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.