ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮಧ್ಯಪ್ರಾಚ್ಯದೇಶಗಳಲ್ಲಿ ತಲೆದೋರಿದ್ದ ಯುದ್ಧದವಾತಾವರಣ ಕಳೆದೊಂದು ತಿಂಗಳಿನಿಂದಇಡೀ ಜಗತ್ತಿನ ಮೇಲೆ ಪರಿಣಾಮಬೀರಿದೆ. ವಿಶೇಷವಾಗಿಇಂಧನ ಸರಬರಾಜಿನಲ್ಲಿ ಭಾರಿವ್ಯತ್ಯಾಸಗಳಾಗುತ್ತಿದ್ದು,ಇಂಧನ ಉಳಿತಾಯಕ್ಕೆಮನೆಯಲ್ಲೇ ಕೆಲವು ಸರಳ ಉಪಾಯಗಳನ್ನುಪಾಲಿಸಬೇಕಾದ ಅಗತ್ಯವಿದೆ.ಹೊಸದಾಗಿ ಮನೆನಿರ್ಮಿಸುವವರು ಈ ಬಗ್ಗೆ ಗಮನಹರಿಸುವುದು ಅವಶ್ಯಕ.
ಯುದ್ಧದಪರಿಸ್ಥಿತಿ ತಲೆದೋರುತ್ತಲೆ ಇಡೀಜಗತ್ತಿನಲ್ಲಿ ಇಂಧನದ ಅಭಾವಜನರನ್ನು ತೊಂದರೆಗೆ ಸಿಲುಕಿಸಿದೆ.ಕೆಲವೇ ರಾಷ್ಟ್ರಗಳಲ್ಲಿಸ್ವಂತ ಇಂಧನದ ಮೂಲವಿದ್ದರೂ,ಪರ್ಯಾಯವಾಗಿಆಹಾರ ಮತ್ತಿತರ ವಸ್ತುಗಳ ಅಭಾವವನ್ನುಆ ದೇಶಗಳು ಎದುರಿಸುತ್ತಿವೆ.ಬಹುಮುಖ್ಯವಾಗಿಕೊಲ್ಲಿ ರಾಷ್ಟ್ರಗಳಿಂದ ಜಗತ್ತಿಗೆಬಹುಪಾಲು ಇಂಧನ ಸರಬರಾಜಾಗುವುದರಿಂದ,ಅದೇ ಪ್ರದೇಶದಲ್ಲಿಯುದ್ಧ ಆರಂಭವಾದ ಹಿನ್ನೆಲೆಯಲ್ಲಿಭಾರತ ಸೇರಿದಂತೆ ಹಲವು ರಾಷ್ಟ್ರಗಳಗ್ಯಾಸ್ ವಿತರಣೆಯಲ್ಲಿ ವ್ಯತ್ಯಾಸವಾಗಿಗೃಹಿಣಿಯರು ಸಮಸ್ಯೆಯನ್ನುಎದುರಿಸುತ್ತಿದ್ದಾರೆ.ವಾಸ್ತವದಲ್ಲಿಇಂತಹ ಸಮಸ್ಯೆಗಳು ತಲೆದೋರಿದಾಗತಲೆಮೇಲೆ ಕೈಹೊತ್ತೂ ಕೂರುವ ಬದಲುಹೊಸಮನೆ ಕಟ್ಟುವಾಗಲೇ ಆ ಬಗ್ಗೆಒಂದಿಷ್ಟು ಮುಂಜಾಗ್ರತೆ ವಹಿಸಬೇಕಾದಅಗತ್ಯವಿದೆ.
ಒಂದುಮನೆ ಎಂದಾಗ ಅಡುಗೆಮನೆ,ಬಚ್ಚಲುಮನೆಗಳಲ್ಲಿಇಂಧನದ ಅವಶ್ಯಕತೆ ಹೆಚ್ಚಾಗಿರುತ್ತದೆ.ಅದ್ದರಿಂದ ಈಎರಡೂ ಕಡೆ ಹೆಚ್ಚಿನ ಎಚ್ಚರಿಕೆವಹಿಸಬೇಕು.ಆಧುನಿಕ ಶೈಲಿಯಗ್ಯಾಸ್ ಸ್ಟೋಗಳನ್ನು ಬಳಸುವುದರಿಂದಅಗತ್ಯಕ್ಕಿಂತ ಹೆಚ್ಚಿಗೆ ಗ್ಯಾಸ್ಖರ್ಚಾಗುವುದನ್ನು ತಡೆಗಟ್ಟಬಹುದು.ಎಲ್‌ಪಿಜಿ ಸೇವ್ನೆಟ್ ಎಂಬ ಬರ್ನರ್ ಜಾಲರಿಯನ್ನುಬಳಸಬೇಕು. ಗ್ಯಾಸ್ಲೀಕೇಜ್ ಬಗ್ಗೆ ಸಣ್ಣ ಅನುಮಾನಬಂದರೂ ತಾತ್ಸಾರ ಮಾಡದೆ ಪರೀಕ್ಷಿಸಿ,ಅಗತ್ಯವಿದ್ದರೆಪೈಪ್‌ಗಳನ್ನು ಬದಲಿಸಬೇಕು.ಕಡ್ಡಾಯವಾಗಿಪ್ರೆಶರ್ ಕುಕ್ಕರ್‌ಗಳನ್ನೇಅಡುಗೆ ಮಾಡಲು ಬಳಸಬೇಕು.ಹಾಲು,ನೀರು,ಬೇರೆ ಯಾವುದೇಪದಾರ್ಥಗಳನ್ನು ಬಿಸಿ ಮಾಡುವಾಗಒಲೆಯ ಮುಂದೆಯೇ ನಿಂತು ಅಗತ್ಯವಿದ್ದಷ್ಟೆಬಿಸಿ ಮಾಡಿಕೊಳ್ಳಬೇಕು.ತರಕಾರಿ,ಬೇಳೆ,ಅಕ್ಕಿಯನ್ನುಕೆಲ ಕಾಲ ನೀರಿನಲ್ಲಿ ನೆನೆಸಿನಂತರ ಬೇಯಿಸಬೇಕು.ಅಡುಗೆ ಮಾಡಲುಬೇಕಾದ ಪಾತ್ರೆ,ಮತ್ತಿತರ ಎಲ್ಲವಸ್ತುಗಳನ್ನು ಸಿದ್ಧಪಡಿಸಿಕೊಂಡನಂತರವೇ ಗ್ಯಾಸ್ ಹಚ್ಚಬೇಕು.ಸಂದಿಗ್ಧಪರಿಸ್ಥಿತಿಯ ಸಂದರ್ಭದಲ್ಲಿಹಣ್ಣು, ಹಸಿತರಕಾರಿಗಳನ್ನು ಹೆಚ್ಚಾಗಿಸೇವಿಸಬೇಕು.ಮನೆಯಲ್ಲಿ ಎಲ್ಲರೂಒಂದೇ ವೇಳೆಗೆ ಕುಳಿತು ಊಟ ಮಾಡುವುದನ್ನುಅಭ್ಯಾಸ ಮಾಡಬೇಕು.ಇದರಿಂದ ಪದೇಪದೇ ಆಹಾರ ಪದಾರ್ಥಗಳನ್ನು ಬಿಸಿಮಾಡುವುದು ತಪ್ಪುತ್ತದೆ.
ನೈಸರ್ಗಿಕಇಂಧನ ಬಳಕೆಗೆ ಒತ್ತು
ಖಾಲಿಯಾಗುವಇಂಧನವನ್ನು ರಕ್ಷಿಸುವ ಉದ್ದೇಶದಿಂದ,ಮನೆಗಳಲ್ಲಿನೈಸರ್ಗಿಕ ಇಂಧನವನ್ನು ಬಳಸುವತ್ತಹೆಚ್ಚು ಗಮನ ನೀಡಬೇಕು.ವಿಶೇಷವಾಗಿಬಚ್ಚಲುಮನೆಗೆ ಕಡ್ಡಾಯವಾಗಿಸೋಲಾರ್ ವಾಟರ್ ಹೀಟರ್ ಅಳವಡಿಸಬೇಕು.ಸಾಧ್ಯ ಇದ್ದವರುಕಡಿಮೆ ಬಿಸಿನೀರು ಅಥವಾ ತಣ್ಣೀರುಸ್ನಾನವನ್ನು ರೂಢಿಸಿಕೊಳ್ಳಬೇಕು.ಮನೆಗಳಿಗೆನೈಸರ್ಗಿಕ ಗಾಳಿ ಮತ್ತು ಬೆಳಕುಬರುವಂತೆ ಕಿಟಕಿಗಳನ್ನು ಬಳಸಬೇಕು.ಎಲ್‌ಇಡಿಬಲ್ಬ್‌ಗಳನ್ನೇ ಉಪಯೋಗಿಸಬೇಕು.ಹಗಲು ವೇಳೆಯಲ್ಲಿವಿದ್ಯುತ್ ದೀಪಗಳನ್ನು ಉರಿಸದಂತೆಎಚ್ಚರ ವಹಿಸಬೇಕು.
ಎಲ್‌ಪಿಜಿಸಂದಿಗ್ಧತೆಯಲ್ಲಿರುವ ಜನತೆಪರ್ಯಾಯ ವ್ಯವಸ್ಥೆಯತ್ತಲೂಚಿತ್ತಹರಿಸಬಹುದು.ಹೋಟೆಲ್ ಮತ್ತಿತರವಾಣಿಜ್ಯ ಆಹಾರ ಕೇಂದ್ರಗಳುಮುಚ್ಚಿದ ರೀತಿ ಮನೆಗಳಲ್ಲಿ ಅಡುಗೆನಿಲ್ಲಿಸಲು ಸಾಧ್ಯವಿಲ್ಲ.ಆದ್ದರಿಂದಎಲೆಕ್ಟ್ರಿಕ್ ಸ್ಟೋ,ಸಣ್ಣ ಕಸ-ಕಡ್ಡಿಗಳನ್ನುಬಳಸಿ ಉರಿಸುವ ಒಲೆಗಳು,ಇದ್ದಿಲು ಒಲೆ,ಎಲೆಕ್ಟ್ರಿಕ್ಓವೆನ್, ಎಲೆಕ್ಟ್ರಿಕ್ಕ್ಯಾಟಲ್, ಸೋಲಾರ್ಸಾಧನಗಳ ಬಳಕೆಗೆ ಅವಕಾಶವುಂಟು.