ಸುರಪುರ ತಾಲೂಕಿನ ದೇವಪುರದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಬುಧವಾರ ಸಾಮೂಹಿಕ ವಿವಾಹ ನಡೆಯಿತು. ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವ ನರಸಿಂಹ ನಾಯಕ, ವಿವಿಧ ಮಠಾಧೀಶರಿದ್ದರು. 
ರಾಜ್ಯ

ಸುಖ-ಶಾಂತಿಗೆ ಸಾಮರಸ್ಯದ ಬದುಕು ಸೋಪಾನ

ಪ್ರಮುಖ ಮುಖ್ಯಾಂಶಗಳು

  • ರಂಭಾಪುರಿ ಜಗದ್ಗುರುಗಳು ಪ್ರತಿಪಾದನೆ
  • ದೇವಪುರದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ
ಸುರಪುರ: ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ಪರಿಶುದ್ಧ ಮತ್ತು ಪವಿತ್ರವಾದ ಜೀವನ ರೂಪುಗೊಳ್ಳಲು ಧರ್ಮ ಪ್ರೆ ಅವಶ್ಯಕ. ಸಾಮರಸ್ಯ ಬದುಕು ಸುಖ, ಶಾಂತಿಗೆ ಸೋಪಾನವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ದೇವಪುರ ಗ್ರಾಮದಲ್ಲಿ ಶ್ರೀ ಜಡಿಶಾಂತಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ ನಿಮಿತ್ತ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪರಿಪಕ್ವ ಸಮಾಜ ನಿರ್ಮಾಣವೇ ಧರ್ಮದ ಮೂಲ ಗುರಿ. ಮನುಷ್ಯ ಜೀವನ ಸುಂದರ ಮತ್ತು ಶುದ್ಧಗೊಳಿಸುವುದೇ ಗುರುವಿನ ಪರಮ ಧ್ಯೇಯ ಎಂದರು.
ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಆಗುತ್ತಿರುವ ದುಂದು ವೆಚ್ಚ ಕಡಿಮೆ ಮಾಡಲು ಸಾಧ್ಯ. ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ 10 ಜೋಡಿ ನವದಂಪತಿ ಬದುಕು ಉಜ್ವಲಗೊಳ್ಳಲಿ. ಮಹಿಳೆಯರಿಗೆ ವೀರಶೈವ ಧರ್ಮ ಪಂಚ ಪೀಠಗಳು ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗು ನತ್ತು, ಕಾಲುಂಗುರ ಮತ್ತು ಮಾಂಗಲ್ಯ ಕರುಣಿಸಿದ್ದನ್ನು ಮರೆಯಲಾಗದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಭೌತಿಕ ಬದುಕು ಶ್ರೀಮಂತಗೊಳ್ಳುತ್ತಿದ್ದರೂ ಆಂತರಿಕ ಬದುಕು ದುರ್ಬಲಗೊಳ್ಳುತ್ತಿದೆ. ಇದಕ್ಕೆ ಮನುಷ್ಯನಲ್ಲಿ ಸಂಸ್ಕಾರ ಕೊರತೆಯೇ ಕಾರಣ ಎಂದರು.
ಲೋಗೊ ಬಿಡುಗಡೆ ಮಾಡಿದ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ ಸಾಮೂಹಿಕ ಮದುವೆ ಸಾಮಾನ್ಯವಲ್ಲ. ಶ್ರೇಷ್ಠ, ಪವಿತ್ರ. ನವ ವಧುವರರ ವಿವಾಹೋತ್ಸವಕ್ಕೆ ಜಗದ್ಗುರುಗಳು, ನಡೆದಾಡುವ ದೇವರು, ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು ಬಂದಿದ್ದಾರೆ ಎಂದರೆ ಹಿಂದಿನ ಜನ್ಮದಲ್ಲಿ ಏನೋ ಪುಣ್ಯದ ಕೆಲಸ ಮಾಡಿದ್ದಕ್ಕೆ ಈ ಸೌಭಾಗ್ಯ ಸಿಕ್ಕಿದೆ. ಜಾತಿ, ಭೇದಭಾವ ಇಲ್ಲದೆ ಶ್ರೀಮಠದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ನೇತೃತ್ವ ವಹಿಸಿದ್ದ ದೇವಪುರ ಹಿರೇಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಾತನಾಡಿದರು. ಡಿ.ಎಸ್​. ಮ್ಯಾಕ್ಸ್​ ಕಂಪನಿಯ ಎಸ್​.ಪಿ. ದಯಾನಂದ ಅಧ್ಯಕ್ಷತೆ ವಹಿಸಿದ್ದರು.
ಶ್ರೀನಿವಾಸ ಸರಡಗಿ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ, ಕಲಬುರಗಿ ಚವದಾಪುರಿ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಹೆಡಗಿಮುದ್ರಾ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ, ತೊನಸನಹಳ್ಳಿ ಶ್ರೀ ರೇವಣಸಿದ್ಧ ಶಿವಾಚಾರ್ಯ ಮತ್ತು ನವಲಕಲ್​ ಶ್ರೀ ಸೋಮನಾಥ ಶಿವಾಚಾರ್ಯ, ಶ್ರೀ ಬೂದಿಬಸವ ಶಿವಾಚಾರ್ಯ, ಶ್ರೀ ಶಾಂತಮಲ್ಲ ಶಿವಾಚಾರ್ಯ, ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಪ್ರಮುಖರಾದ ರಾಜಾ ಹನುಮಪ್ಪ ನಾಯಕ, ಎಚ್​.ಸಿ. ಪಾಟೀಲ್​, ವೇಣುಮಾಧವ ನಾಯಕ, ಚನ್ನಬಸಪ್ಪ ಮೆಕಾಲೆ, ಪ್ರಕಾಶ ಸಜ್ಜನ್​, ವೀರೇಶ ಚಿಂಚೋಳಿ, ಬಲಭೀಮ ನಾಯಕ ಬೈರಿಮರಡಿ, ಸಂಗಣ್ಣ ಸಾಹು ವೈಲಿ, ಸಿದ್ಧನಗೌಡ ಕರಿಭಾವಿ, ಶಂಕರ ನಾಯಕ, ಭೀಮಣ್ಣ ಬೇವಿನಾಳ, ಬಿ.ಎಂ. ಹಳ್ಳಿಕೋಟಿ, ಬಸವರಾಜ ಸ್ಥಾವರಮಠ, ಮಹೇಶ ಪಾಟೀಲ ಸೂಗೂರ, ಕೃಷ್ಣಾರೆಡ್ಡಿ ಮುದನೂರ ಇತರರಿದ್ದರು.
ವೀರಶೈವ ಲಿಂಗಾಯತ ಸಮಿತಿ ತಾಲೂಕು ಅಧ್ಯ ಸುರೇಶ ಆರ್​.ಸಜ್ಜನ್​ ಪ್ರಸ್ತಾವಿಕ ಮಾತನಾಡಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಣೆ ಮಾಡಿ ವಂದಿಸಿದರು.
ಸಾಧಕರಿಗೆ ಸನ್ಮಾನ
ಶ್ವೇತಾ ರಾಜಶೇಖರ ಅವರಿಗೆ ಶಾಂತಶ್ರೀ ಪ್ರಶಸ್ತಿ, ಚನ್ನಮ್ಮ ಮಹಾಂತಸ್ವಾಮಿ ಅವರಿಗೆ ರೇಣುಕಶ್ರೀ, ಲಕ್ಷಿ$್ಮಬಾಯಿ ರಮಾನಂದ ಕವಲಿ ಅವರಿಗೆ ನ್ಯಾಯರತ್ನ ಪ್ರಶಸ್ತಿ ನೀಡಿ ರಂಭಾಪುರಿ ಜಗದ್ಗುರುಗಳು ಸನ್ಮಾನ ಮಾಡಿ ಆಶೀರ್ವದಿಸಿದರು.