ಶಿವಗಂಗೆಯ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಆಶ್ರಯದಲ್ಲಿ 6ನೇ ಧರ್ಮಚಿಂತನ ಕನ್ನಡ ದೀಪೋತ್ಸವ ಹಾಗೂ ಕವಿ ಸಮ್ಮೇಳನ ಮತ್ತು ಶ್ರೀರೇಣುಕಾಚಾರ್ಯರ ತೆಪ್ಪೋತ್ಸವವನ್ನು ಡಾ.ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ.ಶ್ರೀಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಮ.ನಿ.ಪ್ರ.ಇಮ್ಮಡಿ ಬಸವರಾಜು ಸ್ವಾಮೀಜಿ, ಸಂಗೀತ ನಿರ್ದೇಶಕ, ಸಾಹಿತಿ ವಿ.ಮನೋಹರ್​, ಜನಪದ ಸಂಗೀತಗಾರ ಗೋ.ನಾ.ಸ್ವಾಮಿ ಇತರರಿದ್ದರು. 
ರಾಜ್ಯ

ಸಂಸ್ಕಾರದಿಂದ ಸಾಮರಸ್ಯದ ಬದುಕು ಸಾಧ್ಯ / DABASPETE

ದಾಬಸ್​ಪೇಟೆ : ಗುಣ ಸಂಪನ್ಮೂಲಗಳು ಒಂದೆಡೆ ಕಲೆತಾಗ ಸಂಸ್ಕಾರ ಉಂಟಾಗಿ ಹೃದಯದ ಕತ್ತಲೆ ದೂರವಾಗಿ, ಸಾಮರಸ್ಯದ ಬದುಕು ಎದುರಾಗುತ್ತದೆ ಎಂದು ಶಿವಗಂಗೆಯ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠಾಧೀಶ ಪಟ್ಟದ ಡಾ.ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನೆಲಮಂಗಲ ತಾಲೂಕಿನ ಶಿವಗಂಗೆಯ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಆಶ್ರಯದಲ್ಲಿ ಆಯೋಜಿಸಿದ್ದ 6ನೇ ಧರ್ಮಚಿಂತನ ಕನ್ನಡ ದೀಪೋತ್ಸವ ಹಾಗೂ ಕವಿ ಸಮ್ಮೇಳನ ಮತ್ತು ಶ್ರೀರೇಣುಕಾಚಾರ್ಯರ ತೆಪ್ಪೋತ್ಸವದಲ್ಲಿ ಮಾತನಾಡಿದರು. ಬೆಂಗಳೂರು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ.ಶ್ರೀಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಾನವನ್ನು ತೊಡೆದು ಾನದ ಬೆಳಕನ್ನು ಇಲ್ಲಿನ ಮಠವು ಸಾಧರಪಡಿಸುತ್ತಾ ಧರ್ಮ ಸಂದೇಶಗಳನ್ನು ದೇಶ ವಿದೇಶಗಳಲ್ಲಿನ ಭಕ್ತರನ್ನು ಸೆಳೆಯುವ ಮುಖೇನ ಮಠದ ಕಾರ್ಯತತ್ಪರತೆಯನ್ನು ಹೆಚ್ಚಿಸುತ್ತಿರುವುದು ಸಮಾಜಕ್ಕೆ ಸಾರ್ಥಕತೆ ಬಿತ್ತರಿಸುತ್ತಿದೆ ಎಂದರು.
ಮಾಗಡಿಯ ಜಡೆದೇವರ ಮಠಾಧೀಶ ಶ್ರೀಮ.ನಿ.ಪ್ರ.ಇಮ್ಮಡಿ ಬಸವರಾಜು ಸ್ವಾಮೀಜಿ ಮಾತನಾಡಿ, ಸಮಾಜದ ಓರೆಕೋರೆಗಳನ್ನು ಗುರುತಿಸಿ ಸಮ ಸಮಾಜದಲ್ಲಿನ ಲೋಪವನ್ನು ಸರಿದೂಗಿಸುವ ಮೂಲಕ ಸಮಾಜದ ಸ್ವಾಸ್ಥ$್ಯವನ್ನು ಕಾಪಾಡಿಕೊಳ್ಳುವ ಮಠಗಳ ಪಾತ್ರವು ಅನನ್ಯ ಎಂದರು.
ಶಾಸಕ ಎನ್​.ಶ್ರೀನಿವಾಸ್​ ಅವರು ಮಠದ ದಾಸೋಹ ಕಟ್ಟಡದ ನಿರ್ಮಾಣಕ್ಕೆ 50 ಲ ರೂಪಾಯಿ ಮಂಜೂರು ಮಾಡಿಕೊಡುವ ಭರವಸೆ ನೀಡಿದರು. ಮಾಗಡಿ ಪುರಸಭಾಧ್ಯೆ ಶಿವರುದ್ರಮ್ಮ ವಿಜಯಕುಮಾರ್​ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯ ಎನ್​.ಜಿ.ಗೋಪಾಲ್​ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಯೋಜಕ ಕೆ.ಸಿ.ಅಣ್ಣಪ್ಪ, ಸುಂಕದಕಟ್ಟೆ ಮಹೇಶ್​, ಬಿಜೆಪಿ ಮುಖಂಡರಾದ ರಾಜಮ್ಮ, ಪಿ.ಗಿರಿಧರ್​, ತಾಲೂಕು ಕನ್ನಡ ಸಾಂಸತಿಕ ರಂಗದ ಅಧ್ಯ ಡಿ.ಸಿದ್ದರಾಜು, ಸಾಮಾಜಿಕ ಚಿಂತಕ, ಸಾಹಿತಿ ಡಾ.ವೆಂಕಟೇಶ ಆರ್​.ಚೌಥಾಯಿ ಹಾಗೂ ಕವಿ ಸಮ್ಮೇಳದಲ್ಲಿ ಸಾಹಿತಿಗಳಾದ ಡಾ.ಸದಾನಂದಾರಾಧ್ಯ, ಅನಸೂಯಉಮೇಶ್​, ಪ್ರಜಾಕವಿ ನಾಗರಾಜು, ಸಿರಾಜ್​ ಅಹಮದ್​, ಬಿದಲೂರು ಸೋಮಣ್ಣ, ಕಲಾವಿದ ಶಿವಪ್ರಸಾದ್​ ಆರಾಧ್ಯ ಹಲವರಿದ್ದರು.