ಬಂಗಾರಪೇಟೆಯ ಕುವೆಂಪು ವೃತ್ತದಲ್ಲಿ ಜಯಂತಿ ಆಚರಿಸಲಾಯಿತು. Kuvempu
- ಮುಳಬಾಗಿಲು ಕಸಾಪ ಅಧ್ಯ ಆರ್. ಅಶ್ವತ್ಥ್ ಅಭಿಮತ
ಬಂಗಾರಪೇಟೆ: ಕುವೆಂಪು ಅವರು ಅಪ್ಪಟ ಕನ್ನಡಾಭಿಮಾನಿ ಮಾತ್ರವಲ್ಲ, ವಿಶ್ವಮಾನವ Kuvempu ಸಂದೇಶ ನೀಡಿದ ಮಹಾನ್ ವ್ಯಕ್ತಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಆರ್. ಅಶ್ವತ್ಥ್ ಹೇಳಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಅವರು, ಕುವೆಂಪು ಕನ್ನಡ ಸಾಹಿತ್ಯದ ಮೂಲಕ ಕನ್ನಡಕ್ಕೆ ಮೊದಲ ಾನಪೀಠ ತಂದುಕೊಟ್ಟ ಮಹಾನ್ ವ್ಯಕ್ತಿ. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ಕನ್ನಡವಾಗಿರು ಎನ್ನುವ ಮೂಲಕ ನಾಡಿನ ಜನರನ್ನು ಎಚ್ಚರಗೊಳಿಸಿ ಕನ್ನಡವೂ ಎಲ್ಲರ ಮನೆ ಮಾತಾಡಬೇಕು ಎಂಬ ಆಶಯ ಹೊಂದಿದ್ದರು. 2000 ವರ್ಷಗಳ ಕನ್ನಡ ಇತಿಹಾಸವನ್ನು ಎತ್ತಿ ಹಿಡಿದರು ಎಂದು ಹೇಳಿದರು.
ನಿಕಟಪೂರ್ವ ಗೌರವ ಕಾರ್ಯದರ್ಶಿ ಬಿ.ನಾಗರಾಜ್ ಮಾತನಾಡಿ, ಆಧುನಿಕ ಸಾಹಿತ್ಯ ಪ್ರಪಂಚದಲ್ಲಿ ವಿಶ್ವಮಟ್ಟದ ಸಾಹಿತಿಗಳಲ್ಲಿ ಕುವೆಂಪು ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ವೈಚಾರಿಕತೆ ಮೂಲಕ "ಮನುಜ ಮತ ವಿಶ್ವಪಥ' ಸಂದೇಶ ಸಾರಿದ್ದಾರೆ.
ಪುಟ್ಟಪ್ಪ ಅವರು ಕೊಳಲು, ಪಂಚಜನ್ಯ, ಪಕಾಶಿ, ಬೆರಳ್ಗೆ ಕೊರಳ್, ಕಾನೂರು ಸುಬ್ಬಮ್ಮ ಹೆಗ್ಗಡತಿ, ಬೊಮ್ಮನಹಳ್ಳಿಯ ಕಿಂದರಿಜೋಗಿ, ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸೇರಿ ಮೊದಲಾದ 150ಕ್ಕೂ ಹೆಚ್ಚು ಕೃತಿ ರಚಿಸಿ ಚಿಕ್ಕವರಿಂದ ವೃದ್ಧರವರೆಗೂ ಎಲ್ಲರ ಮನಸುಗಳಲ್ಲೂ ಅಚ್ಚಳಿಯದೆ ಉಳಿದಿದ್ದಾರೆ.
ದ.ರಾ.ಬೇಂದ್ರೆ ಅವರೇ ಕುವೆಂಪು ಅವರನ್ನು "ಯುಗದ ಕವಿ ಜಗದ ಕವಿ' ಎಂದು ಹೊಗಳಿದ್ದರು. ಮೈಸೂರು, ಬೆಂಗಳೂರು, ಧಾರವಾಡ, ಕುವೆಂಪು ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಅವರ ವಿಚಾರಧಾರೆಗಳು ಎಂದಿಗೂ, ಮುಂದೆ, ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಜಿಲ್ಲಾ ಶಿಕರ ಸಂದ ಕಾರ್ಯದರ್ಶಿ ಅಪ್ಪಯ್ಯ ಗೌಡ ಮಾತನಾಡಿ, ಸರಳ, ವೈಾನಿಕ, ವಿಚಾರಧಾರೆಯ ಮೂಲಕ ಮಾನವೀಯ ಮೌಲ್ಯ ವಿಶ್ವಕ್ಕೆ ಸಾರಿದ ವಿಶ್ವಮಾನವರಾಗಿದ್ದಾರೆ ಎಂದರು. ಕನ್ನಡದ ಪ್ರೇಮಿಯಾಗಿ, ರಾಷ್ಟ್ರೀಯತಾವಾದಿಯಾಗಿ, ವಿಶ್ವಮಾನವ ಸಂದೇಶ ನೀಡಿ, ಜಾತಿ ಧರ್ಮ, ರಾಷ್ಟ್ರೀಯತೆ ಮೀರಿದ ಸಂದೇಶ ಜನಾಂಗಕ್ಕೆ ನೀಡಿದ್ದಾರೆ ಎಂದರು.
ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯ ಮಧುಸೂದನ್, ಶಿವಕುಮಾರ್, ಶಾಲಾ ಶಿಣ ಇಲಾಖೆ ನೌಕರರ ಅಧ್ಯ ಶ್ರೀನಿವಾಸ್, ಕಾರ್ಯದರ್ಶಿ ಆರ್. ಪಿ. ನಾರಾಯಣಸ್ವಾಮಿ, ಜಿ.ಟಿ. ರಾಮಚಂದ್ರಪ್ಪ, ಶ್ರೀಶೈಲ ಶೆಟ್ಟರ್, ಶ್ರೀನಿವಾಸ ಗೌಡ, ಶಿವಕುಮಾರ್ ಇದ್ದರು .