ಹುಮನಾಬಾದ್​ಕ್ಕೆ ಆಗಮಿಸಿದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಶುಕ್ರವಾರ ಸಂಜೆ ಎಂಎಲ್​ಸಿ ಡಾ.ಚಂದ್ರಶೇಖರ ಪಾಟೀಲ್​ ಹಾಗೂ ಕುಟುಂಬದ ಸದಸ್ಯರು ಸ್ವಾಗತಿಸಿದರು. ವೆಂಕಟೇಶ ಕುಲಕರ್ಣಿ ಹಾಗೂ ಭಕ್ತರು ಇದ್ದರು. 
ರಾಜ್ಯ

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಭವ್ಯ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • ಹುಮನಾಬಾದ್​ನಲ್ಲಿ ಭಕ್ತಿ ಭಾವದ ಪೂಜೆ
ಹುಮನಾಬಾದ್​: ಪಟ್ಟಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಭವ್ಯ ಹಾಗೂ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯಿಂದ ಜಿಲ್ಲೆಯಲ್ಲಿ ಮೂರು ದಿನಗಳವರೆಗೆ ಸಂಚರಿಸಲಿರುವ ಈ ರಥ ಯಾತ್ರೆಯ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸೇವಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಾಣಿಕನಗರ ರಸ್ತೆಯಲ್ಲಿರುವ ಭವಾನಿ ದೇವಸ್ಥಾನದಿಂದ ಆರಂಭವಾದ ರಥ ಯಾತ್ರೆ ಪಟ್ಟಣದ ಪ್ರಮುಖ ಮಾರ್ಗವಾದ ಬಸ್​ ನಿಲ್ದಾಣ, ಡಾ.ಬಿ.ಆರ್​.ಅಂಬೇಡ್ಕರ್​ ವೃತ್ತ, ಪಟೇಲ್​ ಚೌಕ, ಬಸವೇಶ್ವರ ಚೌಕದಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಸಂಚರಿಸಿತು. ಮಾನವೀಯ ಮೌಲ್ಯ,ಸೇವೆಯ ಸಂದೇಶ ಜನತೆಗೆ ತಲುಪಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿ ಈ ರಥ ಸಂಚರಿಸುತ್ತಿದೆ. ಸೇವಾ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ರಥ ಯಾತ್ರೆ ಆಯೋಜಿಸಲಾಗುತ್ತಿದೆ. ಈ ದಿಸೆಯಲ್ಲಿ ರಥವು ಪಟ್ಟಣದಲ್ಲಿ ಸಂಚರಿಸಿದ ದಾರಿ ಮಧ್ಯದಲ್ಲಿ ಭಕ್ತಿ ಭಾವದಿಂದ ಸಾರ್ವಜನಿಕರು ಪೂಜೆ ಸಲ್ಲಿಸಿ ರಥವನ್ನು ಭವ್ಯವಾಗಿ ಸ್ವಾಗತಿಸಿದರು. ವಿಧಾನ ಪರಿಷತ್​ ಸದಸ್ಯ ಡಾ.ಚಂದ್ರಶೇಖರ ಪಾಟೀಲ್​, ಮಾಜಿ ಸಚಿವ ರಾಜಶೇಖರ ಪಾಟೀಲ್​ ಕುಟುಂಬದಿಂದ ಕೂಡ ರಥವನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಬ್ರಾಹ್ಮಣ ಸಮಾಜದ ಜಿಲ್ಲಾಧ್ಯ ವೆಂಕಟೇಶ ಕುಲಕರ್ಣಿ, ಪ್ರಮುಖರಾದ ಬಸವರಾಜ ಆರ್ಯ, ಲ್ಮಕಾಂತ ಕುಲಕರ್ಣಿ, ಶಾಂತವೀರ ಯಲಾಲ್​ ಭಕ್ತರು ಪಾಲ್ಗೊಂಡಿದ್ದರು.