ಮಾಲೂರು ತಾಲೂಕು Karaga ಎಚ್​.ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಪುರ ಗ್ರಾಮದಲ್ಲಿ ಶ್ರೀ ದ್ರೌಪದಾಂಬ ದೇವಿ ಕರಗ ಉತ್ಸವದ ಅಂಗವಾಗಿ ಕರಗದ ಪೂಜಾರಿ ಹರೀಶ್​ ಅವರು ಮನೆಗಳ ಹತ್ತಿರ ಹೋಗಿ ಪೂಜೆ ಸ್ವೀಕರಿಸಿದರು. ಜೆಡಿಎಸ್​ ಮುಖಂಡ ಹೂಡಿ ವಿಜಯ್​ಕುಮಾರ್​, ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಆರ್​.ನಾಗರಾಜು, ಕೆ.ಆನಂದ್​, ಮುಖಂಡರಾದ ಕೆ.ನಾಗರಾಜು, ಆರ್​.ಕೃಷ್ಣ ಇದ್ದರು. 
ರಾಜ್ಯ

ವಿಜೃಂಭಿಸಿದ ಕರಗ ಮಹೋತ್ಸವ Karaga

ಲಕ್ಕೂರು: ಮಾಲೂರು ತಾಲೂಕು ಎಚ್​.ಹೊಸಕೋಟೆ ಗ್ರಾಪಂ ವ್ಯಾಪ್ತಿಯ Karaga ಪುರ ಗ್ರಾಮದ ಶ್ರೀ ದ್ರೌಪದಾಂಬ ದೇವಿಯ 17ನೇ ವರ್ಷದ ಕರಗ ಮಹೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಕರಗ ಉತ್ಸವಕ್ಕೆ ಪುರ, ಬರಗೂರು ಗ್ರಾಮಗಳ ವಹ್ನಿಕುಲ ಸಮುದಾಯದವರು ಸೇವೆ ಸಲ್ಲಿಸಿದರು. 4 ದಿನಗಳಿಂದ ದೇಗುಲದಲ್ಲಿ ಕರಗದ ಶಾಸ್ತ್ರಗಳು ಶಾಸೊಕ್ತವಾಗಿ ನಡೆದವು.
ಭಾನುವಾರ ರಾತ್ರಿ ಗ್ರಾಮದ ದೇವಾಲಯದ ಬಳಿ ಕರಗದ ಪೂಜಾರಿ ಹರೀಶ್​ ಅವರಿಗೆ ಬಳೆ ತೊಡಿಸುವ ಕಾರ್ಯಕ್ರಮ ನಡೆಯಿತು. ಪೋತಲರಾಜು ಹಾಗೂ ಭರತ ಪೂಜಾರಿ ವೇದ ಮಂತ್ರಗಳನ್ನು ಪಠಿಸಿದ ನಂತರ ಕರಗದ ಶಕ್ತ್ಯುತ್ಸವಕ್ಕೆ ಚಾಲನೆ ನೀಡಲಾಯಿತು.
ಮುತ್ಯಾಲಮ್ಮ ದೇಗುಲದಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಪೂಜೆ ಸಲ್ಲಿಸಿದ ನಂತರ ಕರಗದ ಪೂಜಾರಿ ಹರೀಶ್​ ಕರಗವನ್ನು ಹೊತ್ತು ನೃತ್ಯ ಮಾಡುವುದರ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದರು.
ವೀರ ಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ (ಹಲಗು ಸೇವೆ) ಕತ್ತಿಯಿಂದ ದೇಹಕ್ಕೆ ಹೊಡೆದು ಕೊಳ್ಳುವ ಪ್ರಸಂಗ ನಡೆಯಿತು. ನಂತರ ಗ್ರಾಮದ ಮಧ್ಯಭಾಗದಲ್ಲಿದ್ದ ಅಗ್ನಿಕುಂಡ ಪ್ರವೇಶಿಸಿದರು. ದೇವಾಲಯಕ್ಕೆ ತೆರಳಿ ಮಧ್ಯಾಹ್ನ 12 ಗಂಟೆಗೆ ಕರಗ ಇಳಿಸಿದ ಮೇಲೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಶ್ರೀ ದ್ರೌಪದಾಂಬ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.