ಅಫಜಲಪುರ ತಾಲೂಕಿನ ಬಂಕಲಗಾದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿದರು. ಸಂತೋಷಕುಮಾರ ಪಾಟೀಲ್, ರಾಜಕುಮಾರ ಜಾಮಗೊಂಡ, ಪ್ರತಿಭಾ ಪ್ರಿಯದರ್ಶಿನಿ, ಆರ್.ಎಂ.ಪಾಟೋಳಿ ಇತರರಿದ್ದರು.
- ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿ
- ಬಂಕಲಗಾದಲ್ಲಿ ರಜತ ಮಹೋತ್ಸವ ಸಮಾರಂಭ
ಅಫಜಲಪುರ: ಬಂಕಲಗಾ ಗ್ರಾಮದಲ್ಲಿ 25 ವರ್ಷಗಳ ಹಿಂದೆ ಶುರುವಾದ ಸರ್ಕಾರಿ ಪ್ರೌಢಶಾಲೆ ಈ ಭಾಗದಲ್ಲಿ ಅರ ಕ್ರಾಂತಿಯ ಜತೆಗೆ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದೆ ಎಂದು ಅಫಜಲಪುರ ಮಳೇಂದ್ರ ಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಬಂಕಲಗಾದಲ್ಲಿ ಸರ್ಕಾರಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಶಾಲೆಯ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಶಿಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಶಿಕರು ಾನಾರ್ಜನೆ ಜತೆಗೆ ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಬೇಕು. ಅಲ್ಲದೆ ಸಂಸ್ಕಾರ ಹೇಳಿಕೊಡುವ ಕೆಲಸ ಆಗಬೇಕಿ ಎಂದು ಅಭಿಪ್ರಾಯಪಟ್ಟರು.
ಹಳೆಯ ವಿದ್ಯಾರ್ಥಿಯಾದ ಪಿಎಸ್ಐ ರಾಜಕುಮಾರ ಜಾಮಗೊಂಡ ಮಾತನಾಡಿ, ಗುರಿ ತಲುಪಲು ಗುರುಗಳ ಮಾರ್ಗದರ್ಶನದಲ್ಲಿ ಸಾಗಬೇಕು. ನಮ್ಮ ಪರಿಸ್ಥಿತಿ ಬಗ್ಗೆ ಯೋಚಿಸುವುದಕ್ಕಿಂದ ಸಾಧನೆಗೆ ಸಮಯ ನೀಡಬೇಕು. ಸುವರ್ಣ ಮಹೋತ್ಸವ ಆಚರಿಸುವ ವೇಳೆಗೆ ನಮ್ಮ ಶಾಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಆಯ್ಕೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಶ್ರಮಿಸೋಣ ಎಂದರು.
ದಾವಣಗೆರೆ ಎಸಿ ಸಂತೋಷಕುಮಾರ ಪಾಟೀಲ್, ಬಿಇಒ ಪ್ರತಿಭಾ ಪ್ರಿಯದರ್ಶಿನಿ, ಪ್ರಮುಖರಾದ ಕಲ್ಲಪ್ಪ ಪ್ಯಾಟಿ, ವಿಠ್ಠಲ ಜಾಮಗೊಂಡ, ರಾಜಶೇಖರ ನೂಲಾ, ಕಾಶಿನಾಥ ಜಮಾದಾರ, ಜಗದೇವಪ್ಪಗೌಡ ಪಾಟೀಲ್, ಮಹಿಬೂಬಸಾಬ ದೇವರಮನಿ, ಬಸವರಾಜ ಕಾಂಬಳೆ, ಧೂಳಪ್ಪ ಮಂಟಗಿ, ಮಹಾಂತೇಶ ನೂಲಾ, ಜಾಫರ್ಸಾಬ್ ದೇವರಮನಿ, ಜಗದೀಶ ಮಂಟಗಿ, ಪಿಂಟು ನೂಲಾ, ಪ್ರಕಾಶ ಜಮಾದಾರ, ಗೌಡಪ್ಪಗೌಡ ಪಾಟೀಲ್, ರಂಜಾನ್ ಮಕಂದಾರ, ಮುಖ್ಯಗುರು ಆರ್.ಎಂ.ಪಾಟೋಳಿ ಇತರರಿದ್ದರು.
25 ವರ್ಷಗಳಿಂದ ಸೇವೆ ಸಲ್ಲಿಸಿದ ಎಲ್ಲ ಶಿಕರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಹಳೆಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.