ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾಯಕ್ರಮದಲ್ಲಿ ಬಿ.ಸುರೇಶ, ಶ್ರೀಕಾಂತ ರಂಜೇರಿ, ಸಂಸ್ಥೆಯ ಜೈಲರ್ಗಳಾದ ಶ್ರೀಮಂತಗೌಡ ಪಾಟೀಲ, ಪುಂಡಲಿಕ ಟಿ.ಕೆ, ನಾಗರಾಜ ಮೂಲಗೆ ಇತರರಿದ್ದರು.
ಕಲಬುರಗಿ: ಬಸವ ಜಯಂತಿ ಅಂಗವಾಗಿ ಕಲಬುರಗಿ ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಸೋಮವಾರ ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕ ಬಿ.ಸುರೇಶ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ಸೋಮಾರಿಗಳಾಗದೇ ಕಾಯಕದಲ್ಲಿ ತೊಡಗಿ, ದೇಶದ ಅಭಿವೃದ್ದಿಗೆ ಶ್ರಮಿಸಬೇಕು. ಕಾಯಕದಲ್ಲಿ ಗಳಿಸಿದಂತಹ ಸಂಪತ್ತಿನಲ್ಲಿ ಸ್ವಲ್ಪ ಭಾಗ ಸಮಾಜದ ಏಳಿಗೆಗಾಗಿ ನೀಡುವ ಕೆಲಸ ಮಾಡಬೇಕು. ಎಲ್ಲರೂ ಬಸವೇಶ್ವರರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡು ಈ ಕಾರಾಗೃಹದಲ್ಲಿ ಮನ@ ಪರಿವರ್ತನೆಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಜ್ಞಾನ ಮತ್ತು ಸಹೋದರತ್ವ ಭಾವನೆ ಬೆಳೆಸಿಕೊಂಡು ಬಿಡುಗಡೆ ಹೊಂದಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಮುಖ್ಯ ವೀಕ್ಷಕ ಶ್ರೀಕಾಂತ ರಂಜೇರಿ ಮಾತನಾಡಿದರು. ಕಾರಾಗೃಹದ ಎಲ್ಲಾ ಬಂದಿ ಹಾಗೂ ಸಿಬ್ಬಂದಿಗೆ ಸಿಹಿ ವಿತರಿಸಲಾಯಿತು. ಸಂಸ್ಥೆಯ ಜೈಲರ್ಗಳಾದ ಶ್ರೀಮಂತಗೌಡ ಪಾಟೀಲ, ಪುಂಡಲಿಕ ಟಿ.ಕೆ ಹಾಗೂ ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿ ಭಾಗವಹಿಸಿದ್ದರು. ಶಿಕ್ಷಕ ನಾಗರಾಜ ಮುಲಗೆ ನಿರೂಪಿಸಿ, ವಂದಿಸಿದರು.