ಬಸವಕಲ್ಯಾಣದ ಶ್ರೀ ಬನಶಂಕರಿ ಓಣಿಯ ಶ್ರೀ ನಾಗಲಿಂಗೇಶ್ವರ ದೇವಾಲಯದಲ್ಲಿ ನಾಗಪಂಚಮಿ ನಿಮಿತ್ತ ಸೋಮವಾರ ನಡೆದ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಗೆ ಡಾ.ಜಿ.ಎಸ್.ಭುರಳೆ, ಅಮೂಲ ಮೇತ್ರಸ್ಕರ್ ಚಾಲನೆ ನೀಡಿದರು.
- ನಾಗಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವ
ಬಸವಕಲ್ಯಾಣ: ನಾಗರ ಪಂಚಮಿ ನಿಮಿತ್ತ ನಗರದ ಶ್ರೀ ಬನಶಂಕರಿ ಓಣಿಯ ಶ್ರೀ ನಾಗಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಪಲ್ಲಕ್ಕಿ ಉತ್ಸವ ಜರುಗಿದವು. ನಗರದ ವಿವಿಧ ಓಣಿ ಬಡಾವಣೆಯ ಭಕ್ತರು ಭಾಗವಹಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಾಲಯದಿಂದ ಸುಭಾಷ ಚೌಕ್, ಶ್ರೀ ಬಸವೇಶ್ವರ ದೇವಸ್ಥಾನ, ಗಾಂಧಿ ವೃತ್ತದ ಮೂಲಕ ದೇವಾಲಯದವರೆಗೆ ಮುಖ್ಯರಸ್ತೆ ಮಾರ್ಗವಾಗಿ ತಾಳ, ಮೇಳ ವಾದ್ಯದೊಂದಿಗೆ ನಡೆದ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಗೆ ಶ್ರೀ ಬನಶಂಕರಿ ದೇವಸ್ಥಾನ ಪಂಚ ಕಮಿಟಿಯ ಡಾ.ಜಿ.ಎಸ್.ಭುರಳೆ, ಅಮೂಲ ಮೇತ್ರಸ್ಕರ್ ಚಾಲನೆ ನೀಡಿದರು.
ಪಂಚ ಕಮಿಟಿ ಅಧ್ಯಕ್ಷ ದಿಲೀಪ ರುಮ್ಮಾ, ಬಸಣ್ಣ ಬಂದಗೆ, ಶಂಕರ ಮಠಪತಿ, ಚೇತನ ಮಠಪತಿ, ಶಾಂತು ಮೇಂಗದೆ, ಅಶೋಕ ಹಿಪ್ಪರ್ಗೆ, ಸಚಿನ ಹುಡಗೆ, ಬಾಬು ಹೆಗ್ಗೆ, ಸೂರ್ಯಕಾಂತ ಅಡಕೆ, ಸಾಗರ ಕಡಗಂಚೆ, ಮಲ್ಲಪ್ಪ ಕಡಗಂಚೆ, ಶರಣಪ್ಪ ಕಡಗಂಚೆ, ವಿವೇಕ ಮಠಪತಿ, ವೀರೇಶ ಹೆಗ್ಗೆ, ಬಸವರಾಜ ಕಿಣಗೆ, ಬಸಣ್ಣ ಧನ್ನೂರೆ, ಗುರುನಾಥ ಕನಕ, ಶಂಕರ ಮ್ಯಾಕಾ, ಚಂದ್ರಕಾಮತ ಮತಗುಂಡೆ, ಉಮೇಶ ಬಿಜಾಪುರ ಇತರರಿದ್ದರು.
ಹಬ್ಬದ ಸಂಭ್ರಮ: ನಗರ ಸೇರಿ ತಾಲೂಕಿನಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಭಕ್ತಿ-ಯಿಂದ ಹುತ್ತಿಗೆ ಹಾಲೆರೆದರು. ವಿವಿಧೆಡೆ ಮಹಿಳೆಯರು ಜೋಕಾಲಿ ಆಡಿದರೆ ಮತ್ತೆ ಕೆಲವೆಡೆ ಬುಲಾಯಿ ಹಾಕಿ ಸಂಭ್ರಮಿಸಿದರು. ನಗರದ ತ್ರಿಪುರಾಂತನ ಹನುಮಾನ ಮಂದಿರದ ಆವರಣ, ಬಸ್ ನಿಲ್ದಾಣದ ರಸ್ತೆ ಪಕ್ಕದಲ್ಲಿ ನಗಣ್ಣನ ಕಟ್ಟೆ, ಶಿವಪುರ ರಸ್ತೆ ಕ್ರಾಸ್ ಬಳಿಯ ನಾಗಣ್ಣ ಕಟ್ಟಾ, ನಗರದ ಜೈಶಂಕರ ಕಾಲನಿಯ ಹನುಮಾನ ಮಂದಿರದ ಆವರಣ ಸೇರಿ ವಿವಿಧೆಡೆ ನಾಗದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವದು ಕಂಡು ಬಂತು.