ಯಡ್ರಾಮಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪುರಸತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಿವಲಿಂಗಯ್ಯ ಶಾಸ್ತ್ರಿ, ಡಾ.ಸದಾನಂದ ಪಾಟೀಲ್​, ಯುಗಾಂತರಿ ದೇಶಮಾನೆ ಇದ್ದರು.  
ರಾಜ್ಯ

ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದ ಕುಟುಂಬ

ಪ್ರಮುಖ ಮುಖ್ಯಾಂಶಗಳು

  • ಡಾ.ವಿಜಯಲಕ್ಷ್ಮೀ ದೇಶಮಾನೆ ಹೆಮ್ಮೆ
  • ಯಡ್ರಾಮಿ ವಿರಕ್ತಮಠದಲ್ಲಿ ಕಾರ್ಯಕ್ರಮ
ಯಡ್ರಾಮಿ: ನನ್ನ ಹೆತ್ತವರು ಬಡತನದಲ್ಲಿದ್ದರೂ ಒಳ್ಳೆಯ ಶಿಕ್ಷಣ ಹಾಗೂ ಸಂಸ್ಕಾರ ನೀಡಿದ್ದಾರೆ. ನಾನು ಚಿಕ್ಕವಳಿದ್ದಾಗ ನನ್ನ ತಂದೆ ಪುರಾಣ, ಪ್ರವಚನಗಳನ್ನು ಕೇಳಲು ಪಕ್ಕದ ಹಳ್ಳಿಗಳಿಗೆ ತೆರಳುತ್ತಿದ್ದರು. ಅವರಲ್ಲಿರುವ ಧಾರ್ಮಿಕತೆ ಒಲವೂ ನನ್ನಲ್ಲೂ ಬಂದಿದೆ ಎಂದು ಪದ್ಮಶ್ರೀ ಪುರಸತೆ ಹಾಗೂ ಖ್ಯಾತ ವೈದ್ಯೆ ಡಾ.ವಿಜಯಲಕ್ಷಿ$್ಮ ದೇಶಮಾನೆ ಹೇಳಿದರು.
ವಿರಕ್ತಮಠದಲ್ಲಿ ಶ್ರೀ ಸಿದ್ಧರಾಮ ಸ್ವಾಮಿಗಳ ಐದನೇ ಪುಣ್ಯಸ್ಮರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಠಗಳಲ್ಲಿ ನಡೆಯುವ ಸತ್ಸಂಗ ಒಳ್ಳೆಯ ಸಂಸ್ಕಾರ ನೀಡುತ್ತವೆ. ಸ್ಲಂನಲ್ಲಿ ಬೆಳೆದ ನನ್ನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುತಿಸಿ ಪದ್ಮಶ್ರೀ ಪುರಸ್ಕಾರ ನೀಡಿದ್ದು, ಈ ಗೌರವವನ್ನು ತಾಲೂಕಿನ ಜನಕ್ಕೆ ಹಾಗೂ ನನ್ನ ನೆಲಕ್ಕೆ ಸಲ್ಲಿಸುತ್ತೇನೆ ಎಂದರು.
ನನ್ನ ಕುಟುಂಬ ಉತ್ತಮ ಹಂತಕ್ಕೆ ತಲುಪಲು ಮಾಜಿ ಮುಖ್ಯಮಂತ್ರಿ ಎನ್​.ಧರ್ಮಸಿಂಗ್​ ಅವರ ಸಹಾಯ ಸಾಕಷ್ಟಿದೆ, ಅದನ್ನು ಎಂದಿಗೂ ಮರೆಯುವುದಿಲ್ಲ. ಶ್ರೀಮಠದಲ್ಲಿಂದು ದೊರೆತ ಪುರಸ್ಕಾರ ಶ್ರೇಷ್ಠವಾದದ್ದಾಗಿದ್ದು, ಗೌರವ ಹಾಗೂ ಭಕ್ತಿಯಿಂದ ಸ್ವೀಕರಿಸುತ್ತಿದ್ದೇನೆ ಎಂದರು.
ವಿರಕ್ತಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಡತನವನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ ಡಾ.ವಿಜಯಲಕ್ಷಿ$್ಮ ದೇಶಮಾನೆ ಅವರು ಎಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಆದರ್ಶವನ್ನು ಇಂದಿನ ಯುವಜನಾಂಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿವಲಿಂಗಯ್ಯ ಶಾಸಿ, ಡಾ.ಸದಾನಂದ ಪಾಟೀಲ್​, ಯುಗಾಂತರಿ ದೇಶಮಾನೆ, ನಿಂಗನಗೌಡ ಪಾಟೀಲ್​, ಪ್ರಕಾಶ ಬೆಲ್ಲದ ಇತರರಿದ್ದರು.
ದೇಶದ್ರೋಹ ಕೆಲಸ ಒಳ್ಳೆಯದಲ್ಲ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವಗುರುವಾಗಿಸಲು ಶ್ರಮಿಸುತ್ತಿದ್ದಾರೆ. ದೇಶಕ್ಕೆ ಅಂಟಿದ್ದ ಕಳಂಕವನ್ನು ಅಳಿಸಿ, ಸೂಪರ್​ ಪವರ್​ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದಾರೆ. ಆದರೆ ಕೆಲವರು ದೇಶದ ಅನ್ನ ತಿಂದು, ಇಲ್ಲಿಯ ಗಾಳಿ ಸೇವಿಸಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ದೇಶವನ್ನು ಪ್ರೀತಿಸೋಣ, ಗೌರವಿಸೋಣ ಎಂದು ಡಾ.ವಿಜಯಲಕ್ಷಿ$್ಮ ದೇಶಮಾನೆ ಕರೆ ನೀಡಿದರು.