ಶ್ರೀ ದತ್ತ ದಿಗಂಬರ ಮಾಣಿಕೇಶ್ವರ ಜಾತ್ರೆ ನಿಮಿತ್ತ ಸೊಂತದ ಮಾಣಿಕೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜ, ಶ್ರೀ ಸುರೇಂದ್ರ ಸ್ವಾಮೀಜಿ, ಶ್ರೀ ಅಜಯೇಂದ್ರ ಸ್ವಾಮೀಜಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಶೈಲೇಂದ್ರ ಬೆಲ್ದಾಳೆ ಇತರರಿದ್ದರು. 
ರಾಜ್ಯ

ಮಾಘ ಪಂಚಮಿಗೆ ಸೊಂತ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
  • ಫೆ.11ರಂದು ಪ್ರಥಮ ಉತ್ಸವ, ರಥ ಉದ್ಘಾಟನೆ
ಕಮಲಾಪುರ: ಸೊಂತ ಗ್ರಾಮದಲ್ಲಿ ಮುಂದಿನ ವರ್ಷದಿಂದ ಮಾ ಮಾಸದ ಶುಕ್ಲ ಪಂಚಮಿಯಂದು ದತ್ತ ದಿಗಂಬರ ಶ್ರೀ ಮಾಣಿಕೇಶ್ವರ ಜಾತ್ರೋತ್ಸವ ನಡೆಸಲು ನಿರ್ಧರಿಸಲಾಯಿತು.
ಶ್ರೀ ದತ್ತ ದಿಗಂಬರ ಮಾಣಿಕೇಶ್ವರ ಜಾತ್ರೆ ನಿಮಿತ್ತ ಸೊಂತದ ಮಾಣಿಕೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರು ಮಾತನಾಡಿ, ಪ್ರತಿವರ್ಷ ರಾಮನವಮಿಯಂದು ಕಲಮೂಡ ಹಾಗೂ ಸೊಂತದಲ್ಲಿ ದತ್ತ ದಿಗಂಬರ ಶ್ರೀ ಮಾಣಿಕೇಶ್ವರರ ಜಾತ್ರೋತ್ಸವ ನಡೆಸಲಾಗುತ್ತಿತ್ತು. ಇನ್ಮುಂದೆ ಸೊಂತ ಗ್ರಾಮದಲ್ಲಿ ಪ್ರತಿ ವರ್ಷದ ಮಾ ಮಾಸ ಶುಕ್ಲ ಪಂಚಮಿಯಂದು ಜಾತ್ರೋತ್ಸವ ನಡೆಸಲು ಎಲ್ಲರೂ ಒಪ್ಪಿಗೆ ನೀಡಿದರು. ಇನ್ನು ಕಲಮೂಡದಲ್ಲಿ ಯಥಾಪ್ರಕಾರ ರಾಮನವಮಿಯಂದು ಉತ್ಸವ ಜರುಗಲಿದೆ. ಹೊಸ ನಿರ್ಧಾರದಂತೆ 2027ರ ಫೆ.11ರಂದು ಸೊಂತದಲ್ಲಿ ಜಾತ್ರೋತ್ಸವ ಹಾಗೂ ನೂತನ ರಥದ ಉದ್ಘಾಟನೆ ಜರುಗಲಿದೆ ಎಂದರು.
51 ಅಡಿ ಎತ್ತರ 70 ಟನ್​ ಭಾರದ ಬೃಹತ್​ ರಥವನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜಗೋಪಾಲಚಾರ್ಯರು ನಿರ್ಮಿಸುತ್ತಿದ್ದಾರೆ. ರಥದಲ್ಲಿ ವಿವಿಧ ಶರಣರು, ಸಂತರು ಹಾಗೂ ಮಹಾತ್ಮರ ಭಾವಚಿತ್ರಗಳು ಇರಲಿವೆ. ಜತೆಗೆ ಶ್ರೀ ಮಾಣಿಕೇಶ್ವರರ ಜೀವನ ಚರಿತ್ರೆಯ ಭಾವಚಿತ್ರಗಳು ಅಳವಡಿಸಲಾಗಿದೆ. ರಥ ಕೋಣೆ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ಮಾಹಿತಿ ನೀಡಿದರು.
ಸೊಂತದ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜ, ಯಾದಗಿರಿಯ ಶ್ರೀ ಸುರೇಂದ್ರ ಸ್ವಾಮೀಜಿ, ಶಹಾಪುರದ ಶ್ರೀ ಅಜಯೇಂದ್ರ ಸ್ವಾಮೀಜಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ್​, ಪ್ರಮುಖರಾದ ಮಲ್ಲಿನಾಥ ಪಾಟೀಲ್​, ರಂಗನಗೌಡ ಪಾಟೀಲ್​, ರಾಜಕುಮಾರ ಕೋಟಿ, ಶಿವಾನಂದ ಮುಚಳಂಬಿ, ಪ್ರಕಾಶ ರೆಡ್ಡಿ, ಪ್ರವಿಣ ಮುಚ್ಚಟ್ಟಿ, ವಿರೇಶ ಕೋಟಿ ಇತರರಿದ್ದರು.
ಶ್ರವಣಕುಮಾರ ಶಾಸಿ ಪ್ರಾಸ್ತವಿಕ ಮಾತನಾಡಿದರು. ಹಣಮಂತ ಕಣಜಿಕರ್​ ಸ್ವಾಗತಿಸಿದರು. ವಿರುಪಾ ಸ್ವಾಮಿ ನಿರೂಪಣೆ ಮಾಡಿದರು.
"

ಸೊಂತ ಗ್ರಾಮದಲ್ಲಿ ಪ್ರತಿವರ್ಷವೂ ರಾಮನವಮಿ ಬದಲಾಗಿ ಮಾ ಶುಕ್ಲ ಪಂಚಮಿಯಂದು ದತ್ತ ದಿಗಂಬರ ಶ್ರೀ ಮಾಣಿಕೇಶ್ವರರ ಜಾತ್ರೋತ್ಸವ ನಡೆಸಲು ನಿರ್ಧರಿಸಲಾಗಿದೆ. ಪ್ರಥಮ ವರ್ಷದ ಜಾತ್ರೆಯಲ್ಲಿ ರಾಷ್ಟ್ರಮಟ್ಟದ ಸಂತರು, ಶರಣು ಭಾಗಿಯಾಗಲಿದ್ದಾರೆ. ರೈತರ, ವೈದ್ಯರ ಸಮ್ಮೇಳನ ಜರುಗಲಿವೆ.

— ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜ, ಸೊಂತ