ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳಕ್ಕೆ ಬಾರದಿದ್ದರಿಂದ ಮಳಿಗೆಗಗಳು ಖಾಲಿ ಖಾಲಿಯಾಗಿರುವುದು.
- ನಿರೀಕ್ಷೆಯಷ್ಟು ಬಾರದ ಕಂಪನಿಗಳು
- ಸಚಿವ ಮಾನ ಉಳಿಸಿದ ಕಾಲೇಜು ವಿದ್ಯಾರ್ಥಿಗಳು
ಯಾದಗಿರಿ: ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಗಳ ನಿರುದ್ಯೋಗ ಯುವಕ, ಯುವತಿಯರಿಗೆ ಕೆಲಸ ಸಿಗಲಿ ಎಂಬ ಆಶಯದಿಂದ ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ನಿಗದಿತ ಪ್ರಮಾಣದ ಕಂಪನಿಗಳು ಭಾಗವಹಿಸದೆ ಮತ್ತು ಉದ್ಯೋಗಾಂಗಳು ಬಾರದಿರುವುದರಿಂದ ಮೇಳ ಸಂಪೂರ್ಣ ವಿಫಲವಾಯಿತು.
ಈ ವೇಳೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನೆಯಡಿ ಹಮ್ಮಿಕೊಂಡ ಮೇಳದಲ್ಲಿ ಐವತ್ತು ಹೆಚ್ಚು ಮಳಿಗೆಗಳಲ್ಲಿ ಶೇ.80 ಖಾಲಿ ಇದ್ದವು. ಆಗಮಿಸಿದ ಕಂಪನಿಗಳಿಗೆ ಅಲ್ಲಲ್ಲಿ ಮಳಿಗೆ ನೀಡಿದ್ದರಿಂದ ಉದ್ಘಾಟನೆಗೆ ಸಚಿವರು ಆಗಮಿಸಿದಾಗ ಅಭಾಸ ಆಗಬಾರದೆಂದು ಅವಸರದಲ್ಲಿ ಎಲ್ಲರಿಗೂ ಅಕ್ಕಪಕ್ಕವೇ ಮಳಿಗೆ ನೀಡಿದರು.
ಮೇಳದಲ್ಲಿ ಹೆಸರು ನೊಂದಾಯಿಸಿ ಉದ್ಯೋಗ ಪಡೆಯಲು 3&4 ಸಾವಿರ ಅಭ್ಯರ್ಥಿಗಳು ಬರುತ್ತಾರೆಂಬ ನಿರೀೆ ಆಯೋಜಕರದ್ದಾಗಿತ್ತು. ಆದರೆ 500 ಗಡಿ ದಾಟಿರಲಿಲ್ಲ. ಕಾಲೇಜು ಮೈದಾನದಲ್ಲಿ ಮೇಳ ಹಮ್ಮಿಕೊಂಡಿದ್ದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಕರೆತಂದು ಸಚಿವರು ಬರುವಾಗ ಜನಸಂದಣಿ ಇರುವಂತೆ ಆಯೋಜಕರು ನೋಡಿಕೊಂಡಿದ್ದು ಕಂಡುಬಂತು.
ಇದರಲ್ಲಿ ರಾಜ್ಯ ಸೇರಿ ವಿವಿಧೆಡೆಯಿಂದ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂಬ ಮಾಹಿತಿ ಇತ್ತು. ಆದರೆ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಭಾಗವಹಿಸಿದ್ದವು. ಇದಕ್ಕೆ ಆಯೋಜಕರು ಮತ್ತು ಇವೆಂಟ್ ಕೆಲಸದ ಹೊಣೆಗಾರಿಕೆ ಹೊತ್ತ ಹುಬ್ಬಳ್ಳಿ ಮೂಲದ ಖಾಸಗಿ ಏಜೆನ್ಸಿ ಅವರ ರ್ನಿಲ್ಯ ಎದ್ದು ಕಾಣುತ್ತಿತ್ತು.
ಬೆಳಗ್ಗೆ 9ಕ್ಕೆ ಮೇಳದ ಉದ್ಘಾಟನೆ ನಿಗದಿಯಾಗಿತ್ತು. ಒಂದುವರೆ ಗಂಟೆ ತಡವಾದರೂ ಕಂಪನಿಗಳು ಅತ್ತ ಸುಳಿದಿರಲಿಲ್ಲ. ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಆಗಮಿಸುತ್ತಿದಂತೆ ರಿಬ್ಬಿನ್ ಕಟ್ ಮಾಡಿಸಿ ಒಂದು ಕಂಪನಿ ಮಳಿಗೆ ಕರೆದುಕೊಂಡು ಹೋಗಿ ಮೇಳದ ಉದ್ದೇಶ ಆಯೋಜಕರು ವಿವರಿಸಿದರು. ಕಾಲೇಜು ಹುಡುಗರು, ಕೆಲವು ಆಕಾಂಗಳಿಂದ ಆಗ ಭರ್ತಿ ಕಾಣಿಸಿದ್ದ ಮೇಳ ಸ್ಥಳ ಸಚಿವರು ಹೊಗುತ್ತಲೇ ಎಲ್ಲ ಖಾಲಿ ಖಾಲಿ.
ಹಿಂದುಳಿದ ಜಿಲ್ಲೆಯಲ್ಲಿ ಇದು ಯಶಸ್ಸು ಮಾಡಿ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೇಳ ಇದಾಗಬೇಕಿತ್ತು, ಆದರೆ ಹೀಗೆ ಕಾಟಾಚಾರಕ್ಕೆ ಎಂಬಂತೆ ನಡೆದ ಮೇಳಕ್ಕೆ ಹೊಣೆ ಯಾರು? ಅವರ ವಿರುದ್ಧ ಕ್ರಮ ಆಗುವುದೇ ಎಂಬ ಪ್ರಶ್ನೆ ಮೇಳ ನೊಡಲು ಬಂದವರ ಪ್ರಶ್ನೆಯಾಗಿದೆ.
ಯಾದಗಿರಿ: ಎಸ್ಸೆಸ್ಸೆಲ್ಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೊರಿಸಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಇಲ್ಲಿನ್ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮೇಳ ಉದ್ಘಾಟಿಸಿ ಮಾತನಾಡಿದರು. ಸರ್ಕಾರಗಳು ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಂತಹ ಮೇಳ ಆಯೋಜನೆ ಮಾಡುತ್ತಿವೆ. ಹೀಗಾಗಿ ಇದರ ಲಾಭ ನಮ್ಮ ಯುವಕರು ಪಡೆದುಕೊಳ್ಳಬೇಕು ಎಂದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಯುಡಾ ಅಧ್ಯ ಬಾಬುರಾವ ಕಾಡ್ಲೂರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯ ಶರಣಪ್ಪ ಸಲಾದಪುರ, ಜಿಪಂ ಸಿಇಒ ಲವೀಶ ಒರ್ಡಿಯಾ, ಜಿಲ್ಲಾ ಕೈಗಾರಿಕಾ ಅಧಿಕಾರಿ ಸತೀಶಕುಮಾರ ಇತರರಿದ್ದರು.
ಯಾದಗಿರಿ: ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಸಂಜೆ 6 ತನಕ 1489 ಯುವಕರು ಭೇಟಿ ನೀಡಿದ್ದು, ಅವರಲ್ಲಿ 237 ಯುವಕರಿಗೆ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.