ವರ್ಷದಲ್ಲೇ ಶಿಥಿಲಗೊಂಡ ತಂಗುದಾಣ shelter
- 5 ಲಕ್ಷ ರೂ. ವೆಚ್ಚವಾದರೂ ದಕ್ಕದ ಸೌಲಭ್ಯ
ಬಂಗಾರಪೇಟೆ: ತಾಲೂಕಿನ ಹುಣಸನಹಳ್ಳಿಯ ಟೇಕಲ್ ರಸ್ತೆ ಬಳಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸದರ ನಿಧಿಯಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಕಳಪೆ ಕಾಮಗಾರಿಯಿಂದಾಗಿ ನಿಮಾರ್ಣವಾದ ಒಂದು ವರ್ಷದಲ್ಲೇ ಶಿಥಿಲಾವಸ್ಥೆಗೆ ತಲುಪಿದೆ.shelter
ಮಾಜಿ ಸಂಸದ ಎಸ್.ಮುನಿಸ್ವಾಮಿ ಸಂಸದರಾಗಿದ್ದಾಗ ತಮ್ಮ ಅನುದಾನದಲ್ಲಿ ಕ್ಷೇತ್ರದಾದ್ಯಂತ ನಿಮಾರ್ಣ ಮಾಡಿರುವ ಬಸ್ ತಂಗುದಾಣಗಳು ತೀವ್ರ ಕಳಪೆಯಿಂದ ಕೂಡಿದೆ ಎಂಬುದಕ್ಕೆ ಈ ತಂಗುದಾಣವೇ ಸಾಕ್ಷಿಯಾಗಿದೆ. ವರ್ಷ ಪೂರೈಸುವ ಮೊದಲೇ ತಂಗುದಾಣ ಶಿಥಿಲವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲ ಆಗಿದೆ. ತಂಗುದಾಣದ ಅಳತೆ ಮತ್ತು ಸ್ವರೂಪ ಗಮನಿಸಿದರೆ ಅಸಲಿಗೆ 1 ಲಕ್ಷ ರೂ. ಸಹ ವೆಚ್ಚವಾಗುವುದಿಲ್ಲ. ಆದರೆ, 5 ಲಕ್ಷ ರೂ. ವೆಚ್ಚವಾಗಿರುವಂತೆ ತೋರಿಸಿದ್ದಾರೆ. ತಂಗುದಾಣವಾದರೂ ಸೂಕ್ತವಾಗಿದೆಯೇ ಎಂದರೆ ಅದೂ ಸರಿಯಿಲ್ಲ.
ಈ ತಂಗುದಾಣದಲ್ಲಿ ಜನರು ಕೂರಲು ಸರಿಯಾದ ಆಸನಗಳಿಲ್ಲ. ಹಾಕಿದ್ದ ಶೀಟ್ಗಳು ಕಿತ್ತು ಬಂದಿದ್ದು, ಮಳೆ ಬಂದರೆ ಮಳೆ ನೀರೆಲ್ಲಾ ಒಳಗೆ ಬರುತ್ತವೆ. ಇದರಿಂದ ಪ್ರಯಾಣಿಕರು ತಂಗುದಾಣದ ಸಹವಾಸವೇ ಬೇಡ ಎಂದು ತಂಗುದಾಣ ಬಳಕೆ ಮಾಡುವುದನ್ನೇ ಬಿಟ್ಟಿದ್ದಾರೆ.
ಕ್ಷೇತ್ರದಾದ್ಯಂತ ಕೆಆರ್ಐಡಿಎಲ್ ಸಂಸ್ಥೆ ನಿಮಾರ್ಣ ಮಾಡಿರುವ ಈ ಅವ್ಯವಸ್ಥೆ ತಂಗುದಾಣಗಳ ಸ್ಥಿತಿ ಇದೇ ರೀತಿ ಇದೆ. ಬಳಕೆಗೆ ಬಾರದ ತಂಗುದಾಣ ಕುಡುಕರ ಅಡ್ಡೆಯಾಗಿ ರೂಪುಗೊಂಡಿದೆ. ಒಟ್ಟಾರೆಯಾಗಿ ಸಾರ್ವಜನಿಕರ ಹಣ ಹೇಗೆ ದುರ್ಬಳಕೆಯಾಗಿದೆ ಎಂಬುದಕ್ಕೆ ಈ ಹುಣಸನಹಳ್ಳಿ ತಂಗುದಾಣವೇ ಸಾಕ್ಷಿಯಾಗಿದೆ. ಕಳಪೆ ಕಾಮಗಾರಿ ಮಾಡಿರುವ ಕೆಆರ್ಐಡಿಎಲ್ ಸಂಸ್ಥೆಗೆ ಯಾವುದೇ ಗುತ್ತಿಗೆ ನೀಡದ ಸಂಸ್ಥೆಯನ್ನು ಬ್ಲಾಕ್ ಪಟ್ಟಿಗೆ ಸೇರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.