ಸಿಂಧನೂರಿನ ವಿರಿಂಚಿ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಚಿತ್ರ ಕಲಾವಿದ ರಾಮೇಶಪ್ಪ ಸಿರಗುಪ್ಪ ಅವರ ಏಕವ್ಯಕ್ತಿ ಚಿತ್ರಗಳನ್ನು ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ಮಾನ್ವಿಯ ವಾಜೀದ್ ಸಾಜೀದ್, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಂಗೀತ ಕಲಾವಿದ ಬಸವರಾಜ ಮೋತಿ ವೀಕ್ಷಿಸಿದರು. 
ರಾಜ್ಯ

ಸೃಜನಾತ್ಮಕ ಮನಸ್ಸು ಕಲಾವಿದರಿಗೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ವಾಜೀದ್ ಸಾಜೀದ್ ಹೇಳಿಕೆ
ಸಿಂಧನೂರು: ಕಲಾವಿದರಿಗೆ ತಪಸ್ಸು, ವಿಭಿನ್ನವಾಗಿ ಆಲೋಚಿಸುವ ಮನಸ್ಸು ಇರಬೇಕು ಎಂದು ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯ ಮಾನ್ವಿಯ ವಾಜೀದ್ ಸಾಜೀದ್ ಹೇಳಿದರು. 
ನಗರದ ವಿರಿಂಚಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಚಿತ್ರ ಕಲಾವಿದ ರಾಮೇಶಪ್ಪ ಸಿರಗುಪ್ಪ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
 ವೈವಿಧ್ಯಮಯ ನಿಸರ್ಗಗಳ ದೃಶ್ಯ ಸೇರಿದಂತೆ ಹಲವು ವಿಧದ ಹೃದಯ ಮಿಡಿಯುವ ಚಿತ್ರಗಳನ್ನು ಸೆರೆ ಹಿಡಿಯುವ ಶ್ರದ್ಧೆ ಮತ್ತು ನೈಪುಣ್ಯತೆ ಕಲಾವಿದರಲ್ಲಿ ಇರಬೇಕು ಎಂದರು. 
ವಿರಿಂಚಿ ಆರ್ಟ್ ಗ್ಯಾಲರಿ ಮುಖ್ಯಸ್ಥ ಶಿವಾನಂದ ಸಾತಿಹಾಳ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಳ್ಳಾರಿ ಜಿಲ್ಲೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಂಗೀತ ಕಲಾವಿದ ಬಸವರಾಜ ಮೋತಿ, ಕಲಾವಿದರಾದ ಅನಗವಾಡಿ ನಬಿ ನದಾಫ್, ರಾಮೇಶಪ್ಪ ಸಿರಗುಪ್ಪ, ರಾಜಾಸಾಬ್, ಮಹೇಂದ್ರ, ರವಿ ನಾಯಕ, ರವೀಂದ ್ರ, ವೀರೇಶ, ಎನ್.ಕೆ.ನಾಗರಾಜ, ಮನೋಜ್ ಕುಮಾರ ಇದ್ದರು.
 ಕಲಾವಿದ ರಾಮೇಶಪ್ಪ ಸಿರಗುಪ್ಪ ಕುಂಚದಲ್ಲಿ ಅರಳಿದ ಸಹಜ ಪ್ರಕೃತಿಯ ವರ್ಣ ಚಿತ್ರಗಳು ನೋಡುಗರನ್ನು ಆಕರ್ಷಿಸಿದವು.