A couple united in court 
ರಾಜ್ಯ

ಅದಾಲತ್​ನಲ್ಲಿ ಒಂದಾದ ದಂಪತಿ

ಹುಳಿಯಾರು: ಚಿಕ್ಕನಾಯಕನಹಳ್ಳಿ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿಯಿಂದ ಆಯೋಜಿಸಲಾಗಿದ್ದ 'ರಾಷ್ಟ್ರೀಯ ಲೋಕ ಅದಾಲತ್​'ನಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶ ಎಸ್​.ಟಿ.ಸತೀಶ್​ ಅವರ ಸಮ್ಮುಖದಲ್ಲಿ ವಿಚ್ಛೇದನ ಹಂತದಲ್ಲಿದ್ದ ಕೇದಿಗೆಹಳ್ಳಿಯ ದಂಪತಿಗಳು ಒಂದಾಗುವ ಮೂಲಕ ಗಮನ ಸೆಳೆದರು.
ಪ್ರಕರಣದ ಹಿನ್ನೆಲೆ: ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ದಾವೆ ಹೂಡಿದ್ದ ಶೈಲಾ ಮತ್ತು ರಾಘವೇಂದ್ರ ದಂಪತಿಗಳ ನಡುವಿನ ಮನಸ್ತಾಪವನ್ನು ನ್ಯಾಯಾಧೀಶರು ಹಾಗೂ ವಕೀಲರು ತಿಳಿಹೇಳುವಲ್ಲಿ ಯಶಸ್ವಿಯಾದರು. ನ್ಯಾಯಾಧೀಶ ಸತೀಶ್​ ಅವರು ದಂಪತಿಗಳಿಗೆ ತಿಳಿವಳಿಕೆ ನೀಡಿ, ಪರಸ್ಪರ ಒಪ್ಪಿಗೆಯ ಮೇರೆಗೆ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.
ವಕೀಲ ಟಿ.ರವೀಂದ್ರಕುಮಾರ್​ ಅವರು ದಂಪತಿಗಳಿಗೆ ಮನವೊಲಿಸಿ, ಅವರನ್ನು ಮತ್ತೆ ಒಂದು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.