ತ್ಯಾಮಗೊಂಡ್ಲು ಗ್ರಾಪಂ ಕಚೇರಿ
ಲಕ್ಷ್ಮೀಕಾಂತ್ ತ್ಯಾಮಗೊಂಡ್ಲು
ದಶಕಗಳ ಕಾಲದ ಹೋರಾಟದ ಫಲವಾಗಿ ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ತ್ಯಾಮಗೊಂಡ್ಲು ಈಗ ಆಡಳಿತಾತ್ಮಕ ಗೊಂದಲದ ಸುಳಿಯಲ್ಲಿ ಸಿಲುಕಿದೆ. ಸರ್ಕಾರದ ವಿಭಿನ್ನ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ, ಪಟ್ಟಣ ಪಂಚಾಯಿತಿ ಕನಸು ಕಂಡಿದ್ದ ಜನತೆಗೆ ಈಗ ಹೊಸ ಆತಂಕ ಎದುರಾಗಿದೆ.
ಹೋರಾಟದ ಹಾದಿ: ಕಳೆದ 2020ರ ಸೆ.14ರಂದು "ವಿಜಯವಾಣಿ' ದಿನಪತ್ರಿಕೆಯಲ್ಲಿ ಪ್ರಕಟವಾದ "ನನಸಾಗದ ಪಟ್ಟಣ ಪಂಚಾಯಿತಿ ಕನಸು' ಎಂಬ ವರದಿ ಬಳಿಕ ಎಚ್ಚೆತ್ತ ಗ್ರಾಮಸ್ಥರು, ಸತತ ಎರಡು ವರ್ಷಗಳ ಕಾಲ ಹೋರಾಟ ನಡೆಸಿದ್ದರು. ಮೂರು ಬಾರಿ ಗ್ರಾಪಂ ಚುನಾವಣೆ ಬಹಿಷ್ಕರಿಸಿ ಪಟ್ಟು ಹಿಡಿದಿದ್ದರು. ಇದರ ಫಲವಾಗಿ, ಹಾಲಿ ಶಾಸಕರ ಭರವಸೆಯಂತೆ ಎರಡು ತಿಂಗಳ ಹಿಂದಷ್ಟೇ ಸರ್ಕಾರ ತ್ಯಾಮಗೊಂಡ್ಲುವನ್ನು ಪಟ್ಟಣ ಪಂಚಾಯಿತಿ ಎಂದು ೂಷಿಸಿ ರಾಜ್ಯಪತ್ರದಲ್ಲಿ ಆದೇಶ ಹೊರಡಿಸಿತ್ತು. ಒಂದೆಡೆ ನಗರಾಭಿವೃದ್ಧಿ ಇಲಾಖೆ ತ್ಯಾಮಗೊಂಡ್ಲುವನ್ನು ಪಪಂ ಎಂದು ಘೋಷಿಸಿದ್ದರೆ, ಇನ್ನೊಂದೆಡೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ರ್ನಿಣಯ ಆಯೋಗವು ಇತ್ತೀಚೆಗೆ ಪ್ರಕಟಿಸಿದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ತ್ಯಾಮಗೊಂಡ್ಲುವನ್ನು ಇನ್ನೂ 'ಗ್ರಾಮೀಣ' ಕ್ಷೇತ್ರವಾಗಿಯೇ ಪರಿಗಣಿಸಿದೆ. ಜ.21ರಂದು ಹೊರಬಿದ್ದ ಆಯೋಗದ ವರದಿಯಲ್ಲಿ ತ್ಯಾಮಗೊಂಡ್ಲುವನ್ನು ಜಿಪಂ ಮತ್ತು ತಾಪಂ ಕ್ಷೇತ್ರವನ್ನಾಗಿ ತೋರಿಸಿರುವುದು ತಾಂತ್ರಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೋಟಗೊಂಡನಹಳ್ಳಿ, ಮಣ್ಣೆ ಹಾಗೂ ಶಿವಗಂಗೆ ಜಿಪಂ ಕ್ಷೇತ್ರಗಳು ನೂತನವಾಗಿ ಅಸ್ತಿತ್ವಕ್ಕೆ ಬಂದಿವೆ. ಸೋಂಪುರ, ಟಿ.ಬೇಗೂರು, ಸೋಲೂರು ಮತ್ತು ತ್ಯಾಮಗೊಂಡ್ಲು ಕ್ಷೇತ್ರಗಳು ಈ ಹಿಂದೆಯೇ ಅಸ್ತಿತ್ವದಲ್ಲಿದ್ದವು. ಹಲವಾರು ಗ್ರಾಮ ಪಂಚಾಯಿತಿಗಳು ವಿವಿಧ ೇತ್ರಗಳಿಗೆ ಅದಲು ಬದಲಾಗಿರುವುದರಿಂದ ಸ್ಥಳಿಯ ರಾಜಕೀಯ ಹಾಗೂ ಆಡಳಿತಾತ್ಮಕ ಸಮೀಕರಣಗಳಲ್ಲಿಯೂ ಬದಲಾವಣೆ ಉಂಟಾಗಿದೆ.
ಇಲಾಖೆಗಳ ನಡುವಿನ ಭಿನ್ನತೆ: ಪಟ್ಟಣ ಪಂಚಾಯಿತಿ ನಗರಾಡಳಿತ ಇಲಾಖೆಗೆ ಸೇರುತ್ತದೆ. ಆದರೆ ಜಿಪಂ ಮತ್ತು ತಾಪಂಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಳಪಡುತ್ತವೆ. ಸೀಮಾ ರ್ನಿಣಯ ಆಯೋಗಕ್ಕೆ ಪಪಂ ೂಷಣೆಯ ಮಾಹಿತಿ ತಲುಪದ ಕಾರಣ ಈ ಎಡವಟ್ಟು ಸಂಭವಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಗಡಿ ರ್ನಿಣಯದ ವ್ಯತ್ಯಾಸ: ಪಪಂ ಘೋಷಣೆಯಾದಾಗ ಕಳಲುಟ್ಟ, ದೊಡ್ಡಬೆಲೆ ಮತ್ತು ಮಣ್ಣೆ ಗ್ರಾಪಂನ ಕೆಲವು ಹಳ್ಳಿಗಳನ್ನು ತ್ಯಾಮಗೊಂಡ್ಲು ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ ಆಯೋಗದ ವರದಿಯಲ್ಲಿ ಈ ಹಳ್ಳಿಗಳ ವಿಂಗಡಣೆ ಹಳೆಯ ಮಾದರಿಯಲ್ಲೆ ಇರುವುದು ರಾಜಕೀಯ ಮತ್ತು ಆಡಳಿತಾತ್ಮಕ ಸಮೀಕರಣಗಳನ್ನು ಏರುಪೇರು ಮಾಡಿದೆ.
ಈ ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ತ್ಯಾಮಗೊಂಡ್ಲು ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಬೇಕಿದೆ. ಇಲ್ಲದಿದ್ದರೆ ಮುಂಬರುವ ಚುನಾವಣೆ ಮತ್ತು ಅನುದಾನ ಹಂಚಿಕೆಯಲ್ಲಿ ಕಾನೂನು ಸಂರ್ಷ ಏರ್ಪಡುವುದು ನಿಶ್ಚಿತ.
ನಗರಾಭಿವೃದ್ಧಿ ಇಲಾಖೆ ಮತ್ತು ಸೀಮಾ ರ್ನಿಣಯ ಆಯೋಗದ ಪ್ರಕಟಣೆಗಳಿಂದ ಗೊಂದಲ ಉಂಟಾಗಿದೆ. ಅಧಿಕಾರಿಗಳು ಈ ಬಗ್ಗೆ ತಣ ಸ್ಪಷ್ಟನೆ ನೀಡಬೇಕು. ಜನತೆಯನ್ನು ಕತ್ತಲೆಯಲ್ಲಿ ಇಡಬಾರದು.
ನಮ್ಮ ರಾಜಕೀಯ ಹಿತಾಸಕ್ತಿ ಬಲಿ ಕೊಟ್ಟು ಪಟ್ಟಣದ ಅಭಿವೃದ್ಧಿಗಾಗಿ ಹೋರಾಡಿದೆವು. ಈಗ ಇಲಾಖೆಗಳ ಗೊಂದಲದಿಂದ ಪಪಂ ಭವಿಷ್ಯವೇ ಪ್ರಶ್ನಾರ್ಹವಾಗಿದೆ.