ರಾಜ್ಯ

ದೇಶದ ರಾಜಕೀಯಕ್ಕೆ ದಿಕ್ಸೂಚಿ

ಪ್ರಮುಖ ಮುಖ್ಯಾಂಶಗಳು

  • ಪಂಚರಾಜ್ಯ ಚುನಾವಣೆ ರಿಸಲ್ಟ್
ಆಳಂದ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವೂ ದೇಶದ ರಾಜಕೀಯಕ್ಕೆ ದಿಕ್ಸೂಚಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ ಹರ್ಷಾನಂದ ಗುತ್ತೇದಾರ್​ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ನೇತೃತ್ವ ಎನ್​ಡಿಎ ಅಭೂತಪೂರ್ವ ಸಾಧನೆ ಮಾಡಿದೆ. ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಬಿಜೆಪಿ ನೆಲೆ ಮತ್ತಷ್ಟು ವಿಸ್ತಾರಗೊಂಡಿದೆ. ಈ ಫಲಿತಾಂಶವು ಬಿಜೆಪಿ ಶಕ್ತಿಯನ್ನು ವೃದ್ಧಿಸಿದೆ. ದೇಶದ ಜನತೆ ಭಾರತೀಯ ಜನತಾ ಪ ಹಾಗೂ ಎನ್​ಡಿಎ ಜತೆ ಇದ್ದಾರೆ ಎಂಬುದು ಸಾಬೀತು ಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವಕ್ಕೆ ಸಿಕ್ಕ ಮನ್ನಣೆಯಾಗಿದೆ ಬಣ್ಣಿಸಿದ್ದಾರೆ.