ನಾಟಿ ಕೋಳಿ ಬಾಡೂಟ ಮುಗಿಬಿದ್ದ ಜನರು
ನೆಲಮಂಗಲ : ಕರ್ನಾಟಕದ ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಯಶಸ್ವಿಯಾಗಿ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ನೆಲಮಂಗಲದ ನಗರಸಭೆ ವ್ಯಾಪ್ತಿಯ ಭಕ್ತನಪಾಳ್ಯದಲ್ಲಿ ಅಹಿಂದ ಯುವ ಒಕ್ಕೂಟ ನೇತೃತ್ವದಲ್ಲಿ ಮಂಗಳವಾರ 5 ಸಾವಿರಕ್ಕೂ ಹೆಚ್ಚು ಮಂದಿಗೆ ನಾಟಿ ಕೋಳಿ ಔತಣಕೂಟ ಆಯೋಜಿಸಲಾಗಿತ್ತು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಮಾಜಿ ಸಿಎಂ ದೇವರಾಜು ಅರಸು ಅವರ ರೀತಿಯಲ್ಲೇ ಸಿಎಂ ಸಿದ್ದರಾಮಯ್ಯ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು, ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಹೆಚ್ಚು ಅವಧಿಯ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ರಾಜ್ಯದ ಇತಿಹಾಸ ಪುಟದಲ್ಲಿ ಸೇರಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಆಸ್ತಿಯಾಗಿದ್ದು, ಸುಮಾರು 16 ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿಗಳು ನನ್ನ ಕ್ಷೇತ್ರದ ಅಭಿವೃದ್ಧಿಗೂ 1 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ. ಅಭಿಮಾನಿಗಳು ಬಾಡೂಟ ಆಯೋಜನೆ ಮಾಡಿರುವುದು ಸಂತಸದ ಸಂಗತಿ ಎಂದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಬ್ರಿಜೇಶ್ ಕಾಳಪ್ಪ, ಇನ್ಸೈಡ್ ಸಂಸ್ಥೆ ಸಂಸ್ಥಾಪಕ ವಿನಯ್ಕುಮಾರ್ ಸಾಯಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ನಾಗೇಂದ್ರ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಸದಸ್ಯ ಸಿ.ಪ್ರದಿಪ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್ಗೌಡ, ಮಾಜಿ ಸದಸ್ಯ ಬಿ.ಜಿ.ವಾಸು, ಟಿಎಪಿಸಿಎಂಎಸ್ ನಿರ್ದೇಶಕ ನರಸಿಂಹಮೂರ್ತಿ, ಗ್ಯಾರಂಟಿ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡ ಭಕ್ತನಪಾಳ್ಯ ಮುನಿರಾಜು, ಖಲೀಂ ಉಲ್ಲಾ, ಬಿ.ಡಿ.ಗಂಗಾಧರ್, ಕಲ್ಯಾಣ್ಕುಮಾರ್, ನಾಗರಾಜು, ಶಶಿರಾಜ್, ಮಹಾಲಿಂಗಪ್ಪ, ರೇವಣ್ಣ, ರಾಜಣ್ಣ, ನರಸಿಂಹಮೂರ್ತಿ, ಜಗದೀಶ್, ಶಿವಕುಮಾರ್ ಇದ್ದರು.
ಮುಗಿಬಿದ್ದ ಜನರು : ನಾಟಿ ಕೋಳಿ ಬಾಡೂಟ ಆಯೋಜನೆ ಮಾಡಿದ್ದರಿಂದ ಸಾಕಷ್ಟು ಮಂದಿ ಜಮಾಯಿಸಿದ್ದು, ಏಕಾಕಾಲಕ್ಕೆ ಊಟ ಆರಂಭಿಸಿದ ಕಾರಣ ಜನ ಮುಗಿಬಿದ್ದರು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.