ಕುಣಿಗಲ್​ Hosadiganta Programme ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಕೆ.ಎನ್​.ಚೆಲುವಮೂರ್ತಿ, ಅಧ್ಯಾಪಕ ಡಾ.ಸಿ.ಆರ್​.ಮನೋಜ್​, ಕೆ.ರವಿಕುಮಾರ್​, ರೇವಣ್ಣಸಿದ್ದೇಶ್ವರ ಇದ್ದರು.  
ರಾಜ್ಯ

ಸತತ ಪರಿಶ್ರಮದಿಂದ ಭವಿಷ್ಯ ಉಜ್ವಲ Hosadiganta Programme

ತುಮಕೂರು ಡೆಸ್ಕ್
ಕುಣಿಗಲ್: ತರಗತಿಯಲ್ಲಿ ದೊರೆಯುವ ಜ್ಞಾನ ಬಳಸಿ, ಶಿಕ್ಷಕರ ಮಾರ್ಗದರ್ಶನದಿಂದ ಪ್ರತಿಭಾವಂತರಾಗಿ, Hosadiganta Programme ಪಾಲಕರು ನಿಮ್ಮ ಮೇಲೆ ಕಟ್ಟಿದ ಆಶಾಗೋಪುರವನ್ನು ನನಸಾಗಿಸಿ, ಬದುಕಿಗೊಂದು ಗುರಿಯಿಟ್ಟು, ಸತತ ಪರಿಶ್ರಮ, ನಿರಂತರ ಅಧ್ಯಯನದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಮೋಹನ್​ ಚಂದ್ರಗುತ್ತಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿಯಿಂದ ಹಮ್ಮಿಕೊಂಡಿದ್ದ ಹೊಸದಿಗಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐಕ್ಯೂಎಸಿ ಸಂಚಾಲಕ ಡಾ.ಟಿ.ಎನ್​.ನರಸಿಂಹಮೂರ್ತಿ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಹೊಸದಿಗಂತ ಕಾರ್ಯಕ್ರಮವು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಅಣಿಗೊಳಿಸುವ 6 ದಿನಗಳ ಕಾರ್ಯಕ್ರಮವಾಗಿದೆ. ಆದುದರಿಂದ ವಿದ್ಯಾರ್ಥಿಗಳು ಕಲಿಕೆಯತ್ತ ಚಿತ್ತ ಹರಿಸಿ, ಸಮಯ ಪಾಲನೆ, ಆತ್ಮವಿಶ್ವಾಸದ ಭರವಸೆಯಿಂದ ಮುನ್ನಡೆಯಿರಿ. ಕನಸುಗಳಿಲ್ಲದ ಜೀವನ ವ್ಯರ್ಥ, ಆದುದರಿಂದ ಕನಸುಕಟ್ಟಿ ಅಧ್ಯಯನಶೀಲರಾಗಿ ಎಂದರು.
ಪ್ರಾಂಶುಪಾಲ ಪ್ರೊ.ರಾಮಾಂಜನಪ್ಪ ಮಾತನಾಡಿ, ಪ್ರೌಢ ಶಿಕ್ಷಣ ಮುಗಿಸಿ ಪದವಿ ಅಧ್ಯಯನಕ್ಕೆ ಬರುವ ಹದಿಹರೆಯದ ಯುವಜನರು, ಸಾಮಾಜಿಕ ವ್ಯಾಮೋಹಗಳಿಗೆ ಬಲಿಯಾಗದೇ ತಮ್ಮ ಜವಾಬ್ದಾರಿ ಅರಿಯಿರಿ ಎಂದರು.
ಡಾ.ರಾಧಾಕೃಷ್ಣ, ಡಾ.ರಾಧಾ, ಅನಿತಲಕ್ಷಿ$್ಮ, ಡಾ.ಮೋಹನಕುಮಾರ್​, ಸತೀಶಕುಮಾರ್​, ಐ.ಕೆ.ರಂಜನ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಜಿ.ನಾಗಮಣಿ ಇದ್ದರು.