ಹೊಸಕೋಟೆ ತಾಲೂಕು ನೆಲವಾಗಿಲು ಡೇರಿ ವಾರ್ಷಿಕ ಮಹಾಸಭೆಯಲ್ಲಿ ಸಂಕ್ಕೆ ಹೆಚ್ಚು ಹಾಲು ಪೂರೈಸಿದ ಸತೀಶ್, ಅನಸೂಯ, ಅರ್ಚನಾ ಅವರನ್ನು ಸನ್ಮಾನಿಸಿ, ಉಡುಗೊರೆ ನೀಡಲಾಯಿತು. ಡಾ.ಸಂತೋಷ್ ಕುಮಾರ್, ಟಿ.ಎಂ.ಆನಂದ್, ಎಂಪಿಸಿಎಸ್ ಅಧ್ಯಕ್ಷ ಎನ್.ವಿ.ಗಿರೀಶ್, ಉಪಾಧ್ಯೆ ಭಾರತಿ, ಮುಖ್ಯ ಕಾರ್ಯನಿರ್ವಾಹಕ ಜಯಣ್ಣ, ಹಾಲು ಪರೀಕ್ಷಕ ಎನ್.ಡಿ. ಅನಿಲ್ಕುಮಾರ್, ಸಹಾಯಕ ಎನ್.ಎಂ.ಚಂದ್ರಪ್ಪ ಇದ್ದರು.
ನಂದಗುಡಿ : ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ ಎಂದು ಬಮುಲ್ ಹೊಸಕೋಟೆ ಶಿಬಿರದ ಪಶು ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್ ಹೇಳಿದರು.
ಹೋಬಳಿಯ ನೆಲವಾಗಿಲು ಹಾಲು ಉತ್ಪಾದಕರ ಸಹಕಾರ ಸಂದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಪೌಷ್ಟಿಕಾಂಶ ಭರಿತ ಆಹಾರ ನೀಡುವುದಲ್ಲದೆ ವೈಜ್ಞಾನಿಕ ಪದ್ಧತಿಯಲ್ಲಿ ಮೇವು ಬಳಸಬೇಕು. ಸ್ವಚ್ಛತೆಯಿಂದ ಕೆನೆಭರಿತ ಹಾಲು ಉತ್ಪಾದಿಸಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದರು.
ಹೊಸಕೋಟೆ ಶಿಬಿರದ ಮಾರ್ಗ ವಿಸ್ತಾರಣಾಧಿಕಾರಿ ಟಿ.ಎಂ.ಆನಂದ್ ಮಾತನಾಡಿ, ಸಂವು 2025&26ನೇ ಸಾಲಿನಲ್ಲಿ ಒಟ್ಟು 14.77 ಲಕ್ಷ ರೂ. ವ್ಯಾಪಾರದಲ್ಲಿ 6.64 ಲಕ್ಷ ರೂ. ಲಾಭ ಗಳಿಸಿದೆ. ರೈತರಿಗೆ ಈ ಬಾರಿ ಶೇ.2.77 ರೂ. ಬೋನಸ್ ಸಹ ಸಿಗಲಿದೆ ಎಂದು ತಿಳಿಸಿದರು.
ಹಾಲು ಸರಬರಾಜು ಮಾಡುವ ರೈತರ ಮಕ್ಕಳಾದ ಚಂದನ, ಭಾವನಾ, ಗೌತಮಿ, ದಕ್ಷ, ಸಿಂಚನಾ, ಲಿಖಿತ್ಗೌಡ, ಅಮೂಲ್ಯ, ತರುಣ್ಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್ಎಫ್ಸಿಎಸ್ ನಿರ್ದೇಶಕ ಎನ್.ಡಿ.ರಮೇಶ್, ತಾಪಂ ಮಾಜಿ ಸದಸ್ಯ ಆರ್.ಬೀರಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಚಂದ್ರಮೋಹನ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ಜಿ.ಮೂರ್ತಿ, ಮಾಜಿ ಅಧ್ಯಕ್ಷ ವಿಜಯದೇವ, ಎಸ್.ಸಿ. ಬೀರಪ್ಪ, ಎಸ್.ಸಿ.ನಾರಾಯಣಸ್ವಾವಿ, ಟಿಎಪಿಸಿಎಂಎಸ್ ಮಾಜಿ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಎನ್.ಸಿ.ಮೂರ್ತಿ, ಎನ್.ಎಂ.ಸತೀಶ್, ರಾಕೇಶ್, ಎನ್.ಜೆ.ನಾಗೇಶ್, ನಂಜುಂಡೇಶ್ವರ, ಎಸ್.ಎನ್.ಬೀರೇಶ್, ಎನ್.ಎಂ.ಕಿರಣ್, ಎಸ್.ಆರ್.ಬೀರೇಶ್ಕುಮಾರ್, ಎನ್.ಕೆ.ದೇವೇಗೌಡ, ಉಮಾ, ಎನ್.ಆರ್.ಮಂಜುಳಾ, ಮುನಿರಾಮಯ್ಯ ಇದ್ದರು.