ರಬಕವಿ-ಮಹಿಷವಾಡಗಿ ಸೇತುವೆ 8ನೇ ಪಿಲ್ಲರ್ ಸಜ್ಜುಗೊಳಿಸುತ್ತಿರುವ ಕಾರ್ಮಿಕರು. 
ರಾಜ್ಯ

8ನೇ ಪಿಲ್ಲರ್ ಬುನಾದಿ ಅಳವಡಿಕೆ ಯಶಸ್ವಿ

ಪ್ರಮುಖ ಮುಖ್ಯಾಂಶಗಳು

  • ರಬಕವಿ- ಮಹಿಷವಾಡಗಿ ಸೇತುವೆ
  • ಅಧಿಕಾರಿಗಳು, ನೀರಾವರಿ ತಜ್ಞರ ಸಮ್ಮುಖ
ರಬಕವಿ/ಬನಹಟ್ಟಿ: ರಬಕವಿ-ಮಹಿಷವಾಡಗಿ ಸೇತುವೆಯ 8ನೇ ಪಿಲ್ಲರ್ ಅಳವಡಿಕೆ ಕಾಮಗಾರಿ ಸುದೈವಶಾತ್ ಲಕಾರಿಯಾಗಿದ್ದು, ರಾತ್ರಿ 11ಕ್ಕೆ 8ನೇ ಪಿಲ್ಲರ್‌ಗೆ ಸಿಮೆಂಟ್ ಕಾಂಕ್ರೀಟ್ ಹಾಕುವ ಪ್ರಕ್ರಿಯೆ ಸಲವಾಗಿದೆ.
ನಗರಸಭೆ ಸೇರಿ ತಾಲೂಕಿನ ಅನೇಕ ಗ್ರಾಮಗಳು ಕೃಷ್ಣಾ ನದಿ ಅವಲಂಬಿತ ನಾಗರಿಕರು ಶುಕ್ರವಾರ ರಾತ್ರಿ ಸ್ಥಳೀಯ ನೀರಾವರಿ ತಜ್ಞರು, ಎ.ಸಿ., ತಹಸೀಲ್ದಾರ್ ಹಾಗೂ ಪ್ರಮುಖರ ಸಭೆ ನಡೆಸಿ ನದಿ ನೀರನ್ನು ಹೊರಹಾಕಿ ನದಿ ಪಾತ್ರ ಖಾಲಿಯಾಗಿಸಿ ರಬಕವಿ-ಮಹಿಷವಾಡಗಿ ಸೇತುವೆ 7 ಮತ್ತು 8ನೇ ಪಿಲ್ಲರ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದರು.
ಎಸಿ ಶ್ವೇತಾ ಬೀಡಿಕರ ಅವರು ಸರ್ವ ನಾಗರಿಕರ ಒಪ್ಪಿಗೆ ಮೇರೆಗೆ ನೀರು ಖಾಲಿಗೊಳಿಸುವ ನಿರ್ಣಯ ಕೈಗೊಂಡರೆ ಮೇಲಧಿಕಾರಿಗಳೊಡನೆ ಚರ್ಚಿಸಿ, ಸದಾವಕಾಶ ಕಲ್ಪಿಸುವ ಭರವಸೆಯನ್ನೂ ನೀಡಿದ್ದರು. ಹೀಗೇನಾದರೂ ಆದರೆ ಈ ಪ್ರದೇಶಗಳ ನಾಗರಿಕರು ಹನಿ ನೀರಿಗೂ ತತ್ವಾರ ಪಡುವ ಭೀತಿಯಲ್ಲಿದ್ದರು.
ಆದರೆ ಪವಾಡ ಸದೃಶವೆಂಬಂತೆ ಕಳೆದ 8 ದಿನಗಳಿಂದ ಪಿಲ್ಲರ್‌ಗಳ ಪ್ರದೇಶದ ಸುತ್ತ ಝರಿ ನೀರು ಸಂಗ್ರಹವಾಗದಂತೆ ಕರಿ ಮಣ್ಣು ಹಾಕಿ ನೀರು ಸತತ ಹೊರ ಹಾಕುವಲ್ಲಿ ವಿಲವಾಗಿದ್ದ ಅಭಿಯಂತರು ಹಾಗೂ ಕಾರ್ಮಿಕರು ಶುಕ್ರವಾರ ಬೆಳಗ್ಗೆಯಿಂದ ಎರಡು ಬೃಹತ್ ಜನರೇಟರ್ ಬಳಸಿ ಆರು ಪೈಪ್‌ಗಳ ಮೂಲಕ ಕಾಮಗಾರಿ ನಡೆಸುವ ಗುಂಡಿಯಿಂದ ನೀರು ತೆರವುಗೊಳಿಸಿದರಲ್ಲದೇ, ರಾತ್ರಿ 11ಕ್ಕೆ 8ನೇ ಪಿಲ್ಲರ್‌ಗೆ ಸಿಮೆಂಟ್ ಕಾಂಕ್ರೀಟ್ ಹಾಕಿದರು.
ಇದರಿಂದಾಗಿ ನದಿ ಪಾತ್ರದಲ್ಲಿನ ನೀರು ಕಡಿತಗೊಳಿಸುವ ತಜ್ಞರ ನಿರ್ಧಾರವನ್ನು ಕೈಬಿಟ್ಟಿದ್ದು ನದಿ ಪಾತ್ರದ ಜನತೆ ನಿರಾಳವಾಗಿದ್ದಾರೆ. ಸದ್ಯ 8ನೇ ಪಿಲ್ಲರ್‌ನ ಮೇಲಿನ ಸಿಮೆಂಟ್ ಕಾಂಕ್ರೀಟ್ ಹಾಕಿದ ಬಳಿಕ 7ನೇ ಪಿಲ್ಲರ್‌ನ ಬುನಾದಿ ಭದ್ರತೆ ಬಗ್ಗೆ ಅಭಿಯಂತರು ಖಾತ್ರಿ ಪಡಿಸಿಕೊಳ್ಳಲಿದ್ದು, ಎರಡು ದಿನಗಳಲ್ಲಿ ಇದೇ ರೀತಿಯಲ್ಲಿ ಪಿಲ್ಲರ್ ಅಳವಡಿಕೆ ಆರಂಭಗೊಳ್ಳಲಿದ್ದು, ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.