ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಬೆಂಗಳೂರುಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ವತಿಯಿಂದ 2026ನೇಸಾಲಿನಲ್ಲಿ ಸೇವೆಯಿಂದ ನಿವೃತ್ತಿಯಾಗಿರುವಅಧಿಕಾರಿ ಹಾಗೂ ಸಿಬ್ಬಂದಿಗಳನ್ನುಸನ್ಮಾನಿಸಲಾಯಿತು.
7ನೇಡಿಪೋ ಆವರಣದಲ್ಲಿ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿ ಬಿಎಂಟಿಸಿಅಧ್ಯಕ್ಷ ವಿ.ಎಸ್.ಆರಾಧ್ಯ ಹಾಗೂವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಶಿವಕುಮಾರ್ನಿವೃತ್ತ ಅಧಿಕಾರಿ ಹಾಗೂಸಿಬ್ಬಂದಿಗಳನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿಸಂಸ್ಥೆಯ ಮುಖ್ಯ ವಿಭಾಗಾಧಿಕಾರಿಗಳು,ಅಧಿಕಾರಿಗಳು,ಸಿಬ್ಬಂದಿ ಹಾಗೂನಿವೃತ್ತ ನೌಕರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿಮಾತನಾಡಿದ ಬಿಎಂಟಿಸಿ ಅಧ್ಯಕ್ಷವಿ.ಎಸ್.ಆರಾಧ್ಯ,ಸಂಸ್ಥೆಯಅಭಿವೃದ್ಧಿ,ಸಾರ್ವಜನಿಕರವಿಶ್ವಾಸ ಗಳಿಕೆ ಹಾಗೂ ಗುಣಮಟ್ಟದಸಾರಿಗೆ ಸೇವೆ ಒದಗಿಸುವಲ್ಲಿನಿವೃತ್ತ ನೌಕರರ ಶ್ರಮ,ಸಮರ್ಪಣೆ ಮತ್ತುನಿಷ್ಠೆ ಮಹತ್ವದ ಪಾತ್ರ ವಹಿಸಿದೆ.ಅವರ ನಿವೃತ್ತಜೀವನದ ಹೊಸ ಅಧ್ಯಾಯ ಆರಂಭವಾಗಿದ್ದು,ಆರೋಗ್ಯ ಹಾಗೂನೆಮ್ಮದಿಯ ಜೀವನವನ್ನು ನಡೆಸಲಿಎಂದು ಶುಭ ಹಾರೈಸಿದರು.
2026ನೇಸಾಲಿನಲ್ಲಿ ಬಿಎಂಟಿಸಿಯಲ್ಲಿಒಟ್ಟು 438 ಅಧಿಕಾರಿಹಾಗೂ ಸಿಬ್ಬಂದಿಗಳು ನಿವೃತ್ತಿಯಾಗಲಿದ್ದು,ಇದರಲ್ಲಿ 426ಸಿಬ್ಬಂದಿ ಮತ್ತು12 ಅಧಿಕಾರಿಗಳುಸೇರಿದ್ದಾರೆ.ಮೇ 31ರಂದು 60 ವರ್ಷಪೂರ್ಣಗೊಳಿಸಿ ನಿವೃತ್ತರಾಗಿರುವ87 ಅಧಿಕಾರಿಹಾಗೂ ಸಿಬ್ಬಂದಿಗಳನ್ನು ಈಸಂದರ್ಭದಲ್ಲಿ ಸನ್ಮಾನಿಸಲಾಯಿತು.