ಶಹಾಪುರ ತಾಲೂಕಿನ ಉಕ್ಕನಾಳ ಸೀಮಾಂತರದ ಚಾಮನಾಳ ತಾಂಡಾದ ಲೋಹಿತ ರಾಠೋಡ ಹೊಲದಲ್ಲಿ ಸೋಮವಾರ ರಾತ್ರಿ ಜಪ್ತಿ ಮಾಡಿದ ಅಕ್ಕಿ ಚೀಲಗಳು.
ಶಹಾಪುರ : ಬಡವರಿಗೆ ವಿತರಿಸಬೇಕಾದ ಸರ್ಕಾರದ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲ ಭೇದಿಸಿದ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಗೋಗಿ ಠಾಣೆ ಪೊಲೀಸರು ತಾಲೂಕಿನ ಉಕ್ಕನಾಳ ಸೀಮಾಂತರದಲ್ಲಿರುವ ಚಾಮನಾಳ ತಾಂಡಾದ ಬಳಿ ಸೋಮವಾರ ರಾತ್ರಿ ಜಂಟಿ ದಾಳಿ ನಡೆಸಿ ೨೦೨ ಚೀಲಗಳಲ್ಲಿ ಸಂಗ್ರಹಿಸಿದ್ದ ೮೧.೭೫ ಕ್ವಿಂಟಾಲï ಪಡಿತರ ಅಕ್ಕಿ ಜಪ್ತಿ ಮಾಡಿz್ದÁರೆ.
ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಸಂಜೀವ, ನಿಂಗಪ್ಪ ಕವಲಿ ನೇತೃತ್ವದ ತಂಡ, ಪಿಎಸ್‌ಐ ಚಂದ್ರನಾಥ ಹಾಗೂ ಪೊಲೀಸ್ ಸಿಬ್ಬಂದಿಯೊAದಿಗೆ ಚಾಮನಾಳ ತಾಂಡಾದ ಲೋಹಿತ ಕಿಷನ್ ರಾಠೋಡ ಅವರ ಹೊಲದ ಗೋದಾಮಿನ ಮೇಲೆ ದಾಳಿ ನಡೆಸಿತು.
ಅಽಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಅಲ್ಲಿದ್ದ ಲೋಹಿತ ರಾಠೋಡ ಹೊಲದ ಪರಾರಿಯಾಗಿz್ದÁನೆ. ಬಳಿಕ ಗೋದಾಮಿನ ಪರಿಶೀಲನೆ ನಡೆಸಿದಾಗ ವಿವಿಧ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿದ್ದ ೨೦೨ ಚೀಲಗಳ ಪಡಿತರ ಅಕ್ಕಿ ಪತ್ತೆಯಾಗಿದೆ. ಒಟ್ಟು ೮,೧೭೫ ಕೆಜಿ ಅಕ್ಕಿ ಇರುವುದಾಗಿ ದೃಢಪಟ್ಟಿದೆ. ಜಪ್ತಿ ಮಾಡಿದ ಅಕ್ಕಿಯ ಅಂದಾಜು ೧.೮೯ ಲಕ್ಷ ರೂ. ಎಂದು ಅಽಕಾರಿಗಳು ತಿಳಿಸಿz್ದÁರೆ.
ಈ ಸಂಬAಧ ಗೋಗಿ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಕಲಂ ೩ ಮತ್ತು ೭ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಅಕ್ರಮ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿz್ದÁರೆ.