80 grams of gold seized from Khadeema
ಬಂಗಾರಪೇಟೆ: ಮನೆಗಳಲ್ಲಿ ಚಿನ್ನಾಭರಣ ಕದ್ದ ಆರೋಪಿಯನ್ನು ಬಂಧಿಸಿರುವ ಬಂಗಾರಪೇಟೆ ಪೊಲೀಸರು, ಸುಮಾರು 12. 50 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಕೆಜಿಎ್ನ ಆಂಡ್ರಸನ್ಪೇಟೆಯ 2ನೇ ಬ್ಲಾಕ್ ನಿವಾಸಿ ನರೇಶ್ (40) ಬಂಧಿತ.
ಮಾ.3ರ ರಾತ್ರಿ ಬಾಬಾನಗರದ ನಿವಾಸಿ ಮಾಧವಿ ಅವರ ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ 80 ಗ್ರಾಂ ಚಿನ್ನಾಭರಣ ಮತ್ತು 70 ಸಾವಿರ ರೂ. ನಗದು ಕಳವು ಮಾಡಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿತ್ತು.
ಆರಕ್ಷಕ ನಿರೀಕ್ಷಕ ರವಿಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ಸತ್ಯ ಬಾಯ್ಬಿಟ್ಟಿದ್ದಾನೆ.
ರಾರ್ಬಟ್ಸನ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿಯೂ 40 ಗ್ರಾಂ ಚಿನ್ನ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇನ್ಸ್ಪೆಕ್ಟರ್ ರವಿಕುಮಾರ್, ಸಿಬ್ಬಂದಿ ಮಹೇಂದ್ರ ಕುಮಾರ್, ಮಂಜುನಾಥ್, ಷಹಜಹಾನ್ ನದ್ಾ, ವೇಣುಗೋಪಾಲ್, ವಿಜಯ್ಕುಮಾರ್, ಮಂಜುನಾಥ್, ಶ್ರೀನಿವಾಸ್, ಮುನೇಂದ್ರ ಕಾರ್ಯಚರಣೆಯಲ್ಲಿದ್ದರು.