ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಡಾ.ನವೀನ್ ಕುಮಾರ್ ನೇತೃತ್ವದ ತಂಡ ಕೇಬಲ್ ಕಳ್ಳರನ್ನು ಬಂಧಿಸಿರುವುದು. ಪಿಎಸ್ಐಗಳಾದ ನಾರಾಯಣಸ್ವಾಮಿ, ವಿನಾಯಕ ಪಾಟೀಲ್, ನಾಗರಾಜು. ಎ.ಎಸ್.ಐ ರಾಧಾಕೃಷ್ಣ, ರಂಗನಾಥ್, ಸುನಿಲ್ ಭಾಸಗಿ, ಮಂಜುನಾಥ, ಚಂದ್ರಶೇಖರ್, ನಟರಾಜು, ಸಚಿನ್ ಉಪ್ಪಾರ, ಪ್ರವಿಣ್ ಮತ್ತಿತ್ತರರು ಇದ್ದರು.
ದೊಡ್ಡಬಳ್ಳಾಪುರ : ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಆಲ್ಯೂಮಿನಿಯಂ ಕೇಬಲ್ ಕಳವು ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, 8 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪಶ್ಚಿಮ ಬಂಗಾಳದ ಸುಮನ್ ಎಸ್.ಕೆ., ಕಾಮರೂಲ್ ಮಂಡಲ್, ಸುಮಾನ್, ಮಜೀದ್ ಶೇಖ್, ಸಾಯಿದುಲ್, ಆಸ್ಸಾಂನ ಮಿಜಾನೂರ್ ರೆಹಮಾನ್, ಛತ್ತೀಸ್ಗಢದ ಅಮಿತ್ ಹಾಲ್ದಾರ್, ರೋಹಿತ್ ಹಾಲ್ದಾರ್ ಎಂದು ಗುರುತಿಸಲಾಗಿದೆ.
ಪ್ರಕರಣಗಳ ತನಿಖೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಎಂ.ವಿ. ನಿರ್ದೇಶನದ ಮೇರೆಗೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವೆಂಕಟೇಶ್ ಪ್ರಸನ್ನ ಹಾಗೂ ಲ್ಮನಾರಾಯಣ, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ ಮಾರ್ಗದರ್ಶನದಲ್ಲಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಾ. ಎಂ.ಬಿ.ನವೀನ್ ಕುಮಾರ್ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ.
ಬಂಧಿತರಿಂದ ಸುಮಾರು 10 ಲಕ್ಷ ರೂ. ಮೌಲ್ಯದ ಆಲ್ಯೂಮಿನಿಯಂ ಕೇಬಲ್ ತುಂಡುಗಳು ಹಾಗೂ 5 ಲಕ್ಷ ರೂ. ಮೌಲ್ಯದ ವಾಹನ ಸೇರಿದಂತೆ ಒಟ್ಟು 15 ಲಕ್ಷ ರೂ. ಮೌಲ್ಯದ ಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಎಂ.ವಿ. ಶ್ಲಾಸಿದ್ದಾರೆ.