- ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ
ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಕಳೆದ ಮೂರು ದಿನಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 7,87,920 (ಶೇ.33.22) ಮತದಾರರಿಗೆ ಗಣತಿ ನಮೂನೆ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಜೂನ್ 16ರಂತೆ ಜಿಲ್ಲೆಯಾದ್ಯಂತ 23,71,542 ಮತದಾರರಿದ್ದು, ಈ ಪೈಕಿ ಜುಲೈ 2ರವರೆಗೆ ಶೇ. 33.22 ರಷ್ಟು ಮತದಾರರಿಗೆ ಬಿಎಲ್ಓಗಳು ಮನೆ, ಮನೆಗೆ ತೆರಳಿ ಗಣತಿ ನಮೂನೆ ವಿತರಿಸಿದ್ದಾರೆ. ಈವರೆಗೆ 8,318 (ಶೇ.0.35) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. 1,152 (ಶೇ.0.05) ಮತದಾರರು ಸ್ವಯಂ ಪ್ರೇರಿತವಾಗಿ ಆನ್ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿಎಲ್ಓಗಳು ಮನೆ&ಮನೆ ಭೇಟಿ ನೀಡಿದಾಗ ಈವರೆಗೆ 11 ಮತದಾರರು ಸ್ಥಳಾಂತರಗೊಂಡಿರುವುದು ಮತ್ತು 60 ಜನ ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ.
ಈ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಬಿಎಲ್ಓಗಳು ಮನೆ ಮನೆಗೆ ತೆರಳಿ ಮತದಾರರಿಗೆ ಗಣತಿ ಅರ್ಜಿ ನೀಡಿ ಅವರಿಂದ ಪುನ- ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟಲೈಸ್ ಮೂಲಕ ಭರ್ತಿ ಮಾಡಲು ಜುಲೈ 29ರವರೆಗೆ ಅವಕಾಶ ಕಲ್ಪಿಸಲಾಗಿದೆ.