7ಮಂದಿ ದರೋಡೆಕೋರರ ಬಂಧನ robbers
ಬೂದಿಕೋಟೆ: ಬಂಗಾರಪೇಟೆ ತಾಲೂಕು ತುಮಟಗೆರೆ ಬಳಿ ಜನವರಿಯಲ್ಲಿ ನಡೆದಿದ್ದ 8 ಲಕ್ಷ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೂದಿಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ 7 ಮಂದಿ ಆರೋಪಿಗಳನ್ನು ಬಂಧಿಸಿ, 6.50 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 4 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. robbers
ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಹರೀಶ್ ಕುಮಾರ್ (32), ಕೊಡಗುರ್ಕಿಯ ನಾಗರಾಜ (29), ಕುಮಾರಸ್ವಾಮಿ (36 ) ಬೆಂಗಳೂರಿನ ರಾಜಾಜಿನಗರ ನಿವಾಸಿಗಳಾದ ಜಗದೀಶ್ (37), ವಿಜಯ್ (29 ), ಜೀವನ್ (27), ಶ್ರೀನಿವಾಸಪುರ ತಾಲೂಕು ಸುನಕಲ್ ಗ್ರಾಮದ ರಾಜೇಂದ್ರ (28 ) ಬಂಧಿತರು.
ಜ.9ರಂದು ರಾತ್ರಿ 11.30ರ ಸುಮಾರಲ್ಲಿ ಗೊಲ್ಲಹಳ್ಳಿಯ ನವೀನ್ಕುಮಾರ್ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಅಡ್ಡಗಟ್ಟಿದ ದರೋಡೆಕೋರರು ಅವರಿಂದ 8 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ, ಡಿವೈಎಸ್ಪಿ ವಿ.ಲಕ್ಷ$್ಮಯ್ಯ ಮಾರ್ಗದರ್ಶನದಲ್ಲಿ ಕಾಮಸಮುದ್ರ ವೃತ್ತದ ಸಿಪಿಐ (ಪ್ರಭಾರ) ಮಾರ್ಕೊಂಡಯ್ಯ ಹಾಗೂ ಕಾಮಸಮುದ್ರ ಪಿಎಸ್ಐ ಕಿರಣ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.